2023-24ರ ದೇಶದ ಆರ್ಥಿಕ ಸಮೀಕ್ಷೆ | ಹಣದುಬ್ಬರ ಇಳಿಕೆ | ಆಶಾದಾಯಕ ಚಿತ್ರಣ ನೀಡಿದ ಸಮೀಕ್ಷೆ |

July 22, 2024
10:04 PM

2023-24ರ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಸಂಸತ್ತಿನಲ್ಲಿ ಮಂಡಿಸಿದರು. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸಿದ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಆರ್ಥಿಕ ಸಮೀಕ್ಷೆ ದಾಖಲೆಯು ಆರ್ಥಿಕತೆಯ ಸ್ಥಿತಿ ಮತ್ತು 2023-24 ರ (ಏಪ್ರಿಲ್-ಮಾರ್ಚ್) ವಿವಿಧ ಸೂಚಕಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ.ಜಿಡಿಪಿ ದರ, ಹಣಕಾಸು ಪರಿಸ್ಥಿತಿ ಇತ್ಯಾದಿ ಬಗ್ಗೆ ಆರ್ಥಿಕ ಸಮೀಕ್ಷೆ ಆಶಾದಾಯಕವೆನಿಸುವ ಚಿತ್ರಣ ನೀಡಿದೆ. ಆರ್ಥಿಕ ಬೆಳವಣಿಗೆಯ ಓಟಕ್ಕೆ ತಡೆಯಾಗಿರುವ ಕೆಲ ಅಂಶಗಳ ಬಗ್ಗೆಯೂ ಈ ಸಮೀಕ್ಷೆ ಎಚ್ಚರಿಸುವ ಕೆಲಸ ಮಾಡಿದೆ.

ದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಬೇಕಾದರೆ 2030ರವರೆಗೂ ಕೃಷಿಯೇತರ ಕ್ಷೇತ್ರದಲ್ಲಿ ಪ್ರತೀ ವರ್ಷ ಸರಾಸರಿಯಾಗಿ 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅವಶ್ಯಕತೆ ಇದೆ ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ವಿನಿಮಯ ಮೀಸಲು ಹೊಂದಿರುವ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಹೋಲಿಸಿದರೆ, ಇತ್ತೀಚೆಗೆ ಮುಗಿದ 2023-24ರ ಹಣಕಾಸು ವರ್ಷದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಅತ್ಯಧಿಕ ಏರಿಕೆಯಾಗಿದೆ ಎಂದು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ ಹೇಳಿದೆ.

2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎಂದು ಐಎಂಎಫ್, ಎಡಿಬಿ ಇತ್ಯಾದಿ ಗ್ಲೋಬಲ್ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ.ಆರ್ಥಿಕ ಸಮೀಕ್ಷೆಯು ಹಣದುಬ್ಬರದ ಬಗ್ಗೆ ತೀರಾ ಆಶಾದಾಯಕವಾಗಿಲ್ಲ. ಜಾಗತಿಕ ವಿದ್ಯಮಾನಗಳು ಮತ್ತು ಪ್ರತಿಕೂಲ ಹವಾಮಾನವು ಹಣದುಬ್ಬರದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿರುವ ಈ ವರದಿಯ ಪ್ರಕಾರ, 2024-25ರಲ್ಲಿ ಹಣದುಬ್ಬರ ದರ ಶೇ. 4.5ರಷ್ಟು ಇರಬಹುದು.

ಸಮೀಕ್ಷೆಯ ಕೆಲವು ಅಂಶಗಳು ಹೀಗಿದೆ…

  • ಜಾಗತಿಕ ಆರ್ಥಿಕ ಮುನ್ನೋಟದ ಪ್ರಕಾರ, 2023ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ದರ 3.2%ಇದೆ. ವಿವಿಧ ದೇಶಗಳಲ್ಲಿ ವಿಭಿನ್ನವಾದ ಬೆಳವಣಿಗೆ ಮಾದರಿಗಳು ಹೊರಹೊಮ್ಮಿವೆ.
  •  ಭಾರತದ ಆರ್ಥಿಕತೆಯು ಬಾಹ್ಯಸವಾಲುಗಳನ್ನು ಎದುರಿಸುವ ಹೊರತಾಗಿಯೂ 2023ರಲ್ಲಿ ನಿರ್ಮಿಸಿದ ಜಿಡಿಪಿ ಬೆಳವಣಿಗೆಯ ವೇಗ 2024 ರವರೆಗೆ ಮುಂದುವರೆಯಿತು.  2024ರಲ್ಲಿ ಭಾರತದ ನೈಜ ಜಿಡಿಪಿ 8.2%  ಬೆಳೆದಿದೆ.
  •  ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರ ಭಾರತದ ಆರ್ಥಿಕತೆಯು ಕ್ರಮಬದ್ಧ ಶೈಲಿಯಲ್ಲಿ ಚೇತರಿಸಿಕೊಂಡಿದೆ ಮತ್ತುವಿ ಸ್ತರಣೆಯಾಗಿದೆ.
  •  ಭಾರತದ ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯಗಳು 2024ರಲ್ಲಿ ಉತ್ತಮ ಪ್ರದರ್ಶನನೀಡಿವೆ.
  •  ಭಾರತೀಯ ಷೇರು ಮಾರುಕಟ್ಟೆಯ ಮಾರುಕಟ್ಟೆ ಬಂಡವಾಳ ಗಮನಾರ್ಹವಾಗಿ ಏರಿಕೆ ಕಂಡಿದೆ. ಜಿಡಿಪಿಯಲ್ಲಿ ಮಾರುಕಟ್ಟೆಯ ಬಂಡವಾಳ ಅನುಪಾತವು ವಿಶ್ವದಲ್ಲೇ 5ನೇ ಅತಿದೊಡ್ಡದಾಗಿದೆ.
  • 2024ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಇಳಿಕೆ
  •  ಅಂತರ ರಾಷ್ಟ್ರೀಯ ಸಂಘರ್ಷಗಳು ಮತ್ತು ಆಹಾರ ವೆಚ್ಚಗಳ ಮೇಲೆ ಪರಿಣಾಮ ಬೀರುವ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಗ್ರಾಹಕ ಸರಕುಗಳು ಮತ್ತು ಸೇವೆಗಳು ಭಾರತದಲ್ಲಿ ಬೆಲೆ ಏರಿಕೆಯನ್ನುಎದುರಿಸಿದವು.
  •  ಜಾಗತಿಕ ಇಂಧನ ಬೆಲೆ ಸೂಚ್ಯಂಕವು 2024ರ ಹಣಕಾಸು ವರ್ಷದಲ್ಲಿ ತೀವ್ರ ಕುಸಿತವನ್ನು ಅನುಭವಿಸಿದೆ. ಮತ್ತೊಂದೆಡೆ, ಕೇಂದ್ರ ಸರ್ಕಾರವು ಎಲ್ಪಿಜಿ, ಪೆಟ್ರೋಲ್‌,  ಡೀಸೆಲ್‌ ಬೆಲೆ  ಕಡಿತವನ್ನುಘೋಷಿಸಿತು. ಇದರ ಪರಿಣಾಮವಾಗಿ, ಚಿಲ್ಲರೆ ಇಂಧನ ಹಣದುಬ್ಬರವು ಹಣಕಾಸು ವರ್ಷ 24 ರಲ್ಲಿಕಡಿಮೆ ಮಟ್ಟದಲ್ಲಿಉಳಿಯಿತು.
  •  ಕಳೆದ ಎರಡು ವರ್ಷಗಳಿಂದ ಆಹಾರ ಹಣದುಬ್ಬರವು ಜಾಗತಿಕ ಮಟ್ಟದಲ್ಲಿ ಕಳವಳಕಾರಿಯಾಗಿದೆ. ಭಾರತದಲ್ಲಿ, ಹವಾಮಾನ ವೈಪರೀತ್ಯಗಳು, ಕ್ಷೀಣಿಸಿದ ಜಲಾಶಯಗಳ ನೀರಿನಮಟ್ಟ ಮತ್ತು ಬೆಳೆಹಾನಿಯಿಂದಾಗಿ ಕೃಷಿಕ್ಷೇತ್ರವು ಸವಾಲುಗಳನ್ನುಎದುರಿಸಿತು, ಇದುಕೃಷಿಉತ್ಪಾದನೆ ಮತ್ತುಆಹಾರ ಬೆಲೆಗಳ ಮೇಲೆ ಪರಿಣಾಮಬೀರಿತು. ಇದರ ಪರಿಣಾಮವಾಗಿ, ಆಹಾರ ಹಣದುಬ್ಬರವು ಹಣಕಾಸು ವರ್ಷ 23 ರಲ್ಲಿಶೇಕಡಾ 6.6 ರಷ್ಟಿತ್ತು ಮತ್ತು ಹಣಕಾಸು ವರ್ಷ 24 ರಲ್ಲಿ ಶೇಕಡಾ 7.5 ಕ್ಕೆಏರಿತು.
  •  ಹವಾಮಾನ ಬದಲಾವಣೆ ಮತ್ತು ಇಂಧನ ಪರಿವರ್ತನೆ: ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ
March 13, 2026
10:24 PM
by: ದ ರೂರಲ್ ಮಿರರ್.ಕಾಂ
ಕೃಷಿ ಗುರಿ ಕೇವಲ ‘ಆಹಾರ ಭದ್ರತೆ’ ಅಲ್ಲ, ಅದನ್ನೂ ಮೀರಿದ ಕೃಷಿ ಚಿಂತನೆ ಅಗತ್ಯ
March 13, 2026
10:02 PM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ | ಭಾರತೀಯ ಟಯರ್ ಉದ್ಯಮಕ್ಕೆ ತುರ್ತು ನೆರವಿನ ಬೇಡಿಕೆ
March 13, 2026
8:47 PM
by: ದ ರೂರಲ್ ಮಿರರ್.ಕಾಂ
ಗೃಹ ಬಳಕೆ ಗ್ಯಾಸ್ ಕೊರತೆ ಇಲ್ಲ : ವದಂತಿಗಳಿಗೆ ಕಿವಿಗೊಡಬೇಡಿ — ಸಮಸ್ಯೆ ಇದ್ದರೆ ಈ ಸಹಾಯವಾಣಿ ಸಂಪರ್ಕಿಸಿ
March 13, 2026
8:08 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror