ದಿನಾ ಪುಸ್ತಕದ ಭಾರ ಹೊತ್ತು ಶಾಲೆ #School ಗೆ ಸಾಗುವ ಮಕ್ಕಳನ್ನು ಕಂಡರೆ ಅಯ್ಯೋ ಅನ್ನುತ್ತೆ. ನಮ್ಮ ಕಾಲದಲ್ಲಿ ಶಾಲಾ ಬ್ಯಾಗ್ ಇಷ್ಟೆಲ್ಲಾ ಭಾರ ಇರಲಿಲ್ಲ ಎಂದು ಗೊಣಗುತ್ತಾ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಡಿಜಿಟಲ್ ಯುಗದಲ್ಲಿ ಇಷ್ಟೆಲ್ಲಾ ಪುಸ್ತಕ ಯಾಕಪ್ಪಾ ಎಂದೂ ಅನೇಕರು ಕೇಳುತ್ತಿದ್ದರು. ಹಲವು ವರ್ಷಗಳಿಂದ ಶಿಕ್ಷಣ ಇಲಾಖೆ ಬ್ಯಾಗ್ ತೂಕ ಇಳಿಸಲು ಅನೇಕ ಯೋಜನೆಗಳನ್ನು ಕೈಗೊಂಡಿದೆಯಾದರು ಬ್ಯಾಗ್ ನ ಹೊರೆ ಮಾತ್ರ ಕಡಿಮೆಯಾಗಲಿಲ್ಲ. ಇದೀಗ ಮತ್ತೆ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ #SchoolBag ತೂಕ ಇಳಿಸುವ ಕುರಿತು ಶಿಕ್ಷಣ ಇಲಾಖೆ ಹೊಸ ನಿರ್ಧಾರ ಕೈಗೊಂಡಿದೆ.
Center for Child And Law,NLSUI ಸಹಯೋಗದೊಂದಿಗೆ ಚರ್ಚೆ ಮಾಡುವ ಮೂಲಕ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್ ಹೊರೆ ಇಳಿಸುವ ಪ್ರಯತ್ನ ಮಾಡಲಾಗುತ್ತಿದೆ. DSERT ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ. ವರದಿಯಲ್ಲಿ ವಿಧ್ಯಾರ್ಥಿಗಳು ಅವರ ದೇಹದ ತೂಕದ ಶೇ 10 ರಿಂದ 15ರಷ್ಟು ತೂಕದ ಶಾಲಾ ಬ್ಯಾಗ್ ತೆಗೆದುಕೊಂಡು ಹೋಗಬಹುದು ಎಂದು ಹೇಳಲಾಗುತ್ತಿದೆ.
Advertisement
ತಜ್ಞರ ಶಿಫಾರಸ್ಸು ಆಧರಿಸಿ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದೆ. ತರಗತಿ 1-2 – (1.5 ರಿಂದ 2 ಕಿ.ಗ್ರಾಂ), ತರಗತಿ 3-5 (2 ರಿಂದ 3 ಕಿ.ಗ್ರಾಂ), ತರಗತಿ 6-8 (3 ರಿಂದ 4 ಕಿ.ಗ್ರಾಂ), ತರಗತಿ 9-10 (4 ರಿಂದ 5 ಕಿ.ಗ್ರಾಂ) ತೂಕವನ್ನು ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಬ್ಬರಿಗೂ ಇದು ಸಹಾಯವಾಗಲಿದ್ದು ಖುಷಿ ತರಬಹುದು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement