Advertisement
Open ಟಾಕ್

ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |

Share

ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ. ಹಾಗೆಂದು ಹೇಳಲು ಬಹಳ ಸಂತಸ. ಯಾವತ್ತೂ ಮಾತುಗಳು ಸುಲಭ ಆಚರಣೆಗಳಲ್ಲ. ಮಾತುಗಳನ್ನೇ ನಂಬುವವವರೂ ಹೆಚ್ಚು ಹೀಗಾಗಿ ಆಚರಣೆ ಬೇಕಿಲ್ಲ..!. ಇದೇ ಚುನಾವಣೆ. ಈ ಚುನಾವಣೆಯ ಹೊತ್ತಲ್ಲಿ ಅತೀ ಹೆಚ್ಚು ಜಗಳ ನಡೆಯುವುದು ಎಲ್ಲಿ..? ಯಾರೋ ಒಬ್ಬ ತಪಾಸಣೆ ನಡೆಸುವ ಪೊಲೀಸ್‌, ಯಾರೋ ಇಬ್ಬ ಮತದಾನ ಜಾಗೃತಿ ನಡೆಸುವ ತಳಮಟ್ಟದ ಅಧಿಕಾರಿಗಳ ಜೊತೆ ಜಗಳ ಮಾಡಿದರೆ ಯಾವುದೋ ಪಕ್ಷದ ಕಾರ್ಯಕರ್ತ ಮನೆ ಮನೆಗೆ ಕರಪತ್ರ ನೀಡುವ ವೇಳೆ ಹೆಚ್ಚು ಬೈಗುಳ ತಿನ್ನುತ್ತಾನೆ….!. ಇಷ್ಟೇ ಚುನಾವಣೆ. 

Advertisement
Advertisement

ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ನೀತಿ ಸಂಹಿತೆ ಜಾರಿಯಾಗುತ್ತದೆ. ಚುನಾವಣೆಯ ಎಲ್ಲಾ ಏರ್ಪಾಡುಗಳನ್ನು ಇಲಾಖೆ, ಚುನಾವಣಾ ಆಯೋಗ ಮಾಡುತ್ತದೆ. ಇದರಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ಮಾಡಲು ಬೇಕಾದ ಎಲ್ಲಾ ತಯಾರಿಗಳು ಆರಂಭವಾಗುತ್ತದೆ. ಅಲ್ಲಲ್ಲಿ ತಪಾಸಣೆ, ಮಾರಕಾಸ್ತ್ರಗಳನ್ನು ಠೇವಣಾತಿ ಇಡುವುದು, ಹಣ ಸಾಗಾಟಕ್ಕೆ ತಡೆ, ಅಭ್ಯರ್ಥಿಗಳ ಆಸ್ತಿ ವಿವರ ಹೀಗೇ ಎಲ್ಲವೂ ನಿಯಮವಾಗಿರುತ್ತದೆ.  ಇದರಲ್ಲಿ ಜನಸಾಮಾನ್ಯ ಪ್ರತೀ ಬಾರಿ ಚುನಾವಣೆಯ ವೇಳೆ ಸಂಕಷ್ಟವೇ ಅನುಭವಿಸುತ್ತಾನೆ.

Advertisement

ಪ್ರತೀ 5 ವರ್ಷಗಳಿಗೊಮ್ಮೆ ಜನಸಾಮಾನ್ಯ, ಮತದಾರ ಕಳ್ಳನಾಗುತ್ತಾನೆ. ರಸ್ತೆ ಬದಿ ಸಾಗುವಾಗ ವಾಹನದ ತಪಾಸಣೆ ಇರುತ್ತದೆ, ಅಕ್ರಮವಾಗಿ ಹಣ ಸಾಗಾಟವಾಗುತ್ತದೆಯೇ ಎಂದು ಪರಿಶೀಲನೆ ನಡೆಯುತ್ತದೆ, ಮಿತಿಗಿಂತ ಹೆಚ್ಚಿನ ಹಣ ಸಾಗಾಟ ಕೂಡದು, ಬ್ಯಾಂಕ್‌ ವರ್ಗಾವಣೆಗೂ ಕಣ್ಗಾವಲು… ಹೀಗೇ ಎಲ್ಲವೂ ಇರುತ್ತದೆ. ಚುನಾವಣೆ ಮುಗಿದ ನಂತರ ಯಾರೋ ಒಬ್ಬರು ಗೆಲ್ಲುತ್ತಾರೆ. ಮುಂದಿನ 5 ವರ್ಷ ಗೆದ್ದವರು ಏನು ಮಾಡುತ್ತಾರೆ ಎಂದು ಪ್ರಶ್ನಿಸುವ ಹಾಗಿಲ್ಲ ಮತದಾರ…!. ಚುನಾವಣೆಯ ಸಮಯದಲ್ಲಿ ನಡೆಸಿದ ಯಾವ ತಪಾಸಣೆಯೂ ನಂತರ ಮುಂದಿನ ಐದು ವರ್ಷ ಇಲ್ಲ…!. ಇಂತಹ ಸಂಗತಿಗಳು ಕಂಡಾಗ ಸಾಮಾನ್ಯ ಜನರು ಸಿಟ್ಟಾಗುವುದು ತಪಾಸಣೆಯ ಗೇಟಲ್ಲಿ ಇರುವ ಸಾಮಾನ್ಯ ಪೊಲೀಸರ ಮೇಲೆ. ಅವರಿಗೆ ಅದು ಡ್ಯೂಟಿ. ಆ ಡ್ಯೂಟಿ ನೋಡಲು ಸಿಸಿ ಕ್ಯಾಮಾರ ಇರುತ್ತದೆ. ಅದನ್ನು ನೋಡಲು ಮೇಲೆ ಇನ್ನೊಬ್ಬ ಅಧಿಕಾರಿ, ಅದರ ಮೇಲೆ ನೋಡಲು ಇನ್ನೊಬ್ಬ ಅಧಿಕಾರಿ…!. ಡ್ಯೂಟಿ ತಪ್ಪಿದರೆ, ಶೋಕಾಸ್‌ ನೋಟೀಸು…!.  ಹೀಗಾಗಿ ಸಾಮಾನ್ಯ ಜನರು ಈ ಪೋಲೀಸರ ಮೇಲೆ ಸಿಟ್ಟಾದರೆ ಯಾವ ಪ್ರಯೋಜನವೂ ಇರದು…!. ತಾಳ್ಮೆ ಕಳೆದುಕೊಂಡರೆ ಇಬ್ಬರದೂ ಬಿಪಿ ಜಾಸ್ತಿಯಾದೀತೇ ಹೊರತು ಯಾವ ಪ್ರಯೋಜನವೂ ಇಲ್ಲ..!

ಚುನಾವಣೆಯ ಹೊತ್ತಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆಗಾಗಿ ಆಯುಧಗಳ ಠೇವಣಾತಿಗೆ ಇಲಾಖೆಗಳು ಹೇಳುತ್ತವೆ. ಈ ಸಮಯ ಮತ್ತೆ ಕೃಷಿಕರಿಗೆ ಸಂಕಷ್ಟ. ಇದಕ್ಕಾಗಿ ಜಗಳ ನಡೆಯುವುದು ಪೊಲೀಸರು ಜೊತೆ…!. ಏಯ್..‌ ಏಯ್…‌ ಅಂತಲೂ ಹೋಗುತ್ತದೆ. ಆದರೆ ಪೊಲೀಸರಿಗೆ ಏನೂ ಮಾಡದ ಸ್ಥಿತಿ. ಹೆಚ್ಚೆಂದರೆ ಮೇಲಾಧಿಕಾರಿಗಳಿಗೆ ವರದಿ ಮಾಡಬಹುದು. ಆದರೂ ನಾವು ಜಗಳ ಮಾಡುವುದು ಸಾಮಾನ್ಯ ಪೊಲೀಸರ ಜೊತೆ…!. ಅದಕ್ಕಾಗಿ ಕೆಲವು ಕೃಷಿಕರು ನ್ಯಾಯಾಲಯದವರೆಗೂ ಹೋಗಬೇಕಾಯಿತು. ಚುನಾವಣೆಯ ಹೆಸರಿನಲ್ಲಿ ಗೆಲ್ಲುವ ಯಾವ ಪ್ರತಿನಿಧಿಗಳೂ, ಪಕ್ಷಗಳೂ ಮಾತನಾಡಿಲ್ಲ. ಹಾಗೆಂದು ಯಾವ ಮತದಾರರು ಇವರ ನಡೆಯ ಬಗ್ಗೆ ಪ್ರಶ್ನೆಯೂ ಮಾಡಿಲ್ಲ..!. ಆದರೂ ಜಗಳ ಮಾಡುವುದು ಪೊಲೀಸರಲ್ಲಿ ಹಾಗೂ ಸ್ಥಳೀಯ ಅಧಿಕಾರಿಯಲ್ಲಿ…!

Advertisement

ಚುನಾವಣೆ ಘೋಷಣೆಯಾದ ತಕ್ಷಣವೇ ಎಲ್ಲಾ ಇಲಾಖೆಗಳಿಗೂ ಸೂಚನೆ ಬರುತ್ತದೆ, ಬ್ಯಾನರ್‌ ತೆಗೆಯಿಸಿ ಎಂದು ಪಂಚಾಯತ್‌ ಮಟ್ಟದ ಅಧಿಕಾರಿಗಳಿಗೆ, ಕಂದಾಯ ಇಲಾಖೆಯ ಗ್ರಾಮಮಟ್ಟದ ಅಧಿಕಾರಿಗಳಿಗೆ. ಬ್ಯಾನರ್‌ ಅಳವಡಿಕೆ ಮಾಡಿರುವುದು ಪಕ್ಷದ ಪ್ರಮುಖರು. ಅವರ ಬಳಿ ಬ್ಯಾನರ್‌ ತೆಗೆಯಿರಿ ಎಂದರೆ ಅವರೆಲ್ಲಾ ದೊಡ್ಡ ದೊಡ್ಡದು ಮಾತಾಡ್ತಾರೆ. ಪಂಚಾಯತ್‌ ಮಟ್ಟದ ಅಧಿಕಾರಿ ಯಾರೋ ಪರಿಚಯದವರ ಬಳಿ ಹೇಳಿ ಮನ ಓಲೈಕೆ ಮಾಡಿ ಬ್ಯಾನರ್‌ ತೆರವಿಗೆ ಹೇಳುತ್ತಾರೆ…!. ಹಾಗಿದ್ದರೂ ನಮ್ಮದೇ ಸರ್ಕಾರ ಆಡಳಿತ ಎನ್ನುವ ಧೈರ್ಯ ನಾಯಕರುಗಳಿಗೆ ಆರಂಭದಲ್ಲಿ ಇರುತ್ತದೆ. ಅಧಿಕಾರಿಗಳಿಗೆ ವರದಿ ನೀಡಬೇಕು ದಿನವೂ.. ಹಾಗಾಗಿ ಅಧಿಕಾರಿಗೆ ಸಂಕಟ. ಆತನ ವರದಿಯೇ ಕಡಿಮೆ ಇರುತ್ತದೆ, ಇಲ್ಲಿ ಬ್ಯಾನರ್‌ ತೆಗೆಸಲು ಸತತ ಪ್ರಯತ್ನ ಆಗುತ್ತದೆ..!. ತಳಮಟ್ಟದ ಕೆಲಸ ಹಾಗೆಯೇ…

ಚುನಾವಣೆ ಎಂದಾಗ ಪಕ್ಷಗಳ ಕಾರ್ಯಕರ್ತರು ಮನೆ ಮನೆಗೆ ಹೋಗಬೇಕು. ಮನೆಗೆ ಭೇಟಿ ನೀಡುವ ಕಾರ್ಯಕರ್ತರು ಪಕ್ಷಗಳ ಎಲ್ಲಾ ಅವ್ಯವಹಾರ, ಆರೋಪ, ಅಪವಾದಗಳಿಗೆ ಜವಾಬ್ದಾರ. ಮತದಾರನಿಗೆ ನೇರವಾಗಿ ಸಿಗುವುದೇ ತಳಮಟ್ಟದ ಕಾರ್ಯಕರ್ತ. ಆತನನ್ನು ಜಾಡಿಸಿ ಬಿಡುತ್ತಾರೆ ಹಲವರು. ಅಲ್ಲಿ ಭರವಸೆ ನೀಡಿ ಬರುವುದು ಈ ಸಾಮಾನ್ಯ ಕಾರ್ಯಕರ್ತ. ಮುಂದಿನ ಚುನಾವಣೆಗೆ ಮೊದಲು ಅದು ಈಡೇರುವ ಹಾಗೆ ಇದೇ ಕಾರ್ಯಕರ್ತ ಮಾಡಬೇಕು. ಆದರೆ ಗೆದ್ದ ನಂತರ ನಾಯಕರು ಈ ಸಾಮಾನ್ಯ ಕಾರ್ಯಕರ್ತನ ಕೈಗೆ ಸಿಗಬೇಕಲ್ಲ…!. ಬಹುತೇಕ ಹಳ್ಳಿ ವೈಮನಸ್ಸುಗಳು ಆರಂಭವಾಗುವುದು ಇಂತಹ ಕಾರಣಗಳಿಂದ. ನಾಯಕರ ಬಗ್ಗೆ ಒಲವು ಇದ್ದರೂ ಸ್ಥಳೀಯ ಕಾರ್ಯಕರ್ತರ ದರ್ಪ, ಅಹಂಕಾರಗಳು ಕೂಡಾ ಪಕ್ಷಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮತದಾರ ಸಾಮಾನ್ಯ ಕಾರ್ಯಕರ್ತನಿಗೆ ಬೈದು, ಅವನ ಜೊತೆ ಜಗಳ ಮಾಡಿ ಪ್ರಯೋಜನ ಇಲ್ಲ..!.

Advertisement

ಚುನಾವಣೆ ಘೊಷಣೆಯಾದ ಬಳಿಕ ಇನ್ನೊಂದಷ್ಟು ಜನರು ಮೌನವಾಗುತ್ತಾರೆ. ಯಾವ ಪಕ್ಷದ ಪರವೂ, ವಿರುದ್ಧವೂ ಮಾತನಾಡುವುದಿಲ್ಲ. ಗೆದ್ದವರ ಪರ ಜೈ ಎನ್ನಬಹುದಾದ ವ್ಯವಸ್ಥೆ. ಇನ್ನೂ ಒಂದಷ್ಟು ಜನರು ಹೇಗೆಲ್ಲಾ ನೆರವು ಯಾರಿಂದೆಲ್ಲಾ ಪಡೆಯಬಹುದು ಎಂದು ನೋಡುತ್ತಾರೆ. ಎಲ್ಲಿ ಆದಾಯ ಇದೆಯೋ ಅಲ್ಲಿ ಹಾಜರ್..!.‌ ಕೇವಲ 5 ವರ್ಷಗಳಿಗೊಮ್ಮೆ ನಡೆಯುವ ಈ ಹಬ್ಬವನ್ನು ಏಕೆ ಬಳಸಿಕೊಳ್ಳಬಾರದು , ಚುನಾವಣೆಯ ನಂತರ ಅವರು ಹೇಗೂ ಸಿಗಲಾರದು ಎಂಬುದು ಅವರ ಪ್ರಶ್ನೆ.

ಚುನಾವಣಾ ಆಯೋಗವು ಈಗ ರಸ್ತೆ ಬದಿಯ ಬರಹ, ಗೋಡೆ ಬರಹವನ್ನು ನಿಷೇಧಿಸಿದೆ. ಇದರಿಂದ ಬಹಳಷ್ಟು ನೆಮ್ಮದಿ ಸಾಮಾನ್ಯ ಮತದಾರರಿಗೆ. ಈಗ ಸೋಶಿಯಲ್‌ ಮೀಡಿಯಾದ ಗೋಡೆಗಳಲ್ಲಿ ಗೀಚುವುದು ಹೆಚ್ಚಾಗಿದೆ. ಅಪಪ್ರಚಾರ ಕೂಡಾ ಹೆಚ್ಚಾಗಿದೆ. ಪ್ರಚಾರಕ್ಕಿಂತಲೂ ಅಪಪ್ರಚಾರ ಹೆಚ್ಚಾಗಿದೆ. ಹಿಂದೆ ಗೋಡೆ ಬರಹ, ರಸ್ತೆಗಳಲ್ಲಿನ ಬರಹಗಳಿಂದ ಈ ಸಮಸ್ಯೆ ಇರಲಿಲ್ಲ. ಈಗ ಸಾಮಾಜಿಕ ಜಾಲತಾಣದ ಗೋಡೆ ಬಹಳಷ್ಟು ಅಪಾಯಕಾರಿ ಬೆಳೆದಿದೆ. ಇದಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕದೇ ಇದ್ದರೆ ಮುಂದೆ ಚುನಾವಣೆ ಎನ್ನುವುದೇ ಅಪಪ್ರಚಾರದ ಮೇಲೆ ನಿಲ್ಲಬಹುದೇನೋ…?

Advertisement

ಅಂತೂ ಚುನಾವಣೆಯ ಹಬ್ಬದಲ್ಲಿ ಎಲ್ಲಾ ಸಂಭ್ರಮವೂ ಇದೆ. ಆದರೆ ಈ ಸಮಯದಲ್ಲಿ ನಡೆಯುವ ಜಗಳವು ಅರ್ಥ ಇಲ್ಲದ್ದು, ಯಾವ ಅಧಿಕಾರವೂ ಇಲ್ಲದ ಸಾಮಾನ್ಯ ಜನರೊಂದಿಗೆ ಸಾಮಾನ್ಯ ಮತದಾರ ಜಗಳ ಮಾಡಿ ಏನು ಪ್ರಯೋಜನ. ಆತ ಜಗಳ ಮಾಡಬೇಕಾದ್ದು ಮತದ ಮೂಲಕ…!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ವಿಶ್ವ ಬಿದಿರು ದಿನವನ್ನು ಆಚರಿಸಿದ ನಾಗಾಲ್ಯಾಂಡ್‌ | ಬಿದಿರು ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಯೋಜಿಸಿದ ನಾಗಾಲ್ಯಾಂಡ್‌ |

ನಾಗಾಲ್ಯಾಂಡ್‌ನಲ್ಲಿ ಕೂಡಾ ಬಿದಿರು ಕೃಷಿಯ ಬಗ್ಗೆ ಗಮನಹರಿಸಲಾಗಿದೆ. ಇದೀಗ ವಿಶ್ವ ಬಿದಿರು ದಿನದ…

10 hours ago

ರೈತರಿಗೆ ₹ 21,000 ಕೋಟಿ ನೆರವು | 100 ಹೊಸ ಕೃಷಿ ವಿಧಾನಗಳ ಅಭಿವೃದ್ಧಿ |

ಕೇಂದ್ರ ಸರ್ಕಾರದ 100 ದಿನಗಳಲ್ಲಿ ಕೃಷಿ ಸಚಿವಾಲಯದಲ್ಲಿ  ಸಾಧನೆಗಳ ಬಗ್ಗೆ ಕೇಂದ್ರ ಕೃಷಿ…

10 hours ago

ದೇಶದಲ್ಲಿ ಸಹಕಾರಿ ವಲಯ ಬಲಗೊಳ್ಳುತ್ತಿದೆ | ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ |

ದೇಶದ ಎಲ್ಲ ಗ್ರಾಮಗಳು ಮತ್ತು ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಮರುಜನ್ಮ ನೀಡುವ ಗುರಿಯೊಂದಿಗೆ…

10 hours ago

ಕೃಷಿ ಕ್ಷೇತ್ರದ ಪ್ರಗತಿಗೆ ಆದ್ಯತೆ | ಕೃಷಿ ವಲಯವನ್ನು ಜಾಗತಿಕವಾಗಿ ಅಭಿವೃದ್ಧಿಗೊಳಿಸಬೇಕಿದೆ |

ಕೃಷಿ ವಲಯವನ್ನು ಜಾಗತಿಕವಾಗಿ ಅಭಿವೃದ್ಧಿಗೊಳಿಸಬೇಕಿದೆ ಎಂದು ಕೇಂದ್ರ ಜವಳಿ ಖಾತೆ ಸಚಿವ  ಗಿರಿರಾಜ್ ಸಿಂಗ್…

11 hours ago

ಹವಾಮಾನ ವರದಿ | 20-09-2024 | ಸೆ.23 ರಿಂದ ಕೆಲವು ಕಡೆ ಹೆಚ್ಚು ಮಳೆ ನಿರೀಕ್ಷೆ |

ಸೆ.23 ರಿಂದ ರಾಜ್ಯದ ಕೆಲವು ಕಡೆ ಮಳೆ ಹೆಚ್ಚಾಗುವ ನಿರೀಕ್ಷೆ ಇದೆ.

19 hours ago

ಗ್ರಾಮಗಳಲ್ಲಿ ನೀರಿನ ಹೊಂಡ | ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ ವಿಶ್ವಬ್ಯಾಂಕ್ ನೆರವಿನ ಯೋಜನೆ ಅನುಷ್ಟಾನ |

ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ 5 ಸಾವಿರದ 171 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ…

1 day ago