ಮತಪ್ರಚಾರದ ಕೊನೆಯ ದಿನ ಸೋಮವಾರ ಆಗಿದ್ದು ನಾಳೆನೇ ಚುನಾವಣೆ ನಡೆಯಲಿದ್ದು, ಸಕಲ ಸಿದ್ದತೆಯನ್ನು ಚುನಾವಣಾ ಆಯೋಗ ಮಾಡುತ್ತಿದ್ದು, 224 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಮತದಾನ ನಡೆಯಲಿದೆ.
ಮತದಾನವು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳ ಅದೃಷ್ಟ ಬಲವನ್ನು ತಿಳಿದುಕೊಳ್ಳಲಿದ್ದಾರೆ.
ರಾಜ್ಯಾದಾದ್ಯಂತ 58,545 ಮತಗಟ್ಟೆಗಳಲ್ಲಿ ಮತ ಚಲಾವಣೆ ನಡೆಯಲಿದ್ದು, ಒಟ್ಟು 5,31,33,054 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಸದ್ಯ 2,615 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
75,603 ಬ್ಯಾಲೆಟ್ ಯೂನಿಟ್‌ಗಳು, 70,300 ಕಂಟ್ರೋಲ್ ಯೂನಿಟ್‌ಗಳು ಮತ್ತು 76,202 ವೋಟರ್ ವೆರಿಫೈಯಬಲ್ ಪೇಪರ್ ಅಡಿಟ್ ಟ್ರಯಲ್‌ಗಳನ್ನು ಮತದಾನ ಸಮಯದಲ್ಲಿ ಬಳಸಲಾಗುತ್ತದೆ. ಹಾಗೂ ಭದ್ರತೆಗಾಗಿ 1,56,000 ಪೋಲಿಸರನ್ನು ನಿಯೋಜನೆ ಮಾಡಲಾಗಿದೆ. 304 ಡಿವೈಎಸ್‌ಪಿ, 991 ಪಿಐ, 5803 ಪಿಎಸೈ, 5803 ಎಎಸೈ 46421 ಪಿಸಿ ಹಾಗೇ 84119 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.