ಪೂರ್ವ ಶ್ರೀಲಂಕಾದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವು ಆನೆಗಳನ್ನು ಎಂದು ಸಂರಕ್ಷಣಾ ತಜ್ಞರು ಮತ್ತು ಪಶುವೈದ್ಯರು ಎಚ್ಚರಿಸಿದ್ದಾರೆ. ಶ್ರೀಲಂಕಾದ ಕೊಲಂಬೊದಿಂದ 210 ಕಿಲೋಮೀಟರ್ ದೂರದಲ್ಲಿರುವ ಅಂಪಾರಾ ಜಿಲೆಯ ಪಲ್ಲಕ್ಕಾಡು ಗ್ರಾಮದ ಡಂಪ್‌ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸಿದ ಪ್ರಕರಣದಲಗಲಿ ಕಳೆದ ಎಂಟು ವರ್ಷಗಳಲ್ಲಿ ಸುಮಾರು 20 ಆನೆಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಮೃತಪಟ್ಟ ಆನೆಗಳನ್ನು ಪರೀಕ್ಷೆಗೆ ಒಳಪಡಿಸಿದಾದ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಅನ್ನು ನುಂಗಿರುವುದು ಕಂಡುಬಂದಿದೆ. ಪಾಲಿಥಿನ್, ಆಹಾರದ ಹೊದಿಕೆಗಳು, ಪ್ಲಾಸ್ಟಿಕ್, ಇತರ ಜೀರ್ಣವಾಗದ ವಸ್ತುಗಳು ಮತ್ತು ನೀರು ಮರಣೋತ್ತರ ಪರೀಕ್ಷೆಯಲ್ಲಿ ನೋಡಿದ್ದೇವೆ ಎಂದು ವರದಿಯಲ್ಲಿ ವೈದ್ಯರು ಹೇಳಿದ್ದಾರೆ. ಶ್ರೀಲಂಕಾದಲ್ಲಿ ಆನೆಗಳನ್ನು ಪೂಜಿಸಲಾಗುತ್ತದೆ. ಆನೆ ಗಣತಿಯ ಪ್ರಕಾರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವನ್ಯಜೀವಿ ಪಶುವೈದ್ಯ ನಿಹಾಳ್ ಪುಪ್ಪಕುಮಾರ್ ತಿಳಿಸಿದ್ದಾರೆ.
ಆನೆಗಳು ಗ್ರಾಮಕ್ಕೆ ಬಂದಾಗ ಅವುಗಳನ್ನು ಓಡಿಲು ಹಲವಾರು ಪಟಾಕಿಗಳನ್ನು ಬಳಸುತ್ತಾರೆ ಮತ್ತು ಕೆಲವರು ತಮ್ಮ ಮನೆಗಳ ಸುತ್ತಲೂ ವಿದ್ಯುತ್ ಬೇಲಿಗಳನ್ನು ಹಾಕಿದ್ದಾರೆ. ಆದರೆ ಗ್ರಾಮಸ್ಥರಿಗೆ ಸಾಮಾನ್ಯವಾಗಿ ವಿದ್ಯುತ್ ಬೇಲಿಗಳನ್ನು ಹೇಗೆ ಅಳವಡಿಸಬೇಕೆಂದು ತಿಳಿದಿಲ್ಲ ಎಂದು ಸ್ಥಳೇಯ ಗ್ರಾಮಸ್ಥ ಕೀರ್ತಿ ರಣಸಿಂಗ್ ಹೇಳಿದರು.