ಸಮೀಕ್ಷೆಗೆ ಬಾರದ ಬೆಳ್ಳಕ್ಕಿಗಳು…! | ಮುಂಗಾರು ನಿರೀಕ್ಷೆಯಲ್ಲಿ ಅನ್ನದಾತರು

June 3, 2024
1:40 PM

ಉತ್ತರ ಕನ್ನಡ(Uttar Kannada) ಜಿಲ್ಲೆಯ ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿಯ “ಮುಂಡಿಗೆ ಕೆರೆ ಪಕ್ಷಿಧಾಮ”ಸೋಂದಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದೆ. ಅನೇಕ ಪಕ್ಷಿಗಳಿಗೆ(Birds) ಆಶ್ರಯ ತಾಣವಾಗಿದೆ ಈ ಸ್ಥಳ, ನೂರಾರು ವರ್ಷಗಳಿಂದ ಬೆಳ್ಳಕ್ಕಿಗಳ(Egrets) ವಂಶಾಭಿವೃದ್ಧಿ(Reproduction) ಸ್ಥಳವಾಗಿದೆ ಅಲ್ಲದೇ.. ಪ್ರತಿ ವರ್ಷವೂ ಮುಂಗಾರು ಮಳೆ(Mansoon rain) ಆಗಮನದ ನಿಖರ ಮಾಹಿತಿಯನ್ನು ರೈತರಿಗೆ(Farmer)ನೀಡುತ್ತಿವೆ. ಬೆಳ್ಳಕ್ಕಿಗಳು ಮೇ ತಿಂಗಳ ಕೊನೆಗೆ ಮುಂಜಾನೆಯಿಂದ, ಸಂಜೆಯವರೆಗೆ ಮುಂಡಿಗೆ ಕೆರೆಯ ಮೇಲ್ಗಡೆ ಹಾರಾಡುತ್ತಾ, ಸ್ಥಳ ಸಮೀಕ್ಷೆ ಕಾರ್ಯ ಮಾಡುವುದು, ಹಾಗೂ ಮುಂಗಾರು ಆಗಮನದ ನಿಖರ ಸಂದೇಶದೊಂದಿಗೆ ಕೆರೆಗೆ ಇಳಿದು ವಸತಿ ಮಾಡುವುದು ಈವರೆಗೆ ಚಾಚು ತಪ್ಪದೆ ನಡೆದು ಕೊಂಡು ಬಂದಿರುವುದು ಉಲ್ಲೇಖನೀಯವಾಗಿದೆ.

Advertisement

ಆದರೆ ಈ ವರ್ಷ ಜೂನ್ ತಿಂಗಳ ಆರಂಭವಾದರೂ ಬೆಳ್ಳಕ್ಕಿಗಳು ಇನ್ನೂ ಸಮೀಕ್ಷೆಗೆ ಬಾರದಿರುವುದು ಅಚ್ಚರಿಯ ಸಂಗತಿಯಾಗಿದೆ. ಈ ವಿದ್ಯಮಾನ ಗಮನಿಸಿದರೆ ಈ ವರ್ಷ ಮುಂಗಾರು ಮಳೆ ಆಗಮನ ವಿಳಂಬ ಸಾಧ್ಯತೆ ಕಂಡು ಬರುತ್ತದೆ. ಕಳೆದ ವರ್ಷ ಮೇ ತಿಂಗಳ 30ರಿಂದ ಸಮೀಕ್ಷೆ ಕಾರ್ಯ ಪ್ರಾರಂಭಿಸಿ ಜೂನ್ 18ಕ್ಕೆ ಬೆಳ್ಳಕ್ಕಿಗಳು ಕೆರೆಗೆ ಇಳಿದಿವೆ. ಹಾಗೂ 24ರಿಂದ ಉತ್ತಮ ಮಳೆ ಆಗಿದೆ. ನಂತರದ ದಿನಗಳಲ್ಲಿ ಅಧಿಕ ಮಳೆ ಆಗಿದ್ದು,2023 ಜೂನ್‌ 26 ಅತ್ಯಲ್ಪ ಮಳೆ ದಾಖಲಾಗಿದೆ. ಇದೇ ವೇಳೆ ಕೆರೆಯ ತುಂಬೆಲ್ಲ ಇದ್ದ ಪಕ್ಷಿಗಳ ಸಂಖ್ಯೆ 185ಕ್ಕೂ ಮೇಲ್ಪಟ್ಟಿದ್ದು ಇದ್ದು, ಇವುಗಳ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವದು ಕಂಡುಬಂದಿದೆ.

ಮೊದಲು ಬಂದು ಗೂಡು ಕಟ್ಟಿದವುಗಳನ್ನು ಬಿಟ್ಟರೆ ಉಳಿದ ಪಕ್ಷಗಳು ಗೂಡು ಕಟ್ಟದೇ, ಹಾರಿ ಹೋಗಿರುವುದು ಅಗಸ್ಟ್ 7ರಂದು ಗಮನಕ್ಕೆ ಬಂದಿದೆ. ಮತ್ತು ಕಟ್ಟಿದ ಗೂಡನ್ನು ಬಿಟ್ಟು ಹೋಗಿರುವದು ಇದೇ ಮೊದಲು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಸಮೀಕ್ಷೆ ಮಾಡಿ, ಪ್ರತಿಕೂಲ ವಾತಾವರಣದಿಂದ ಕೇವಲ 15 ರಿಂದ 20 ಗೂಡುಗಳಲ್ಲಿ ಮರಿಗಳಿವೆ. ಉಳಿದವುಗಳು ಕಟ್ಟಿದ ಗೂಡನ್ನು ಬಿಟ್ಟು ಹಾರಿ ಹೋಗಿವೆ ಎಂದು ಅಭಿಪ್ರಾಯಪಟ್ಟರು  ಕಳೆದ ವರ್ಷದ ಬೆಳವಣಿಗೆ ಗಮನಿಸಿದರೆ ಇಂದಿನವರೆಗೂ ಬೆಳ್ಳಕ್ಕಿಗಳು ಕೆರೆ ಸಮೀಕ್ಷೆಗೆ ಬಾರದಿರುವುದು ಕುತೂಹಲ ಕೆರಳಿಸಿದೆ. ಬೆಳ್ಳಕ್ಕಿಗಳು ಸ್ಥಳ ಪರಿಶೀಲನೆಗೆ ಇನ್ನೂ ಬಾರದೇ ಇದ್ದರೆ ಮುಂಗಾರು ಮಳೆ ಆಗಮನ ವಿಳಂಬ ಎಂದು ತಿಳಿಯೋಣವೆ?. ಅಥವಾ ಕಳೆದ ಸಾಲಿನಲ್ಲಿ ಅವುಗಳ ವಂಶಾಭಿವೃದ್ಧಿ ಸ್ಥಳಕ್ಕೆ ಮಾನವರಿಂದ ಅಪಾಯ ಉಂಟಾಗಿದೆ ಎಂದು ತಿಳಿಯೋಣವೆ..  ಯಾವುದಕ್ಕೂ ಮುಂಡಿಗೆ ಕೆರೆ ಸರಹದ್ದಿನಲ್ಲಿ ಪಕ್ಷಿಗಳ ಚಲನ-ವಲನ ಕಾದು ನೋಡಬೇಕಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ “ಮುಂಗಾರು ಮಳೆ ವಿಳಂಬ” ಎಂದು ಹೇಳಬಹುದಾಗಿದೆ.

ಬರಹ :
ರತ್ನಾಕರ್‌ ಹೆಗಡೆ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವೃಶ್ಚಿಕ ರಾಶಿ ಯುಗಾದಿ ಸಂವತ್ಸರದ ಫಲಗಳು | ಹೇಗಿದೆ ಈ ವರ್ಷ..?
April 1, 2025
7:32 AM
by: ದ ರೂರಲ್ ಮಿರರ್.ಕಾಂ
ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ “ರಾಜಕೀಯದ ಚಪ್ಪಲು” ಹೊರಗಿಡಬೇಕು |
April 1, 2025
7:23 AM
by: ಮಹೇಶ್ ಪುಚ್ಚಪ್ಪಾಡಿ
ಏಪ್ರಿಲ್ 3 ಹಾಗೂ 4 ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ | ಎಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
March 31, 2025
11:40 PM
by: ದ ರೂರಲ್ ಮಿರರ್.ಕಾಂ
ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರ
March 31, 2025
11:23 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group