Advertisement
MIRROR FOCUS

ಎಲ್‌ ನಿನೊ ಎಫೆಕ್ಟ್‌ – ಮುಂದಿನ ವರ್ಷ ಮತ್ಸ್ಯೋದ್ಯಮಕ್ಕೆ ಸಂಕಷ್ಟ?

Share

ಎಲ್‌ ನಿನೊ (El Niño) ಪರಿಣಾಮದಿಂದ ಮುಂದಿನ ವರ್ಷ ಭಾರತೀಯ ಸಮುದ್ರಗಳಲ್ಲಿ ಬೂತಾಯಿ ಮೀನುಗಳ ಉತ್ಪಾದನೆ ಗಮನಾರ್ಹವಾಗಿ ಕುಸಿಯುವ ಸಾಧ್ಯತೆ ಇದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ICAR-CMFRI) ಎಚ್ಚರಿಕೆ ನೀಡಿದೆ. ಇದೇ ಪರಿಣಾಮದಿಂದ ಒಟ್ಟಾರೆ ಸಮುದ್ರ ಮೀನು ಉತ್ಪಾದನೆಯ ಮೇಲೂ ಪ್ರತಿಕೂಲ ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಿಎಂಎಫ್‌ಆರ್‌ಐ ನಿರ್ದೇಶಕ ಡಾ. ಗ್ರಿನ್ಸನ್ ಜಾರ್ಜ್ ಅವರ ಪ್ರಕಾರ, 2026ರ ಅಕ್ಟೋಬರ್‌-ಡಿಸೆಂಬರ್ ಅವಧಿಯಲ್ಲಿ ಎಲ್‌ ನಿನೊ ಪರಿಣಾಮ ತೀವ್ರಗೊಳ್ಳುವ ಸಾಧ್ಯತೆ ಇದೆ. ಅದರ ಪರಿಣಾಮ 2027ರ ಏಪ್ರಿಲ್-ಮೇ ವೇಳೆಗೆ ಉತ್ತರ ಹಿಂದೂ ಮಹಾಸಾಗರದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳಬಹುದು. ಸಮುದ್ರದ ಮೇಲ್ಮೈ ಉಷ್ಣಾಂಶ ಏರಿಕೆ, ಸಮುದ್ರದ ಉಷ್ಣ ಅಲೆಗಳು (Marine Heatwaves) ಹಾಗೂ ಲವಣಾಂಶದ ಹೆಚ್ಚಳವು ಬೂತಾಯಿ ಮೀನುಗಳ ಸಂತಾನೋತ್ಪತ್ತಿ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ವಿಜ್ಞಾನಿಗಳ ಪ್ರಕಾರ, ಈ ವರ್ಷ ಬೂತಾಯಿ ಮೀನುಗಳ ಲಭ್ಯತೆ ಉತ್ತಮವಾಗಿದ್ದರೂ, ಮುಂದಿನ ವರ್ಷ ಪರಿಸ್ಥಿತಿ ಬದಲಾಗಬಹುದು. ಸಣ್ಣ (Pelagic) ಮೀನುಗಳಲ್ಲಿ ಬೂತಾಯಿ ಅತ್ಯಂತ ಸೂಕ್ಷ್ಮ ಪ್ರಭೇದವಾಗಿದ್ದು, ಸಮುದ್ರದ ಉಷ್ಣಾಂಶದಲ್ಲಿ ಅಲ್ಪ ಬದಲಾವಣೆಯಾದರೂ ಅವುಗಳ ವಾಸಸ್ಥಳ, ಸಂತಾನೋತ್ಪತ್ತಿ ಹಾಗೂ ಲಭ್ಯತೆ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇದರ ಜೊತೆಗೆ, ನಿರಂತರ ಉಷ್ಣತೆಯಿಂದ ಹವಳದ ದಿಬ್ಬಗಳು (Coral Reefs) ಹಾನಿಗೊಳಗಾಗುವ, ಹವಳ ಬಿಳಿಯಾಗುವ (Coral Bleaching) ಹಾಗೂ ಕೆಂಪು ಸ್ನ್ಯಾಪರ್‌ನಂತಹ ಮೀನುಗಳ ನೈಸರ್ಗಿಕ ಲಭ್ಯತೆಯೂ ಕಡಿಮೆಯಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಹಾಗೂ ಮೀನು ಸಾಕಾಣಿಕೆದಾರರಿಗೆ ಈ ವರ್ಷವೇ ವಿಶೇಷ ಸಲಹೆ  ನೀಡಲು ಸಿಎಂಎಫ್‌ಆರ್‌ಐ ಸಿದ್ಧತೆ ನಡೆಸಿದೆ.

ಭಾರತಕ್ಕೆ ಏನು ಪರಿಣಾಮ? : ಭಾರತದ ಪಶ್ಚಿಮ ಕರಾವಳಿಯಲ್ಲಿ, ವಿಶೇಷವಾಗಿ ಕೇರಳ, ಕರ್ನಾಟಕ ಹಾಗೂ ಗೋವಾ ಭಾಗಗಳಲ್ಲಿ ಬೂತಾಯಿ ಪ್ರಮುಖ ವಾಣಿಜ್ಯ ಮೀನು. ಇದರ ಉತ್ಪಾದನೆ ಕುಸಿದರೆ ಮೀನುಗಾರರ ಆದಾಯಕ್ಕೆ ಹೊಡೆತ ಬೀಳಬಹುದು ಹಾಗೂ ಮೀನು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಸಂಸ್ಕರಣಾ ಮತ್ತು ರಫ್ತು ಉದ್ಯಮಕ್ಕೂ ಪರಿಣಾಮ ಉಂಟಾಗಬಹುದು, ಕರಾವಳಿ ಆರ್ಥಿಕತೆಯಲ್ಲೂ ಕೂಡಾ ಸಮಸ್ಯೆ ಹೆಚ್ಚಾಗಬಹುದು.

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

ICAR-CMFRI has warned that the strengthening El Niño could significantly reduce Indian oil sardine production in 2027 due to marine heatwaves, rising sea surface temperatures, and increased salinity. The institute plans to issue advisories to fishers and aquaculture farmers to help them prepar

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…

3 hours ago

ಹವಾಮಾನ ವರದಿ | 01-10-2026 | ಕರ್ನಾಟಕದಲ್ಲಿ ಮತ್ತೆ ಮಳೆ ಇಳಿಕೆ – ಕಾರಣವೇನು?

ಉತ್ತರ ಭಾರತದ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದ ಪ್ರಬಲ ಚಂಡಮಾರುತಗಳ ಪರಿಣಾಮ…

10 hours ago

ಹೊಸ ಅಡಿಕೆ ಧಾರಣೆ 350 ಫಿಕ್ಸ್ – ಆರಂಭಿಕ ಧಾರಣೆಯೇ ಆಮದು ದರಕ್ಕಿಂತ ಕಡಿಮೆ..!

ಹೊಸ ಅಡಿಕೆಯ ಆರಂಭಿಕ ಧಾರಣೆ ₹330–350ಕ್ಕೆ ನಿಗದಿಯಾಗಿದ್ದು, ಆಮದು ಅಡಿಕೆಗೆ ಇರುವ ₹351ರ…

11 hours ago

ರಿಲಯನ್ಸ್ ಫೌಂಡೇಶನ್ ಪದವಿ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಪದವಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ…

15 hours ago

ರೈತನ ಹೊಲದಿಂದ ನಿಮ್ಮ ತಟ್ಟೆಯವರೆಗೆ… AI ಬರಲಿದೆ..!

ಕರ್ನಾಟಕದಲ್ಲಿ ಬೀಜದಿಂದ ಗ್ರಾಹಕರ ತಟ್ಟೆಯವರೆಗೆ ಕೃಷಿ ಉತ್ಪನ್ನದ ಪಯಣವನ್ನು ಪತ್ತೆಹಚ್ಚಲು AI ಆಧಾರಿತ…

16 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…

1 day ago