ಕಳೆದ ಬಾರಿ ಕೆಂಪು ಮೆಣಸಿನಕಾಯಿ(Red chilli) ಬೆಲೆ(Price hike) ಗಗನಕ್ಕೇರಿತ್ತು. ಈ ಬಾರಿ ಮೆಣಸಿನಕಾಯಿ ಬೆಲೆ ಈ ವಾರ ದುಬಾರಿಯಾಗಿದೆ. 120 ರೂಪಾಯಿ ತಲುಪಿದೆ. ಕೊಳ್ಳುವಾಗಲೇ ಗ್ರಾಹಕರಿಗೆ(Customer) ಖಾರದ ಅನುಭವವಾಗುತ್ತಿದೆ. ಮಳೆ(Rain) ಇಲ್ಲದ ಕಾರಣ ದಿನನಿತ್ಯದ ವಸ್ತುಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಅಲ್ಲಲ್ಲಿ ಮಳೆಯಾಗುತ್ತಿದ್ದರು ಅದು ಬೆಲೆ ಏರಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ.
ಬಿಸಿಲಿನ ತೀವ್ರತೆಯಿಂದ ತರಕಾರಿ ದರವೂ ಹೆಚ್ಚಳವಾಗತೊಡಗಿದೆ. ತರಕಾರಿ ಬೆಳೆಯ ಮೇಲೆ ಗರಿಷ್ಠ ತಾಪಮಾನ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆ ಪೂರೈಕೆ ಕಡಿಮೆಯಾಗಿದೆ. ಇದರಿಂದಾಗಿ ಸಹಜವಾಗಿ ತರಕಾರಿ ಬೆಲೆ ಏರಿಕೆ ಕಂಡಿದೆ. ಇನ್ನು ಬೀನ್ಸ್, ಗೆಡ್ಡೆಕೋಸು, ಬೀಟ್ರೂಟ್, ಹೀರೇಕಾಯಿ ಎಲ್ಲದರ ದರವೂ ಏರಿಕೆ ಆಗಿದೆ. ಅದರ ಜೊತೆ ಹಸಿ ಮೆಣಸಿನಕಾಯಿ ರೇಟ್ ಸಹ ಹೆಚ್ಚಳವಾಗಿದೆ.
ಕಳೆದ ವಾರ 60 ರಿಂ 80 ರೂಪಾಯಿ ಇದ್ದ ಮೆಣಸಿನಕಾಯಿ ಬೆಲೆ, ಈ ವಾರ ದುಬಾರಿಯಾಗಿದೆ. 120 ರೂಪಾಯಿ ತಲುಪಿದೆ. ಕೊಳ್ಳುವಾಗಲೇ ಗ್ರಾಹಕರಿಗೆ ಖಾರವಾಗಿದೆ. ಇದೇ ರೀತಿ ರಾಜ್ಯದಲ್ಲಿ ಬಿಸಿಲು ಮುಂದುವರೆದರೆ ತರಕಾರಿ ರೇಟ್ ಇನ್ನೂ ಹೆಚ್ಚಳವಾಗಲಿದೆ. ಸದ್ಯ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಬೀನ್ಸ್ ಬೆಲೆಯು ಕೆಜಿಗೆ 250 ರೂಪಾಯಿಯ ಗಡಿ ದಾಟಿದೆ. ಉಳಿದ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ.
ಇನ್ನು ಬೆಂಗಳೂರಲ್ಲಿ ಸದ್ಯ ಉತ್ತಮವಾಗಿ ಮಳೆಯಾಗುತ್ತಿದೆ. ಕಳೆದ ವಾರ ಎಳನೀರು ಬೆಲೆಯೂ ಸಹ ಹೆಚ್ಚಾಗಿತ್ತು. ಈಗಲೂ ಕೆಲವೆಡೆ 50 ರೂಪಾಯಿಗೆ ಒಂದು ಎಳನೀರು ಇದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನ ತತ್ತರಿಸಿ ಹೋಗ್ತಾ ಇದ್ದಾರೆ. ಒಂದೆಡೆ ಬಿಸಿಲು ಸುಡ್ತಾ ಇದ್ರೆ, ಇನ್ನೊಂದೆಡೆ ಜೇಬು ಸುಡ್ತಿದೆ ಎಂದು ಹೇಳ್ತಾ ಇದ್ದಾರೆ.
ಈಗಿನಂತೆ ಎಪ್ರಿಲ್ 29 ಅಥವಾ 30ರಿಂದ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ…
ಬದುಕಿನ ಯಾನಕ್ಕೆ ಪಾಲಕರು ರೇಖೆಯನ್ನು ಎಳೆದು ತೋರಿಸುತ್ತಾರೆ. ಅದು ಭವಿಷ್ಯದ ಕೈತಾಂಗು. ರಕ್ಷಣೆ…
ಹನುಮಸಾಗರ ಗ್ರಾಮದ ಏಳು ವರ್ಷದ ಪ್ರದ್ವಿಕಾ ಕಣ್ಣಿಗೆ ಬಟ್ಟೆ ಕಟ್ಟಿ6 ನಿಮಿಷದಲ್ಲಿ 112…
ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಕುರಿತು ಅರಿವು ಮೂಡಿಸಬೇಕೆಂಬುವುದು ಜಾಥದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬರೂ…
ಜಾಗತಿಕರಣದ ಆಕ್ರಮಣದಿಂದ ಜನಸಮುದಾಯಗಳ ಪಾರಂಪರಿಕ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಪರಿಣಾಮಕಾರಿ ಪ್ರಯತ್ನ…