ದೇಹದ ಮೇಲೆ ನೋವು ನಿವಾರಕ ಮಾತ್ರೆಗಳ ಪರಿಣಾಮಗಳು | ನಿಮ್ಮ ಆರೋಗ್ಯದ ಮೇಲೆ ಕಾಡಲಿದೆ ಗಂಭೀರ ಸಮಸ್ಯೆ |

June 13, 2024
3:28 PM

ಇಂದಿನ ಜೀವನವು ತುಂಬಾ ಒತ್ತಡದಿಂದ(Stress life) ಕೂಡಿದೆ. ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ(Work) ನಿರತರಾಗಿರುತ್ತಾರೆ, ಈ ಬಿಡುವಿಲ್ಲದ ಜೀವನಶೈಲಿಯಿಂದಾಗಿ(Life style), ಯಾರಿಗೂ ಸಂಪೂರ್ಣವಾಗಿ ವಿಶ್ರಾಂತಿ(Rest) ಪಡೆಯಲು ಸಮಯವಿಲ್ಲ, ಆದ್ದರಿಂದ ಅವರು ವಿವಿಧ ರೋಗಗಳನ್ನು(Decease) ಎದುರಿಸುತ್ತಾರೆ. ಕೆಲವೊಮ್ಮೆ ಈ ನೋವುಗಳು(Pain) ಅಸಹನೀಯವಾಗುತ್ತವೆ ಮತ್ತು ಸಮಯದ ಕೊರತೆಯಿಂದಾಗಿ ನೋವು ನಿವಾರಕಗಳನ್ನು(Pain killer) ತೆಗೆದುಕೊಳ್ಳಬೇಕಾಗುತ್ತದೆ, ಇದರಿಂದ ಅವರು ತಮ್ಮ ಮುಂದಿನ ಕೆಲಸವನ್ನು ಮುಂದುವರಿಸಬಹುದು. ಆದರೆ ಈ ಮಾತ್ರೆಗಳನ್ನು(Tablet) ಸೇವಿಸುವುದರಿಂದ ಶಾಶ್ವತ ಪರಿಹಾರವಲ್ಲ. ಇದು ತಾತ್ಕಾಲಿಕವಾಗಿದೆ ಮತ್ತು ಕಲಾಂತರದಲ್ಲಿ ಈ ನೋವು ನಿವಾರಕಗಳಿಂದ ಕೆಟ್ಟ ಅಡ್ಡ ಪರಿಣಾಮಗಳನ್ನು(Side effect) ಉಂಟುಮಾಡಬಹುದು ಎಂದು ಅನೇಕ ಜನರಿಗೆ ತಿಳಿದಿಲ್ಲ.

Advertisement

ಜನರು ಏಕೆ ಹೆಚ್ಚು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ? : ನಮಗೆ ನೋವು ಉಂಟಾದಾಗ ಮತ್ತು ನೋವು ಅಸಹನೀಯವಾದಾಗ, ನೋವನ್ನು ನಿವಾರಿಸಲು ನಾವು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತೇವೆ. ಈ ಮಾತ್ರೆಗಳು ತ್ವರಿತ ಉಪಶಮನವನ್ನು ನೀಡುತ್ತವೆ ಮತ್ತು ನಿಧಾನವಾಗಿ ನಾವು ಈ ಮಾತ್ರೆಗಳಿಗೆ ಒಗ್ಗಿಕೊಳ್ಳುತ್ತೇವೆ, ನಾವು ಈ ಮಾತ್ರೆಗಳನ್ನು ಸೇವಿಸುವುದನ್ನು ಮುಂದುವರೆಸಿದರೆ, ಅದು ಮುಂದೆ ನಮಗೆ ಅಪಾಯಕಾರಿಯಾಗಬಹುದು.

ನೋವು ನಿವಾರಕ ಮಾತ್ರೆಗಳು ಕಾರಣವಾಗುತ್ತವೆ ನಷ್ಟ :

  • ಅತಿಯಾಗಿ ನೋವು ನಿವಾರಕಗಳನ್ನು ಸೇವಿಸುವುದರಿಂದ ನಾವು ವಯಸ್ಸಾದವರಂತೆ ಕಾಣುತ್ತೇವೆ.
  • ಖಾಲಿ ಹೊಟ್ಟೆಯಲ್ಲಿ ಇಂತಹ ಮಾತ್ರೆಗಳನ್ನು ಎಂದಿಗೂ ಸೇವಿಸಬೇಡಿ. ಇದು ಪಿತ್ತರಸವನ್ನು ಹೆಚ್ಚಿಸುತ್ತದೆ ಮತ್ತು ಅಲ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹುಣ್ಣು ಇದ್ದರೆ, ಅದು ಹೊಟ್ಟೆಯಲ್ಲಿ ರಂಧ್ರವನ್ನು ಉಂಟು ಮಾಡುತ್ತದೆ ಮತ್ತು ತುರ್ತು ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಅಂತಹ ಸಮಯದಲ್ಲಿ ಜೀವಕ್ಕೆ ಅಪಾಯವಿದೆ.
  • ಇದರಿಂದ ಕಿಡ್ನಿ ಸಮಸ್ಯೆ ಉಂಟಾಗಬಹುದು. ಅಲ್ಲದೆ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಉಂಟಾಗುತ್ತವೆ
  • ಇಂತಹ ಮಾತ್ರೆಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಮಗೆ ನರ್ವಸ್, ನಿದ್ರಾಹೀನತೆ, ಚಡಪಡಿಕೆ ಕೂಡ ಹೆಚ್ಚುತ್ತದೆ. – ನೋವು ನಿವಾರಕಗಳನ್ನು ಅತಿಯಾಗಿ ಸೇವಿಸುವುದರಿಂದ ರಕ್ತದೊತ್ತಡವೂ ಕಡಿಮೆಯಾಗುತ್ತದೆ.

ಕೆಲವು ವಿಶೇಷ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನೀವು ನೋವು ನಿವಾರಕಗಳನ್ನು ತೆಗೆದುಕೊಳ್ಳಬಹುದು: ತಿಂದ 30 ನಿಮಿಷಗಳ ನಂತರ ಈ ಮಾತ್ರೆಗಳನ್ನು ತೆಗೆದುಕೊಳ್ಳಿ.

  • ಸಾಧ್ಯವಾದಷ್ಟು ಕಡಿಮೆ ನೋವು ನಿವಾರಕಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.
  • ನೋವು ನಿರಂತರವಾಗಿ ಮತ್ತು ಅಸಹನೀಯವಾಗಿದ್ದರೆ, ವೈದ್ಯರನ್ನು ಸಂಪರ್ಕಿಸಿ.
  • ನೋವು ನಿವಾರಕಗಳನ್ನು ಯಾವಾಗಲೂ ನೀರಿನೊಂದಿಗೆ ತೆಗೆದುಕೊಳ್ಳಬೇಕು.
  • ನೋವು ನಿವಾರಕ ಮಾತ್ರೆಗಳನ್ನು ಯಾವಾಗಲೂ ವೈದ್ಯರ ಸಲಹೆಯೊಂದಿಗೆ ತೆಗೆದುಕೊಳ್ಳಬೇಕು.

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ
April 25, 2025
9:30 PM
by: ದ ರೂರಲ್ ಮಿರರ್.ಕಾಂ
ರಬ್ಬರ್ ತೋಟಗಳ ಮಾಹಿತಿ ಸಂಗ್ರಹ | ರಬ್ಬರ್ ತೋಟಗಳ ಜಿಯೋ-ಮ್ಯಾಪಿಂಗ್
April 25, 2025
9:15 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |
April 25, 2025
2:04 PM
by: ಸಾಯಿಶೇಖರ್ ಕರಿಕಳ
ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group