ಒಂಟಿ ಮನೆಗಳೇ ಈ ಕಳ್ಳನ ಟಾರ್ಗೆಟ್…! | ಅಕ್ಕಿ, ಬೆಲ್ಲ, ತರಕಾರಿ ತಿನ್ನುವ ಈ ಚೋರ ಯಾರು ? | ಈ ಚೋರನ ಸೆರೆಗೆ ಸಾಕಾನೆಗಳ ಕಾರ್ಯಾಚರಣೆ…! |

June 6, 2023
1:50 PM

ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ, ಚಿನ್ನ ಬೆಳ್ಳಿ, ನಗದು ಕಳವು ಮಾಡುವುದನ್ನು ಕೇಳಿದ್ದೀವಿ. ಆದರೆ ಇಲ್ಲೋಬ್ಬ ಕಳ್ಳ ಅಕ್ಕಿ, ಬೆಲ್ಲ, ತರಕಾರಿ ಕದ್ದು ಯಾರ ಕಣ್ಣಿಗೂ ಕಾಣದಂತೆ ಪರಾರಿಯಾಗುತ್ತಿದ್ದಾನೆ.  ಮನೆಯಿಂದ ಇವೆಲ್ಲ ಕದ್ದು ಉಂಡು ಮಜಾ ಮಾಡಿ ಉಂಡಾಡಿ ಗುಂಡನ ಹಾಗೆ ಕಣ್ಣು ತಪ್ಪಿಸಿ ತಿರುಗುತ್ತಿದ್ದಾನೆ ಈ ಕಳ್ಳ…! ಈ ಮಹಾನ್ ಕಿಲಾಡಿ ಯಾರು..? .

Advertisement
Advertisement

ಬಂಡೀಪುರ ಅರಣ್ಯದಂಚಿನಲ್ಲಿ ಕಾಡಾನೆ ಪುಂಡಾಟ ಜೋರಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ ಮೂರು ರಾಜ್ಯಗಳಲ್ಲಿಯೂ ಆನೆಗಳು ಸಂಚರಿಸಿ ಬೆಳೆ ನಾಶ, ಸೋಲಾರ್ ಬೇಲಿ ತಂತಿ ತುಳಿದು ಹಾನಿ ಮಾಡಿವೆ. ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಅಲ್ಲಿ ಒಂಟಿ ಸಲಗ ಅಕ್ಕಿ, ಬೆಲ್ಲ ತರಕಾರಿ ಮೇಯುತ್ತಿದೆ. ಗುಂಡ್ಲುಪೇಟೆ ತಾಲೂಕು ಹುಂಡೀಪುರ, ಮಂಗಲ, ಜಕ್ಕಳ್ಳಿ, ಎಲಚೆಟ್ಟಿ ಸೇರಿದಂತೆ ಹಲವೆಡೆ ಕಾಡಾನೆ ಉಪಟಳ ಹೆಚ್ಚಾಗಿದೆ. ಪುಂಡಾನೆ ಸೆರೆಗೆ ಸಾಕಾನೆಗಳ ಕಾರ್ಯಾಚರಣೆ ಇದೀಗ ಆರಂಭಿಸಲಾಗಿದೆ.

 

ಕಳೆದ 5 ತಿಂಗಳಿಂದ ನಿರಂತರವಾಗಿ ಉಪಟಳ ನೀಡುತ್ತಿರುವ ಒಂಟಿ ಆನೆಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. 5 ಸಾಕಾನೆಗಳಿಂದ ಪುಂಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ದುಬಾರೆ, ರಾಮಾಪುರ ಬಿಳಿಗಿರಿರಂಗನ ಬೆಟ್ಟದಿಂದ ಸಾಕಾನೆಗಳನ್ನು ಕರೆತರಲಾಗಿದೆ.

ಈಗಾಗಲೇ ಡ್ರೋನ್ ಕಾರ್ಯಾಚರಣೆ ಮೂಲಕ ಪುಂಡಾನೆ ಪತ್ತೆಹಚ್ಚಲಾಗಿದೆ. ಎಲಚೆಟ್ಟಿ ಬಳಿ ಒಂಟಿ ಸಲಗದ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಅರಣ್ಯ ಸಿಬ್ಬಂದಿ ಪುಂಡಾನೆ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ.

Advertisement

ಮಾರಳ್ಳಿ ಗ್ರಾಮದಲ್ಲಿ ಕಳೆದ ಶುಕ್ರವಾರ ರಾತ್ರಿ ಆನೆ ತುಳಿದು ರೈತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ಎರಡು ಜೀಪ್‌ಗಳನ್ನು ಜಖಂಗೊಳಿಸಿದ್ದಲ್ಲದೇ, ಪ್ರತಿಭಟನೆ ನಡೆಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಹಾಗೂ ಪುಂಡಾನೆಯನ್ನು ಹಿಡಿದು ಬೇರೆಡೆ ಬಿಡುವಂತೆ ಒತ್ತಾ ಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದರು. ಈ ಸಂದರ್ಭ ದಲ್ಲಿ ಪುಂಡಾನೆಯನ್ನು ಹಿಡಿಯುವ ಭರವಸೆಯನ್ನು ಅರಣ್ಯಾಧಿಕಾರಿಗಳು ನೀಡಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group