Advertisement
MIRROR FOCUS

2023-24ರ ದೇಶದ ಆರ್ಥಿಕ ಸಮೀಕ್ಷೆ | ಹಣದುಬ್ಬರ ಇಳಿಕೆ | ಆಶಾದಾಯಕ ಚಿತ್ರಣ ನೀಡಿದ ಸಮೀಕ್ಷೆ |

Share

2023-24ರ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಸಂಸತ್ತಿನಲ್ಲಿ ಮಂಡಿಸಿದರು. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸಿದ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಆರ್ಥಿಕ ಸಮೀಕ್ಷೆ ದಾಖಲೆಯು ಆರ್ಥಿಕತೆಯ ಸ್ಥಿತಿ ಮತ್ತು 2023-24 ರ (ಏಪ್ರಿಲ್-ಮಾರ್ಚ್) ವಿವಿಧ ಸೂಚಕಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ.ಜಿಡಿಪಿ ದರ, ಹಣಕಾಸು ಪರಿಸ್ಥಿತಿ ಇತ್ಯಾದಿ ಬಗ್ಗೆ ಆರ್ಥಿಕ ಸಮೀಕ್ಷೆ ಆಶಾದಾಯಕವೆನಿಸುವ ಚಿತ್ರಣ ನೀಡಿದೆ. ಆರ್ಥಿಕ ಬೆಳವಣಿಗೆಯ ಓಟಕ್ಕೆ ತಡೆಯಾಗಿರುವ ಕೆಲ ಅಂಶಗಳ ಬಗ್ಗೆಯೂ ಈ ಸಮೀಕ್ಷೆ ಎಚ್ಚರಿಸುವ ಕೆಲಸ ಮಾಡಿದೆ.

Advertisement
Advertisement
Advertisement
Advertisement

ದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಬೇಕಾದರೆ 2030ರವರೆಗೂ ಕೃಷಿಯೇತರ ಕ್ಷೇತ್ರದಲ್ಲಿ ಪ್ರತೀ ವರ್ಷ ಸರಾಸರಿಯಾಗಿ 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅವಶ್ಯಕತೆ ಇದೆ ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ವಿನಿಮಯ ಮೀಸಲು ಹೊಂದಿರುವ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಹೋಲಿಸಿದರೆ, ಇತ್ತೀಚೆಗೆ ಮುಗಿದ 2023-24ರ ಹಣಕಾಸು ವರ್ಷದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಅತ್ಯಧಿಕ ಏರಿಕೆಯಾಗಿದೆ ಎಂದು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ ಹೇಳಿದೆ.

Advertisement

2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎಂದು ಐಎಂಎಫ್, ಎಡಿಬಿ ಇತ್ಯಾದಿ ಗ್ಲೋಬಲ್ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ.ಆರ್ಥಿಕ ಸಮೀಕ್ಷೆಯು ಹಣದುಬ್ಬರದ ಬಗ್ಗೆ ತೀರಾ ಆಶಾದಾಯಕವಾಗಿಲ್ಲ. ಜಾಗತಿಕ ವಿದ್ಯಮಾನಗಳು ಮತ್ತು ಪ್ರತಿಕೂಲ ಹವಾಮಾನವು ಹಣದುಬ್ಬರದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿರುವ ಈ ವರದಿಯ ಪ್ರಕಾರ, 2024-25ರಲ್ಲಿ ಹಣದುಬ್ಬರ ದರ ಶೇ. 4.5ರಷ್ಟು ಇರಬಹುದು.

ಸಮೀಕ್ಷೆಯ ಕೆಲವು ಅಂಶಗಳು ಹೀಗಿದೆ…

Advertisement
  • ಜಾಗತಿಕ ಆರ್ಥಿಕ ಮುನ್ನೋಟದ ಪ್ರಕಾರ, 2023ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ದರ 3.2%ಇದೆ. ವಿವಿಧ ದೇಶಗಳಲ್ಲಿ ವಿಭಿನ್ನವಾದ ಬೆಳವಣಿಗೆ ಮಾದರಿಗಳು ಹೊರಹೊಮ್ಮಿವೆ.
  • ಭಾರತದ ಆರ್ಥಿಕತೆಯು ಬಾಹ್ಯಸವಾಲುಗಳನ್ನು ಎದುರಿಸುವ ಹೊರತಾಗಿಯೂ 2023ರಲ್ಲಿ ನಿರ್ಮಿಸಿದ ಜಿಡಿಪಿ ಬೆಳವಣಿಗೆಯ ವೇಗ 2024 ರವರೆಗೆ ಮುಂದುವರೆಯಿತು.  2024ರಲ್ಲಿ ಭಾರತದ ನೈಜ ಜಿಡಿಪಿ 8.2%  ಬೆಳೆದಿದೆ.
  • ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರ ಭಾರತದ ಆರ್ಥಿಕತೆಯು ಕ್ರಮಬದ್ಧ ಶೈಲಿಯಲ್ಲಿ ಚೇತರಿಸಿಕೊಂಡಿದೆ ಮತ್ತುವಿ ಸ್ತರಣೆಯಾಗಿದೆ.
  • ಭಾರತದ ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯಗಳು 2024ರಲ್ಲಿ ಉತ್ತಮ ಪ್ರದರ್ಶನನೀಡಿವೆ.
  • ಭಾರತೀಯ ಷೇರು ಮಾರುಕಟ್ಟೆಯ ಮಾರುಕಟ್ಟೆ ಬಂಡವಾಳ ಗಮನಾರ್ಹವಾಗಿ ಏರಿಕೆ ಕಂಡಿದೆ. ಜಿಡಿಪಿಯಲ್ಲಿ ಮಾರುಕಟ್ಟೆಯ ಬಂಡವಾಳ ಅನುಪಾತವು ವಿಶ್ವದಲ್ಲೇ 5ನೇ ಅತಿದೊಡ್ಡದಾಗಿದೆ.
  • 2024ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಇಳಿಕೆ
  • ಅಂತರ ರಾಷ್ಟ್ರೀಯ ಸಂಘರ್ಷಗಳು ಮತ್ತು ಆಹಾರ ವೆಚ್ಚಗಳ ಮೇಲೆ ಪರಿಣಾಮ ಬೀರುವ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಗ್ರಾಹಕ ಸರಕುಗಳು ಮತ್ತು ಸೇವೆಗಳು ಭಾರತದಲ್ಲಿ ಬೆಲೆ ಏರಿಕೆಯನ್ನುಎದುರಿಸಿದವು.
  • ಜಾಗತಿಕ ಇಂಧನ ಬೆಲೆ ಸೂಚ್ಯಂಕವು 2024ರ ಹಣಕಾಸು ವರ್ಷದಲ್ಲಿ ತೀವ್ರ ಕುಸಿತವನ್ನು ಅನುಭವಿಸಿದೆ. ಮತ್ತೊಂದೆಡೆ, ಕೇಂದ್ರ ಸರ್ಕಾರವು ಎಲ್ಪಿಜಿ, ಪೆಟ್ರೋಲ್‌,  ಡೀಸೆಲ್‌ ಬೆಲೆ  ಕಡಿತವನ್ನುಘೋಷಿಸಿತು. ಇದರ ಪರಿಣಾಮವಾಗಿ, ಚಿಲ್ಲರೆ ಇಂಧನ ಹಣದುಬ್ಬರವು ಹಣಕಾಸು ವರ್ಷ 24 ರಲ್ಲಿಕಡಿಮೆ ಮಟ್ಟದಲ್ಲಿಉಳಿಯಿತು.
  • ಕಳೆದ ಎರಡು ವರ್ಷಗಳಿಂದ ಆಹಾರ ಹಣದುಬ್ಬರವು ಜಾಗತಿಕ ಮಟ್ಟದಲ್ಲಿ ಕಳವಳಕಾರಿಯಾಗಿದೆ. ಭಾರತದಲ್ಲಿ, ಹವಾಮಾನ ವೈಪರೀತ್ಯಗಳು, ಕ್ಷೀಣಿಸಿದ ಜಲಾಶಯಗಳ ನೀರಿನಮಟ್ಟ ಮತ್ತು ಬೆಳೆಹಾನಿಯಿಂದಾಗಿ ಕೃಷಿಕ್ಷೇತ್ರವು ಸವಾಲುಗಳನ್ನುಎದುರಿಸಿತು, ಇದುಕೃಷಿಉತ್ಪಾದನೆ ಮತ್ತುಆಹಾರ ಬೆಲೆಗಳ ಮೇಲೆ ಪರಿಣಾಮಬೀರಿತು. ಇದರ ಪರಿಣಾಮವಾಗಿ, ಆಹಾರ ಹಣದುಬ್ಬರವು ಹಣಕಾಸು ವರ್ಷ 23 ರಲ್ಲಿಶೇಕಡಾ 6.6 ರಷ್ಟಿತ್ತು ಮತ್ತು ಹಣಕಾಸು ವರ್ಷ 24 ರಲ್ಲಿ ಶೇಕಡಾ 7.5 ಕ್ಕೆಏರಿತು.
  • ಹವಾಮಾನ ಬದಲಾವಣೆ ಮತ್ತು ಇಂಧನ ಪರಿವರ್ತನೆ: ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಎಲ್ಲಾ ಕೃಷಿ ಆದಾಯವನ್ನು ಬ್ಯಾಂಕ್‌ ಉಳಿತಾಯ ಖಾತೆ ಮೂಲಕ ವ್ಯವಹಾರ ಮಾಡಬೇಕು ಏಕೆ..?

ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…

13 hours ago

ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…

14 hours ago

ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ

ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…

14 hours ago

ಕಾರವಾರದಲ್ಲಿ ಎ.18-22 ವರೆಗೆ ಕರಾವಳಿ ಉತ್ಸವ

ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…

14 hours ago

ಕೋಲಾರ ಜಿಲ್ಲೆ | ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ

ಕೋಲಾರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು…

14 hours ago

ತೆಂಗು ಉತ್ಪಾದನೆ | ಭಾರತ ವಿಶ್ವದಲ್ಲೇ ಪ್ರಥಮ

ತೆಂಗು ಬೆಳೆ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದ್ದು, ವಿಶ್ವದಲ್ಲೇ…

14 hours ago