ಉತ್ತರ ಕನ್ನಡ(Uttar Kannada) ಜಿಲ್ಲೆಯ ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿಯ “ಮುಂಡಿಗೆ ಕೆರೆ ಪಕ್ಷಿಧಾಮ”ಸೋಂದಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದೆ. ಅನೇಕ ಪಕ್ಷಿಗಳಿಗೆ(Birds) ಆಶ್ರಯ ತಾಣವಾಗಿದೆ ಈ ಸ್ಥಳ, ನೂರಾರು ವರ್ಷಗಳಿಂದ ಬೆಳ್ಳಕ್ಕಿಗಳ(Egrets) ವಂಶಾಭಿವೃದ್ಧಿ(Reproduction) ಸ್ಥಳವಾಗಿದೆ ಅಲ್ಲದೇ.. ಪ್ರತಿ ವರ್ಷವೂ ಮುಂಗಾರು ಮಳೆ(Mansoon rain) ಆಗಮನದ ನಿಖರ ಮಾಹಿತಿಯನ್ನು ರೈತರಿಗೆ(Farmer)ನೀಡುತ್ತಿವೆ. ಬೆಳ್ಳಕ್ಕಿಗಳು ಮೇ ತಿಂಗಳ ಕೊನೆಗೆ ಮುಂಜಾನೆಯಿಂದ, ಸಂಜೆಯವರೆಗೆ ಮುಂಡಿಗೆ ಕೆರೆಯ ಮೇಲ್ಗಡೆ ಹಾರಾಡುತ್ತಾ, ಸ್ಥಳ ಸಮೀಕ್ಷೆ ಕಾರ್ಯ ಮಾಡುವುದು, ಹಾಗೂ ಮುಂಗಾರು ಆಗಮನದ ನಿಖರ ಸಂದೇಶದೊಂದಿಗೆ ಕೆರೆಗೆ ಇಳಿದು ವಸತಿ ಮಾಡುವುದು ಈವರೆಗೆ ಚಾಚು ತಪ್ಪದೆ ನಡೆದು ಕೊಂಡು ಬಂದಿರುವುದು ಉಲ್ಲೇಖನೀಯವಾಗಿದೆ.
ಆದರೆ ಈ ವರ್ಷ ಜೂನ್ ತಿಂಗಳ ಆರಂಭವಾದರೂ ಬೆಳ್ಳಕ್ಕಿಗಳು ಇನ್ನೂ ಸಮೀಕ್ಷೆಗೆ ಬಾರದಿರುವುದು ಅಚ್ಚರಿಯ ಸಂಗತಿಯಾಗಿದೆ. ಈ ವಿದ್ಯಮಾನ ಗಮನಿಸಿದರೆ ಈ ವರ್ಷ ಮುಂಗಾರು ಮಳೆ ಆಗಮನ ವಿಳಂಬ ಸಾಧ್ಯತೆ ಕಂಡು ಬರುತ್ತದೆ. ಕಳೆದ ವರ್ಷ ಮೇ ತಿಂಗಳ 30ರಿಂದ ಸಮೀಕ್ಷೆ ಕಾರ್ಯ ಪ್ರಾರಂಭಿಸಿ ಜೂನ್ 18ಕ್ಕೆ ಬೆಳ್ಳಕ್ಕಿಗಳು ಕೆರೆಗೆ ಇಳಿದಿವೆ. ಹಾಗೂ 24ರಿಂದ ಉತ್ತಮ ಮಳೆ ಆಗಿದೆ. ನಂತರದ ದಿನಗಳಲ್ಲಿ ಅಧಿಕ ಮಳೆ ಆಗಿದ್ದು,2023 ಜೂನ್ 26 ಅತ್ಯಲ್ಪ ಮಳೆ ದಾಖಲಾಗಿದೆ. ಇದೇ ವೇಳೆ ಕೆರೆಯ ತುಂಬೆಲ್ಲ ಇದ್ದ ಪಕ್ಷಿಗಳ ಸಂಖ್ಯೆ 185ಕ್ಕೂ ಮೇಲ್ಪಟ್ಟಿದ್ದು ಇದ್ದು, ಇವುಗಳ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವದು ಕಂಡುಬಂದಿದೆ.
ಮೊದಲು ಬಂದು ಗೂಡು ಕಟ್ಟಿದವುಗಳನ್ನು ಬಿಟ್ಟರೆ ಉಳಿದ ಪಕ್ಷಗಳು ಗೂಡು ಕಟ್ಟದೇ, ಹಾರಿ ಹೋಗಿರುವುದು ಅಗಸ್ಟ್ 7ರಂದು ಗಮನಕ್ಕೆ ಬಂದಿದೆ. ಮತ್ತು ಕಟ್ಟಿದ ಗೂಡನ್ನು ಬಿಟ್ಟು ಹೋಗಿರುವದು ಇದೇ ಮೊದಲು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಸಮೀಕ್ಷೆ ಮಾಡಿ, ಪ್ರತಿಕೂಲ ವಾತಾವರಣದಿಂದ ಕೇವಲ 15 ರಿಂದ 20 ಗೂಡುಗಳಲ್ಲಿ ಮರಿಗಳಿವೆ. ಉಳಿದವುಗಳು ಕಟ್ಟಿದ ಗೂಡನ್ನು ಬಿಟ್ಟು ಹಾರಿ ಹೋಗಿವೆ ಎಂದು ಅಭಿಪ್ರಾಯಪಟ್ಟರು ಕಳೆದ ವರ್ಷದ ಬೆಳವಣಿಗೆ ಗಮನಿಸಿದರೆ ಇಂದಿನವರೆಗೂ ಬೆಳ್ಳಕ್ಕಿಗಳು ಕೆರೆ ಸಮೀಕ್ಷೆಗೆ ಬಾರದಿರುವುದು ಕುತೂಹಲ ಕೆರಳಿಸಿದೆ. ಬೆಳ್ಳಕ್ಕಿಗಳು ಸ್ಥಳ ಪರಿಶೀಲನೆಗೆ ಇನ್ನೂ ಬಾರದೇ ಇದ್ದರೆ ಮುಂಗಾರು ಮಳೆ ಆಗಮನ ವಿಳಂಬ ಎಂದು ತಿಳಿಯೋಣವೆ?. ಅಥವಾ ಕಳೆದ ಸಾಲಿನಲ್ಲಿ ಅವುಗಳ ವಂಶಾಭಿವೃದ್ಧಿ ಸ್ಥಳಕ್ಕೆ ಮಾನವರಿಂದ ಅಪಾಯ ಉಂಟಾಗಿದೆ ಎಂದು ತಿಳಿಯೋಣವೆ.. ಯಾವುದಕ್ಕೂ ಮುಂಡಿಗೆ ಕೆರೆ ಸರಹದ್ದಿನಲ್ಲಿ ಪಕ್ಷಿಗಳ ಚಲನ-ವಲನ ಕಾದು ನೋಡಬೇಕಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ “ಮುಂಗಾರು ಮಳೆ ವಿಳಂಬ” ಎಂದು ಹೇಳಬಹುದಾಗಿದೆ.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…