ಬೆಂಗಳೂರು- ಕರ್ನಾಟಕದ ಹೈವೋಲ್ಟೇಜ್ ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್ ಗಳು ಸಾಥ್ ನೀಡುತ್ತಿವೆ. ಕರ್ನಾಟಕದಲ್ಲಿ ಇರುವ ಹೆಲಿಕಾಪ್ಟರ್ ಗಳು ಸಾಲಲ್ಲ ಅಂತ ಹೊರ ರಾಜ್ಯಗಳಿಂದ ಹೆಲಿಕಾಪ್ಟರ್ ಗಳನ್ನು ತರಿಸಲಾಗುತ್ತಿದೆ.
ಒಂದೇ ದಿನ ರಾಜ್ಯದ ಹಲವು ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ಹೋಗಲು ಸಮಯದ ಅಭಾವವಿದೆ. ಈ ಕಾರಣ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಹೆಲಿಕಾಪ್ಟರ್ ಗಳನ್ನು ಬುಕ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಈಗ 100 ಕ್ಕೂ ಹೆಚ್ಚು ಹೆಲಿಕಾಪ್ಟರ್ ಗಳಿವೆ. ಆದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನವರು ಎಲ್ಲಾ ಹೆಲಿಕಾಪ್ಟರ್ ಹಾಗೂ ಮಿನಿ ವಿಮಾನಗಳನ್ನು ಬುಕ್ ಮಾಡಿದ್ದಾರೆ.
ಈ ಡಿಮ್ಯಾಂಡ್ ಪೂರೈಸಲು ಕಂಪನಿಗಳು ದೆಹಲಿ, ಕೊಲ್ಕತ್ತಾ, ಕೊಚ್ಚಿ, ಗೋವಾ, ಆಂಧ್ರಪ್ರದೇಶ, ಜೈಪುರ ಸೇರಿದಂತೆ ಹಲವು ರಾಜ್ಯಗಳಿಂದ 150 ಹೆಲಿಕಾಪ್ಟರ್ ಹಾಗೂ ಮಿನಿ ವಿಮಾನಗಳನ್ನು ತರಿಸಿಕೊಂಡಿವೆ.
ಇನ್ನು ಹೆಲಿಕಾಪ್ಟರ್ ಹಾಗೂ ಮಿನಿ ವಿಮಾನಗಳ ಬಾಡಿಗೆ ಒಂದು ಗಂಟೆಗೆ ಇಂತಿಷ್ಟು ಎಂದು ನಿಗದಿ ಮಾಡಲಾಗಿದೆ.
ಎರಡು ಸೀಟ್ ಹೆಲಿಕಾಪ್ಟರ್ ಬಾಡಿಗೆ ಒಂದು ಗಂಟೆಗೆ 2.10 ಲಕ್ಷ, ನಾಲ್ಕು ಸೀಟ್ ಹೆಲಿಕಾಪ್ಟರ್ 2.40 ಲಕ್ಷ, ಆರು ಸೀಟ್ ಹೆಲಿಕಾಪ್ಟರ್ 2.60 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.
8 ಸೀಟ್ ಮಿನಿ ವಿಮಾನಕ್ಕೆ 3.50 ಲಕ್ಷ ಗಳು 13 ಸೀಟ್ ಮಿನಿ ವಿಮಾನಕ್ಕೆ 4 ಲಕ್ಷ ರೂಪಾಯಿಯನ್ನು ಗಂಟೆಗೆ ನಿಗದಿ ಮಾಡಲಾಗಿದೆ.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490