ಸಿಂಹದ ಶಕ್ತಿಯ ಬಗ್ಗೆ ಎರಡು ಮಾತಿಲ್ಲ. ಸಿಂಹಕ್ಕೆ ಶಕ್ತಿಯ ಜೊತೆಗೆ ಯುಕ್ತಿಯೂ ಇರುವುದರಿಂದ ಅದೊಂದು ಚಾಣಾಕ್ಷ ಪ್ರಾಣಿ. ಆದರೆ ಇಲ್ಲಿ ಆನೆಗಳ ಹಿಂಡು ಕಂಡರೆ ಸಿಂಹ ಓಡಿ ಹೋಗುತ್ತದೆ..!. ಈ ವಿಡಿಯೋ ಅತ್ಯಂತ ಗಮನ ಸೆಳೆದಿದೆ.
ಎರಡು ಗಂಡು ಸಿಂಹಗಳು ಆನೆಯನ್ನು ಕೊಲ್ಲುವಷ್ಟು ಶಕ್ತಿ ಹೊಂದಿವೆ. ಒಂದು ಗಂಡು ಸಿಂಹ ಕೂಡ ಎಳೆಯ ಆನೆಯನ್ನು ಸೋಲಿಸಬಲ್ಲದು.ಆದರೆ, ಆನೆಗಳ ಹಿಂಡನ್ನು ಕಂಡ್ರೆ ಮಾತ್ರ ಬೆಕ್ಕಿನ ಮರಿಯಂತೆ ಸಿಂಹಗಳು ಓಡಿ ಹೋಗುತ್ತವೆ. ಆನೆಗಳ ಹಿಂಡಿನೊಂದಿಗಿರುವ ಎಳೆಯ ಹಾಗೂ ದುರ್ಬಲ ಆನೆಯನ್ನು ಬೇಟೆಯಾಡುವುದು ಸಿಂಹಗಳಿಗೆ ಸ್ವಲ್ಪ ಕಷ್ಟ ಸಾಧ್ಯವೇ ಹೌದು. ಇದೀಗ ವೈರಲ್ ಆಗಿರುವ ವಿಡಿಯೋ ಕೂಡ ಅಂಥದ್ದೇ. ಕಾಡಿನಲ್ಲಿ ಸಿಂಹಗಳ ಗುಂಪು ಒಂದೆಡೆ ಕೂತು ವಿಶ್ರಾಂತಿ ಪಡೆಯುತ್ತಿದ್ದವು. ಈ ವೇಳೆ ಗಜರಾಜನ ದೊಡ್ಡ ಗುಂಪು ಅದರತ್ತ ಧಾವಿಸಿದೆ. ಇದರಿಂದ ಹೆದರಿದ ಸಿಂಹಗಳು ಒಂದೊಂದಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾವೆ. ನಾಯಿಯನ್ನು ಕಂಡಾಗ ಬೆಕ್ಕು ಓಟಕ್ಕೀಳುವಂತೆ ಸಿಂಹಗಳು ಅಲ್ಲಿಂದ ಎಸ್ಕೇಪ್ ಆಗಿವೆ.ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನ ಅನಿಮಲ್‌ಕೋಟರಿ ಎಂಬ ಪುಟದಿಂದ ಹಂಚಿಕೊಳ್ಳಲಾಗಿದೆ.