ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ 11 ದಿನಗಳಲ್ಲಿ ಕರ್ನಾಟಕದಲ್ಲಿ 108.78 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ.
2018 ರ ವಿಧಾನಸಭೆ ಚುನಾವಣೆಗೆ ಮುನ್ನ ಅದೇ ದಿನಗಳಲ್ಲಿ (27 ಮಾರ್ಚ್ 2018 ರಿಂದ 9 ಏಪ್ರಿಲ್ 2018) 20.12 ಕೋಟಿ ಮೌಲ್ಯದ ನಗದು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ವಿಪರೀತವಾದ ಹಣ ಸಾಗಾಟ ಪ್ರಕರಣ ಪತ್ತೆಯಾಗಿದೆ. ಸುಮಾರು ಶೇ.440 ರಷ್ಟು ವಶಪಡಿಸಿಕೊಳ್ಳುವಿಕೆ ಹೆಚ್ಚಾಗಿದೆ.
ವಶಪಡಿಸಿಕೊಂಡ ವಸ್ತುಗಳಲ್ಲಿ ಲೆಕ್ಕಕ್ಕೆ ಸಿಗದ 37.24 ಕೋಟಿ ರೂಪಾಯಿ ನಗದು, 26.68 ಕೋಟಿ ರೂಪಾಯಿ ಮೌಲ್ಯದ 5.23 ಲಕ್ಷ ಲೀಟರ್ ಮದ್ಯ, 11.54 ಕೋಟಿ ರೂಪಾಯಿ ಮೌಲ್ಯದ 397 ಕೆಜಿ ಅಕ್ರಮ ಮಾದಕ ದ್ರವ್ಯ, 14.96 ಕೋಟಿ ರೂಪಾಯಿ ಮೌಲ್ಯದ 34.36 ಕೆಜಿ ಚಿನ್ನ ಮತ್ತು 15.80 ಕೋಟಿ ಮೌಲ್ಯದ ಉಚಿತ ವಸ್ತುಗಳು ಸೇರಿವೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel