Opinion

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಎಂತ ಮಾರ್ರೇ…. ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ ಬೊಬ್ಬೆ ಹೊಡೆಯೋದು.. .. ಸೊಲ್ಪ ತಡ್ಕೊಂಡು ಇರ್ಲಿಕಾಗುದಿಲ್ವಾ…..

Advertisement

ಈಗ ನೋಡಿ ಹೆಚ್ಚು ಸಮಯ ಎನಾಗಿಲ್ಲ, ಸಾಧಾರಣ ಎಪ್ರಿಲ್ ತಿಂಗಳ ನಂತರ ನಮ್ಮೂರು ಕಲ್ಮಡ್ಕದಲ್ಲಿ ಕರೆಂಟ್ ರಾತ್ರಿ ಇರೋದಿಲ್ಲ, ಹಾ, ಹಗಲಂತೂ ಅಷ್ಟೇ…. ಈ ರಾತ್ರಿ ಮಲಗಿ ನಿದ್ದೆ ಮಾಡ್ಲಿಕಾಗೋದಿಲ್ವಾ, ಕರೆಂಟ್ ಕರೆಂಟ್ ಅಂತ ಅರೆಬ್ಬಾಯಿ ಯಾಕೆ…. ಈ ಹಳ್ಳಿಯ ಜನಗಳುಗೆ ಕರೆಂಟ್ ಬೇಕಂತೆ….ಎಂತಕೆ ಮಾರ್ರೇ…. ಬೇಸಿಗೆಯಲ್ಲಾದ್ರೆ ಸರಿ ತೋಟ ಕರೆಂಚದಾಗೆ ನೀರಾಕ್ಲಿಕೆ ಕರೆಂಟ್ ಸೊಲ್ಪ ಬೇಕಂತ ಹೇಳೋದ್ರಲಿ ಒಂದು ಅರ್ಥ ಉಂಟು….. ಈಗ ಮಳೆ ಬರೋವಾಗ ಇವ್ರಿಗೆ ಕರೆಂಟ್ ಯಾಕೆ….ಕೊಡ್ತೇವೆ, ಕೊಡ್ತೇವೆ, ಸೊಲ್ಪ ತಡ್ಕೊಳಿ…..ಈ ಕರೆಂಟ್ ಲೈನಿನ ಕಂಬ, ಸ್ಟೇ ವಯರುಗಳಲ್ಲಿ ಬೆಳ್ಳಾರೆ ಪೇಟೆ ಕಡೆಯಿಂದ ದಾಟಿ ನಮ್ಮ ಪೊಟ್ಟು ಹಳ್ಳಿ ಕಡೆ ತನ್ಕವೂ ಹಸಿರಸಿರಾಗಿ ಲತ್ತಂಡೆ ಮನೊಳಿ ಬಳ್ಳಿಗಳು ಹತ್ತಿಕೊಂಡಿವೆ,ಅದರಲ್ಲಿ ಧಾರಾಳ ತರ್ಕಾರಿ ಆದ್ರೆ ಎಷ್ಟೊಳ್ಳೆ ಆದಾಯ, ಐಡ್ಯ ಮೊಸಿಲ್ಲ ಆಯ್ತಾ……

ಕಪಿಟಿಸಿಯಲಿಗೆ ಒಂದು ಎಕ್ಸಟ್ರಾ ಆದಾಯ ಕೂಡಾ….ಹಾ….ವಿಸ್ಯ ಎಂತ ಗೊತ್ತಾ, ಈ ಕಂಬಕ್ಕೆ ಹತ್ತಿದ ಲತ್ತಣೆ ಬಳ್ಲಲ್ಲಾಗಿ ಕೆಲವು ಸಲ ಹೆಚ್ ಟಿ ಕರೆಂಟ್ ಜೋಯಿಂಕ್ ಅಂತ ನೆಲಕ್ಕೆ ಇಳ್ದು ಬಿಡೋದುಂಟಾ, ಈ ಕರೆಂಟಿಗೆ ವಯರಲ್ಲಿ ಬ್ಯಾಲೆನ್ಸ್ ಮಾಡ್ತಾ ಹೋಗ್ಲಿಕೆ ಸೊಲ್ಪ ಚದಿ, ಈ ತರ್ಕಾರಿ ಬಳ್ಳಿ ಗಾಳಿ ಮಳೆಗೆ ವಯರಿಗೆ ಮುಟ್ಟೂದನ್ನು ಕಾಯ್ತಾ ಇರೋ ಕರೆಂಟ್ ಜರಜರ ಜರಜರ ಅಂತ ನೆಲಕ್ಕೆ ಇಳಿದು ಪಾತಾಳಕ್ಕೆ ಹೋದಾಗ …… ಕಲ್ಮಡ್ಕದಂತ ಪೊಟ್ಟು ಹಳ್ಯಲ್ಲಿ ಲಟ್ಟೂಸ್ ಬಲ್ಬು ಚುಯಿಂಕ…ವಿಷಯ ಇಷ್ಟೇ….. ನಾಳ್ತು, ಬೇಸಿಗೆಯಲ್ಲಿ ದೊಂಬು ಕಾದು ಕಾದಾಗುವಾಗ ಈ ಲತ್ತಣೆ,ಮನೊಳಿ ಬಳ್ಲುಗಳು ಉಣುಂಗಿ ಕೆಪಿಟಿಸಿಯಲ್ ನ ಎಕ್ಸಟ್ರಾ ಆದಾಯ ಮುಗಿದಾಗ ಈ ಕರೆಂಟಿಗೆ ವಿಕ್ರಮ ಮತ್ತು ಬೇತಾಳನ ಕತೆಯ ಹಾಗೆ ನೆಲಕ್ಕೆ ಇಳಿಲೀಕೆ ದಾರಿ ಇಲ್ಲದೆ ನಿಮಗೆ ಸರಾಗ ಕರೆಂಟ್ ಬರ್ಬೋದು…ಅಷ್ಟರ ತನ್ಕ ಸೊಲ್ಪ ತಡ್ಕೊಳ್ತಿರೋ………………………..

ವಿಷಯ ತುಂಬಾ ಸಿಂಪಲ್….ಈ ಕರೆಂಟ್, ರಸ್ತೆ, ನೀರು ಮುಂತಾಗಿ ಸಾರ್ವಜನಿಕ ಹಿತ ವ್ಯವಸ್ಥೆಗಳನ್ನು ಅದಕ್ಕೆ ಅದಕ್ಕೆ ಜವಾಬ್ದಾರಿ ಇರುವ,ಹೊತ್ತ ಅಧಿಕಾರಿಗಳು, ಸಹಾಯಕರು ಕಾಲಕಾಲಕ್ಕೆ ಮೈಂಟೆನೆನ್ಸ್ ಇತ್ಯಾದಿಗಳನ್ನು ಮಾಡುತ್ತಾ ಬಂದರೆ ಈ ತಾಪತ್ರಯಗಳು ಇರೋದಿಲ್ಲ. ನಮಗೆ ಕಲ್ಮಡ್ಕದಂತಹ ಊರಿಗೆ ಕರೆಂಟ್ ಇರೋದೇ ಅಪರೂಪ. ಇದು ಯಾಕೇ ಅಂತ ಹೇಳ್ಳಿಕೆ ದೊಡ್ಡ ದೊಡ್ಡ ಇಂಜಿನಿಯರ್ ಆಚೆ ಈ ಈಚೆ ಈ ಈಈ ಸಣ್ಣ ಇಇ ಇಇಇ ಅಂತ ಪೋಸ್ಟೂ ಬೇಡ…..ಕಂಬದಲ್ಲಿ ಸ್ಟೇ ವಯರುಗಳಲ್ಲಿ ಹೆಚ್ ಟಿ ಲೈನುಗಳಿಗೆ ಹತ್ತಿ ಲೈನಿಗೆ ತಾಗುತ್ತಿರುವ ಕಾಡು ಬಳ್ಳಿಗಳನ್ನು ಕಾಲಕಾಲಕ್ಕೆ ಕಡಿದರೆ ಸಾಕು ಅಷ್ಟೇ…. ಇದನ್ನು ನಮ್ಮ ಊರ ಹಳ್ಳಿಯ , ವಿದ್ಯೆ ಅಂತ ದೋಡ್ಡ ವಿಸ್ಯ ಕಲಿಯದವನೂ ಹೇಳಬಲ್ಲ.

ವಿಷಯ ಎಂತ ಗೊತ್ತಾ….ಬೆಳ್ಲಾರೆಯಿಂದ ಈಚೆ ತಂಬಿನಮಕ್ಕಿಯಲ್ಲಿ ಹಳ್ಳಿಗಳಾಚೆ ಹೊರಟ ಹೆಚ್ ಟಿ ಲೈನುಗಳಿಗೆ ಅಟೋಮೆಟಿಕ್ ಬ್ರೇಕರ್ ಅಳವಡಿಸಲಾಗಿದೆ…. ಉದ್ದೇಶ ಸರಿಯಾಗೇ ಇದೆ…. ಅಕಸ್ಮಾತ್ ಲೈನಿಗೆ ಏನೋ ಬಿದ್ದರೋ,ಲೈನ್ ಕಡಿದು ಬಿದ್ದರೋ ವಿದ್ಯುತ್ ಪ್ರವಹಿಸಿ ಅವಘಡ ಆಗಬಾರದು ಎಂದು ಈ ಬ್ರೇಕರ್ ಗಳು ಲೈನ್ ಗ್ರೌಂಡ್ ಆದ ಕೂಡಲೇ ಅಟೋ ಆಫ್ ಕೊಡುತ್ತವೆ…… ನಮ್ಮ ಹಳ್ಳಿಗಳಿಗೆ ಕರೆಂಟ್ ಬರುವ ಲೈನಿನ ಪ್ರತೀ ಕಂಬದಲ್ಲೂ, ಸ್ಟೇ ವಯರಲ್ಲೂ ಕಾಡು ಬಳ್ಳಿಗಳು ಹತ್ತಿವೆ, ಮಳೆ ಬಂದಾಗ ಈ ಬಳ್ಳಿಗಳು ಭಾರವಾಗಿ ಕರೆಂಟ್ ಲೈನಿಗೆ ಮುಟ್ಟಿದಾಗ ಈ ಅಟೋ ಬ್ರೇಕರುಗಳು ಆಫ್ ಕೊಟ್ಟಿತು….ಪುನಃ ಒಂದು ನಿಮಿಷದಲ್ಲಿ ಅಟೋ ಓನ್ ಆಗ್ತದೆ, ಪುನಃ ಗ್ರೌಂಡ್ ಆದರೆ ಪುನಃ ಆಫ್ ,‌ಒಂದು ನಿಮಿಷ ಕಳೆದು ಓನ್… ಹೀಗೆ ಮೂರು ಸಲ ಆಫ್ ಆದರೆ ಮತ್ತೆ ಸಂಬಂದ ಪಟ್ಟವರಿಗೆ ಲೈನ್ ಆಫ್ ಆದ ಬಗ್ಗೆ ಸಂದೇಶ ಹೋಗುತ್ತದೆ, ಆಗ ಲೈನಲ್ಲಿ ಇರುವ ಫಾಲ್ಟ್ ಕ್ಲೀಯರ್ ಮಾಡಿ ಚಾರ್ಜ್ ಮಾಡಬೇಕು. ಹಗಲಿಡೀ ಈ ಓಪ್ ಓನ್ ವಿಕ್ರಮ ಬೇತಾಳ ಆಟ ಆಗ್ತಾ ಇರ್ತದೆ…. ಮೂಲ ಸಮಸ್ಯೆ ಬಗ್ಗೆ ಗಮನವೇ ಇಲ್ಲ….ರಾತ್ರಿ ಒಂಬತ್ತು ಹತ್ತರ ನಂತರ ಕರೆಂಟ್ ಹೋದರೆ, ಬ್ರೇಕರ್ ಆಫ್ ಕೊಟ್ಟರೆ ಸಂದೇಶ ಅಲ್ಲ ಗುಂಡು ಹೊಡೆದರೂ ಮತ್ತೆ ಮರುದಿವಸ ಬೆಳಗ್ಗೆ ಏಳರ ನಂತರ ಓನ್…… ದೇವಾ ಯಾರತ್ರ ಈ ಅವಸ್ಥೆ ಹೇಳಲೀ…… ಹಲವಾರು ವರ್ಷದ ಮೊದಲು ಮಳೆಗಾಲದ ಮೊದಲು ಲೈನ್ ಕ್ಲೀಯರ್ ಅಂತ ಊರವರೂ ಕೆಇಬಿ ಸಿಬಂದಿಗಳೂ ಸೇರಿ ಗೆಲ್ಲು ಬಳ್ಳಿಗಳನ್ನು ಕಡಿದು ಲೈನ್ ಮೇಲೆ ಬೀಳದಂತೆ ಮಾಡುವ ಕ್ರಮ ಇತ್ತು…ಈಗ ಅವರೂ ಇಲ್ಲ, ಇವರೂ ಇಲ್ಲ….

Advertisement

ಕರೆಂಟ್ ಲೈನ್ ಅದರಷ್ಟಕ್ಕೇ, ಮರ ಬಳ್ಳಿಗಳೂ ಅವರಷ್ಟಕ್ಕೇ, ವಿದ್ಯುತ್ ಬಳಕೆದಾರನೂ ಚಿಮಿಣಿ ಅಡಿಯಲ್ಲಿ ಅವನಷ್ಟಕ್ಕೇ……ಕರ್ಮ ಕರ್ಮ….ಉದ್ದಾರ ಆಗೋದು ಯಾವಾಗಪ್ಪಾ…..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಹಕ್ಕಿಗಳಿಗೆ ಗೂಡುಕಟ್ಟುವ ಪರಿಸರ ಪ್ರೇಮಿ..

ಹಕ್ಕಿಗಳಿಗೆ ಗೂಡುಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಟ್ಟಿರುವ ದಂಪತಿಗಳು ಬಂಟ್ವಾಳ ತಾಲೂಕಿನಲ್ಲಿದ್ದಾರೆ. ಇವರ…

9 hours ago

ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?

ಜಾಗತಿಕ ಮಟ್ಟದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಇನ್ನು…

12 hours ago

ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ

ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ  ರಾಜ್ಯ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಕೃಷಿ…

12 hours ago

ಆಶ್ಲೇಷ ನಕ್ಷತ್ರದಲ್ಲಿ ಬುಧ: ಈ 4 ರಾಶಿಗೆ ಹೆಜ್ಜೆ ಹೆಜ್ಜೆಗೂ ಕಂಟಕ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

12 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

20 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

22 hours ago