ತಾಂತ್ರಿಕತೆ ಎಷ್ಟೇ ಮುಂದುವರಿದರೂ ಕೆಲವು ಸಮಸ್ಯೆಗಳಿಗೆ ಪರಿಹಾರ ಇಲ್ಲ. ಕಳೆದ ಎರಡು ದಿನಗಳಿಂದ ಸುಳ್ಯ ತಾಲೂಕಿನ ಗುತ್ತಿಗಾರು ಸಬ್‌ಸ್ಟೇಶನ್‌ಗೆ ವಿದ್ಯುತ್ ಸರಬರಾಜು ಸಮಸ್ಯೆ. ಕಾರಣ ಭೂಮಿ ಒಳಗಿನ ಕೇಬಲ್ ಸಮಸ್ಯೆ.
ಸುಳ್ಯ ತಾಲೂಕಿನ ಗುತ್ತಿಗಾರು ಸಬ್‌ಸ್ಟೇಶನ್‌ಗೆ ಕಳೆದ ಎರಡು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ. ಹೀಗಾಗಿ ಅನೇಕ ಕಡೆಯ ವಿದ್ಯುತ್ ಬಳಕೆದಾರರಿಗೆ ಸಮಸ್ಯೆ. ಹಾಗೆಂದು ಇಲಾಖೆಯ ಸಿಬಂದಿಗಳು, ಅಧಿಕಾರಿಗಳು ಮೌನವಾಗಿ ಕುಳಿತಿಲ್ಲ. ಇಡೀ ದಿನ ಕೆಲಸ ಮಾಡುತ್ತಲೇ ಇದ್ದಾರೆ. ಗ್ರಾಹಕರು, ಕೃಷಿಕರಿಗೆ ಎರಡೂ ದಿನಗಳಿಂದ ಅಧಿಕಾರಿಗಳಿಗೆ, ಮೆಸ್ಕಾಂ ಸಿಬಂದಿಗಳನ್ನು ಪ್ರಶ್ನಿಸುವುದೇ ಕೆಲಸ, ಕರೆಂಟಿಲ್ಲ ಏಕೆ..?. ಕಾರಣ , ಭೂಮಿಯೊಳಗೆ ಅಳವಡಿಕೆ ಮಾಡಿದ್ದ ಕೇಬಲ್ ಸಮಸ್ಯೆ.(ಯು ಜಿ ಕೇಬಲ್)
ಭೂಮಿಯೊಳಗೆ ಕೇಬಲ್ ಅಳವಡಿಕೆ ಮಾಡುವ ವೇಳೆ ಎರಡೆರಡು ಕೇಬಲ್ ಅಳವಡಿಕೆ ಮಾಡಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಯಾವ ಸಮಸ್ಯೆಯೂ ಇಲ್ಲದೆ ಗ್ರಾಹಕರಿಗೆ ನಿಶ್ಚಿಂತೆಯಿಂದ ವಿದ್ಯುತ್ ಸರಬರಾಜಾಗಿತ್ತು. ಇದೀಗ ಭೂಮಿಯೊಳಗೆ ಅಳವಡಿಕೆ ಮಾಡಿದ್ದ ಒಂದು ಕೇಬಲ್ ಸಮಸ್ಯೆಯಾಗಿ ಇನ್ನೊಂದು ಕೇಬಲ್ ಮೂಲಕ ವಿದ್ಯುತ್ ನೀಡಿದಾಗಲೂ ಸಮಸ್ಯೆ..!. ಇದನ್ನು ದುರಸ್ತಿ ಮಾಡಲು ಇನ್ನೊಂದು ತಂಡ ಆಗಮಿಸಬೇಕು ಹಾಗೂ ಭೂಮಿಯೊಳಗಿನಿಂದ ಕೇಬಲ್ ತೆಗೆದು ದುರಸ್ತಿ ಮಾಡಬೇಕು. ಹೀಗಾಗಿ ಸಮಸ್ಯೆಯಾಗಿದೆ. ಅಧಿಕಾರಿಗಳು, ಸಿಬಂದಿಗಳು ನಿರಂತರ ಕೆಲಸದಲ್ಲಿದ್ದಾರೆ.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈಕೊಟ್ಟರೆ ಕೃಷಿಕರು, ಗ್ರಾಮೀಣ ಭಾಗದ ಹಲವು ಕಡೆ ಸಮಸ್ಯೆ. ಕುಡಿಯುವ ನೀರು, ಸಣ್ಣ ಪುಟ್ಟ ಇಂಡಸ್ಟ್ರೀಗಳು, ಕೃಷಿಕರು ಸೇರಿದಂತೆ ಉದ್ಯಮಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈಗಲೂ ಅದೇ ಸಮಸ್ಯೆ ಕಾಡಿದೆ. ತಾಂತ್ರಿಕವಾಗಿ ಎಷ್ಟೇ ಮುಂದಿವರಿದರೂ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸ್ವಲ್ಪ ವಿಳಂಬವೇ ಆಗಿದೆ. ಇದಕ್ಕೆ ಕಾರಣರು ಯಾರೂ ಅಲ್ಲ, ಪ್ರಕೃತಿಯೇ ಕಾರಣ. ಹೀಗಾಗಿ ಗ್ರಾಹಕರು ಸಮಾಧಾನ ಪಟ್ಟುಕೊಳ್ಳುವುದು, ತಾಳ್ಮೆ ಕಳೆದುಕೊಳ್ಳದಿರುವುದೇ ಪರಿಹಾರ..!.