ಕರ್ನಾಟಕ ಬಿಜೆಪಿಯಲ್ಲಿ ಹೊಸ ತಂತ್ರ | ಹೊಸಬರಿಗೆ ಆದ್ಯತೆ | ಗುಂಪುಗಾರಿಕೆ ತಡೆಯಲು ತಂತ್ರಗಾರಿಕೆ |

April 3, 2023
11:19 AM

ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆ ಬಳಿಕ ರಾಜಕೀಯ ಚಟುವಟಿಕೆ ಗರಿಗೆದರಿದೆ. ಎಲ್ಲಾ ಪಕ್ಷಗಳಲ್ಲೂ ಗುಂಪುಗಾರಿಕೆ, ಅಸಮಾಧಾನಗಳು ಕಂಡುಬರುತ್ತಿದೆ. ಇದೇ ಕಾರಣದಿಂದ ಕಾಂಗ್ರೆಸ್‌ ಪಕ್ಷವು ಮೊದಲೇ ಒಂದು ಹಂತದ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿತ್ತು. ಬಿಜೆಪಿಯು ಗುಂಪುಗಾರಿಕೆ ತಡೆಯಲು ತಂತ್ರ ಮಾಡುತ್ತಿದೆ. ಉತ್ತರ ಪ್ರದೇಶ ಮಾದರಿಯಲ್ಲೇ ಕರ್ನಾಟಕದಲ್ಲೂ ಟಿಕೆಟ್‌ ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ. ಗುಂಪುಗಾರಿಕೆ, ಅಸಮಾಧಾನ, ವಿರೋಧಿ ಅಲೆ ಇರುವ ಕಡೆಗಳಲ್ಲಿ  ಹೊಸಬರಿಗೆ ಆದ್ಯತೆ ನೀಡಲು ಸಿದ್ಧತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

Advertisement

ಗುಂಪುಗಾರಿಕೆ ಹಾಗೂ ಎಲ್ಲೆಲ್ಲಿ ಯಾವ ವಾತಾವರಣ ಇದೆ, ಅದಕ್ಕೆ ಕಾರಣಗಳ ಸಹಿತ ಕಂಡುಹಿಡಿಯಲು ತಟಸ್ಥ ಏಜೆನ್ಸಿಯೊಂದರ ಸಮೀಕ್ಷೆಯ ಮೂಲಕ ಪ್ರಾಥಮಿಕ ಹಂತದ ಮಾಹಿತಿ ಸಂಗ್ರಹ ಕಾರ್ಯವನ್ನು ಬಿಜೆಪಿ ಮಾಡಿತ್ತು. ಈ ಮೂಲಕ ಕ್ಷೇತ್ರದ ಸಮಗ್ರ ಮಾಹಿತಿ ಕಲೆ ಹಾಕಿತ್ತು. ಏಕೆ ವಿರೋಧ ಹಾಗೂ ಇದಕ್ಕೆ ಕಾರಣವನ್ನೂ ಕಂಡು ಹಿಡಿಯುತ್ತಿದೆ. ಒಂದು ವೇಳೆ ಬಣ ರಾಜಕೀಯಗಳು ಇದ್ದರೆ ಅಂತಹ ಕಡೆಗಳಲ್ಲಿ  ಯಾವ ಬಣಕ್ಕೂ ಸೇರದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಹೇಗೆ ಎಂಬ ಸಮೀಕ್ಷೆಯನ್ನೂ ನಡೆಸಿದೆ.

ಟಿಕೆಟ್‌ ವಂಚಿತರಾಗುವವರ ಪೈಕಿ ಕೆಲ ಹಿರಿಯರಿಗೆ ಅಧಿಕಾರ ಬಂದ ಬಳಿಕ  ಸ್ಥಾನಮಾನ ಗಳನ್ನು ನೀಡುವ ಭರವಸೆ ನೀಡಿ ಚುನಾವಣಾ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಸೂಚನೆ ನೀಡಲಾಗುತ್ತದೆ. ಅಮಿತ್‌ ಶಾ ಅವರ ರಾಜ್ಯ ಪ್ರವಾಸ ಮತ್ತು ಇನ್ನೊಂದು ಹಂತದ ಸಮೀಕ್ಷೆಯ ನಂತರ ಬಿಜೆಪಿ ನಿಲುವುಗಳು ಗಟ್ಟಿಯಾಗಲಿದೆ ಎನ್ನುವುದು  ಪಕ್ಷದ ಮೂಲದಿಂದ ಲಭ್ಯ ಮಾಹಿತಿ.

ಕಾಂಗ್ರೆಸ್‌ ಪಕ್ಷವು ಕೂಡಾ ಈ ಬಾರಿ ಗೆಲುವು ಸಾಧಿಸಲು ತಂತ್ರಗಳನ್ನು ಮಾಡುತ್ತಿದೆ. ಗುಂಪುಗಾರಿಕೆಗಳಿಗೆ ಬ್ರೇಕ್‌ ಹಾಕಲು ಸಿದ್ಧತೆ ನಡೆಸಿದೆ. ಗುಂಪುಗಾರಿಕೆಯ ಕಾರಣದಿಂದ ಕ್ಷೇತ್ರವು ಸೋತರೆ ಸ್ಥಳೀಯ ನಾಯಕತ್ವನ್ನೇ ಬದಲು ಮಾಡಲು ಚಿಂತನೆ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಪಕ್ಷದ ತೀರ್ಮಾನದ ವಿರುದ್ಧ ಹೋಗದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಪಕ್ಷದ ಮೂಲದ ಮಾಹಿತಿ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೇಘಾಲಯದಲ್ಲಿ “ಜಾಕ್‌ ಫ್ರುಟ್‌ ಮಿಶನ್”‌ ಮೂಲಕ ಹಲಸು ಬೆಳೆಗೆ ಪ್ರೋತ್ಸಾಹ | ಮೇಘಾಲಯದ ಭೇಟಿ ನೀಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಹಲಸಿನ ಹಣ್ಣು ಗಿಫ್ಟ್‌ |
July 15, 2025
8:01 AM
by: The Rural Mirror ಸುದ್ದಿಜಾಲ
ವ್ಯಾಪಾರದಲ್ಲಿ ಈ ರಾಶಿಯವರಿಗೆ ಗಳಿಕೆಯ ಬದಲು ಖರ್ಚು ಹೆಚ್ಚಾಗುವ ಸೂಚನೆ
July 15, 2025
7:26 AM
by: ದ ರೂರಲ್ ಮಿರರ್.ಕಾಂ
ಭೂಮಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮರುಯಾನ | ಕ್ಯಾಲಿಫೋರ್ನಿಯಾದ ಕಡಲತೀರದಲ್ಲಿ ಇಳಿಯಲಿರುವ ನೌಕೆ
July 14, 2025
11:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-07-2025 | 10 ದಿನಗಳವರೆಗೂ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮಳೆ | ಜುಲೈ 16 ರಿಂದ ರಾಜ್ಯದೆಲ್ಲೆಡೆ ಉತ್ತಮ ಮಳೆ |
July 14, 2025
1:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group