#Education | ಶಿಕ್ಷಣ ವಂಚಿತ ಕುರಿಗಾಹಿ ಬಾಲಕ ಮರಳಿ ಶಾಲೆಗೆ | ಬಾಲಕನ ಭವಿಷ್ಯಕ್ಕೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

September 12, 2023
2:17 PM
ಶಾಲೆ ಬಿಟ್ಟು ಕುರಿ ಕಾಯುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಸಾಪುರ ಗ್ರಾಮದ ಶಿಕ್ಷಣ ವಂಚಿತ 11 ವರ್ಷದ ಬಾಲಕ ಯೋಗೇಶ್‌ನನ್ನು ಅಧಿಕಾರಿಗಳು ಮರಳಿ ಶಾಲೆಗೆ ಕರೆತಂದಿದ್ದಾರೆ.

ಜಗತ್ತು ಬದಲಾಗಿದೆ.. ಚಂದ್ರ ಲೋಕ, ಸೂರ್ಯ ಲೋಕಕ್ಕೆ ವಿಜ್ಞಾನಿಗಳು ಕಾಲಿಟ್ಟಿದ್ದಾರೆ. ಈಗಂತೂ ಶಿಕ್ಷಣವೇ Education ಜಗತ್ತು. ಇಂಥ ಕಾಲದಲ್ಲೂ ಮಕ್ಕಳು  ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರೆ ನಂಬುತ್ತೀರಾ..?  ಹೌದು ನಂಬಲೇಬೇಕು.. ಇದಕ್ಕೆ ಕಾರಣ ಬಡತನ. ಶಿಕ್ಷಣ ಇಲ್ಲದ ಬಡ ತಂದೆ ತಾಯಿ. ಇಲ್ಲೋಬ್ಬ ಬಾಲಕ ತನ್ನ ತಂದೆ ತಾಯಿಯ ಅಸಾಯಕತೆಗೆ ಬಲಿಯಾಗಿ ಕುರಿ ಕಾಯಲು ಹೋಗಿ ಶಿಕ್ಷಣದಿಂದ ವಂಚಿತನಾಗಿದ್ದ. ಆದರೆ ಈಗ ಮರಳಿ ಶಾಲೆಗೆ ಹೋಗುತ್ತಿದ್ದಾನೆ.

Advertisement
Advertisement

ಶಾಲೆ ಬಿಟ್ಟು ಕುರಿ ಕಾಯುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಸಾಪುರ ಗ್ರಾಮದ ಶಿಕ್ಷಣ ವಂಚಿತ 11 ವರ್ಷದ ಬಾಲಕ ಯೋಗೇಶ್‌ನನ್ನು ಅಧಿಕಾರಿಗಳು ಮರಳಿ ಶಾಲೆಗೆ ಕರೆತಂದಿದ್ದಾರೆ. ಯೋಗೇಶ್‌ನ ಪೋಷಕರು ಬಡತನದ ಬೇಗೆಯಿಂದ ಬಳಲಿದ್ದು, ಕಳೆದ 2 ವರ್ಷಗಳಿಂದ ಯೋಗೇಶ್‌ನನ್ನು ಒತ್ತಾಯ ಪೂರ್ವಕವಾಗಿ ಶಾಲೆ ಬಿಡಿಸಿ ಕುರಿ ಕಾಯಲು ಕಳುಹಿಸುತ್ತಿದ್ದರು. ಇದನ್ನು ಗಮನಿಸಿದ ಚಳ್ಳಕೆರೆಯ ಮಹೇಂದ್ರ ಎಂಬುವವರು ಈ ಬಗ್ಗೆ ಟ್ವೀಟ್ (X) ಮಾಡಿ ಮುಖ್ಯಮಂತ್ರಿ ಕಚೇರಿಯ ಗಮನ ಸೆಳೆದಿದ್ದರು.

ಈ ಟ್ವೀಟ್(ಎಕ್ಸ್) ಮಾಡಿದ ಒಂದೇ ದಿನದಲ್ಲಿ ಬಾಲಕನನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಪೋಷಕರ ಮನವೊಲಿಸಿ ಮರಳಿ ಶಾಲೆಗೆ ಕರೆತಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಅವರು ಟ್ವೀಟ್(ಎಕ್ಸ್) ಮಾಡಿದ್ದು, ಬಾಲ್ಯದಲ್ಲಿ ನಾನು ಸಹ ಶಿಕ್ಷಣದಿಂದ ವಂಚಿತನಾಗಿದ್ದೆ. ರಾಜಪ್ಪ ಎಂಬ ಮೇಷ್ಟ್ರು ನನಗೆ ಐದನೇ ತರಗತಿಗೆ ದಾಖಲಾತಿ ಮಾಡಿಸಿದ್ದರು ಎಂದು ಬರೆದುಕೊಂಡಿದ್ದಾರೆ.

ಅಂದು ನನಗೆ ಶಿಕ್ಷಣ ಸಿಕ್ಕಿದ್ದರಿಂದ ಇಂದು ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಗಿದೆ. ಮರಳಿ ಶಿಕ್ಷಣದತ್ತ ಮುಖಮಾಡಿದ ಬಾಲಕ ಯೋಗೇಶನ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದ್ದಾರೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 28-05-2025 | ಮೇ. 31ರಿಂದ ಕಡಿಮೆಯಾಗಿ ಜೂನ್ 3 ರ ತನಕ ಸಾಮಾನ್ಯ ಮಳೆ |
May 28, 2025
2:27 PM
by: ಸಾಯಿಶೇಖರ್ ಕರಿಕಳ
ಶಶಿ ಆದಿತ್ಯ ಯೋಗ, ಈ 5 ರಾಶಿಗೆ ಬೇಡವೆಂದರೂ ಲಾಭ..!
May 28, 2025
11:04 AM
by: ದ ರೂರಲ್ ಮಿರರ್.ಕಾಂ
ಪ್ರವಾಸಿಗರು ಚಾರಣ, ನದಿ ತೀರ ಹೋಗದಂತೆ  ಸೂಚನೆ
May 27, 2025
10:57 PM
by: ದ ರೂರಲ್ ಮಿರರ್.ಕಾಂ
ಕೇರಳದಾದ್ಯಂತ ತೀವ್ರಗೊಂಡ ನೈಋತ್ಯ ಮಾನ್ಸೂನ್ | ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆ | ಆಲುವಾ ಶಿವ ದೇವಾಲಯದಲ್ಲಿ ನೀರು |
May 27, 2025
1:31 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group