ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೇಕಿದೆ ECG Telemedicine ಯಂತ್ರ | ಮಂಗಳೂರಿನ ಖ್ಯಾತ ಹೃದಯತಜ್ಞ ಡಾ.ಪದ್ಮನಾಭ ಕಾಮತ್‌ ಅಭಿಮತ |

Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಸುಪಾಸಿನಲ್ಲಿ ECG Telemedicine ಯಂತ್ರ ಸ್ಥಾಪಿಸುವ ಹಾಗೂ ತುರ್ತು ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಅಗತ್ಯ ಇದೆ. ಈ ಬಗ್ಗ ಧಾರ್ಮಿಕ ದತ್ತಿ ಸಚಿವಾಲಯ ಗಮನಹರಿಸಬೇಕು ಎಂದು ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಅನೇಕ ಜನರಿಗೆ ಚಿಕಿತ್ಸೆ ನೀಡುವ ಹಾಗೂ ಉಚಿತ ವೈದ್ಯಕೀಯ ಸಲಹೆಯನ್ನು ನೀಡುತ್ತಾ ಸಾಮಾಜಿಕ ಚಟುವಟಿಕೆ ಅದರಲ್ಲೂ ಹೃದ್ರೋಗಕ್ಕೆ ಸಂಬಂಧಿಸಿ ಗ್ರಾಮೀಣ ಭಾಗದಲ್ಲೂ ಜಾಗೃತಿ ಮೂಡಿಸುತ್ತಿರುವ ಮಂಗಳೂರಿನ ಡಾ.ಪದ್ಮನಾಭ ಕಾಮತ್‌ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಕ್ಷಣವೇ ECG Telemedicine ಯಂತ್ರ ಸ್ಥಾಪಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಯಾತ್ರಾರ್ಥಿಗೆ ಹೃದಯಾಘಾತವಾಯಿತು .ತಕ್ಷಣವೇ ಅಂಬುಲೆನ್ಸ್‌ ಮೂಲಕ ಮಂಗಳೂರು ತಲುಪುವಷ್ಟರಲ್ಲೇ ಕಾಲ ಮೀರಿ ಹೋಗಿತ್ತು . ಅವರು ತಮ್ಮ ಸ್ವಂತ ವಾಹನದಲ್ಲಿ ದೇಗುಲಕ್ಕೆ ಬಂದಿದ್ದರು. ದೇವಸ್ಥಾನಕ್ಕೆ ಬಂದಿರುವ ವ್ಯಕ್ತಿಗೆ ಈ ರೀತಿ ಆದಾಗ ತಕ್ಷಣಕ್ಕೆ ವ್ಯವಸ್ಥೆ ನೀಡುವ ಆರೋಗ್ಯ ವ್ಯವಸ್ಥೆ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟರು.

Advertisement
Advertisement

ಇಂದು ಪುನೀತ್ ರಾಜಕುಮಾರ್ ಅವರ ಹುಟ್ಟಿದ ದಿನ . ಇವರ ಸ್ಮರಣಾರ್ಥ CAD ಮಂಗಳೂರು ಸಂಸ್ಥೆಯ ವತಿಯಿಂದ ಸುಬ್ರಹ್ಮಣ್ಯ ದೇವಸ್ಥಾನದ ಪ್ರಸ್ತಾಪಿತ ಹೆಲ್ತ್ ಸೆಂಟರ್ ಗೆ ECG Telemedicine ಯಂತ್ರ ಯಂತ್ರ ಕೊಡುವ ನಿರ್ಧಾರ ಮಾಡಲಾಗಿದೆ. ಇದು ದೇವಸ್ಥಾನದ ಆವರಣದಲ್ಲೇ ಇಡಬೇಕೆಂದು ಎಂದು ಡಾ.ಪದ್ಮನಾಭ ಕಾಮತ್‌ ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೇಕಿದೆ ECG Telemedicine ಯಂತ್ರ | ಮಂಗಳೂರಿನ ಖ್ಯಾತ ಹೃದಯತಜ್ಞ ಡಾ.ಪದ್ಮನಾಭ ಕಾಮತ್‌ ಅಭಿಮತ |"

Leave a comment

Your email address will not be published.


*