ಮುನ್ನಾರ್ ಸಮೀಪದ ಕಲ್ಲರ್ ಪ್ರದೇಶದಲ್ಲಿ ಆಹಾರ ಅರಸಿ ಬಂದು ಪ್ಲಾಸ್ಟಿಕ್ ರಾಶಿಯಲ್ಲಿ ಹೆಕ್ಕಿ-ಹೆಕ್ಕಿ ತ್ಯಾಜ್ಯ ತಿಂದ ಕಾಡಾನೆ |

May 27, 2024
9:31 PM

ಮನುಷ್ಯ ಪರಿಸರವನ್ನು(Nature) ಹಾಳುಗೆಡವುತ್ತಿದ್ದಾನೆ. ಇದರಿಂದ ಮನುಷ್ಯನಿಗೆ(Human) ಮಾತ್ರವಲ್ಲದೆ  ಪ್ರಾಣಿಗಳನ್ನು(Animals) ಬಲಿ ಕೊಡಲಾಗುತ್ತಿದೆ. ನಾವು ಅತಿಯಾಗಿ ಬಳಸುವ ಪ್ಲಾಸ್ಟಿಕ್‌(Plastic) ಇಡೀ ಪರಿಸರವನ್ನೇ ನುಂಗಿದೆ. ಈಗ ಪ್ರಾಣಿ ಪಕ್ಷಿಗಳ ಹೊಟ್ಟೆ ತುಂಬಿಸುವ ಹಾಗೂ ಪ್ರಾಣವನ್ನು ಬಲಿ ಪಡೆಯುವ ವಸ್ತುವಾಗಿದೆ. ದನಗಳು(Cow), ನಾಯಿ(Dogs), ಹಾವು, ಪಕ್ಷಿಗಳು ಪ್ಲಾಸ್ಟಿಕ್‌ ತಿನ್ನುವ ಬಗ್ಗೆ ಕೇಳಿದ್ಧೇವೆ, ನೋಡಿದ್ದೇವೆ. ಅದರಿಂದ ಪ್ರಾಣಿಗಳು ಪ್ರಾಣ ಬಿಟ್ಟಿವೆ ಕೂಡ. ಇದೀಗ ಕಾಡಾನೆಗಳ(Elephants) ಸರದಿ.  ಆಹಾರ ಅರಸಿ ಕಾಡಾನೆಯು ಮುನ್ನಾರ್(Munnar) ಸಮೀಪದ ಕಲ್ಲರ್ ಪ್ರದೇಶದಲ್ಲಿ ಕಸ ಮತ್ತು ತರಕಾರಿ ತ್ಯಾಜ್ಯ ವಿಂಗಡಣೆ(Waste dumping yard) ಮಾಡುವ ಸ್ಥಳಕ್ಕೆ ಲಗ್ಗೆ ಇಟ್ಟಿದೆ. ಈ ವೇಳೆ, ಪ್ಲಾಸ್ಟಿಕ್​ ಕವರ್​​ಗಳಲ್ಲಿ ಸುತ್ತಿ ಎಸೆದ ತರಕಾರಿ ತ್ಯಾಜ್ಯವನ್ನು(Vegetable waste) ಸೇವಿಸಿದೆ. ಇದೀಗ ಇದರ ವಿಡಿಯೋ  ವೈರಲ್​ ಆಗಿವೆ.

Advertisement

ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಅರಣ್ಯವು ಸಾಕಷ್ಟು ವನ್ಯಜೀವಿಗಳ ವಾಸಸ್ಥಾನವಾಗಿದೆ. ಇಲ್ಲಿ ಸಂಚರಿಸುವಾಗ ಪ್ರವಾಸಿಗರು ರಸ್ತೆ ಬದಿಯಲ್ಲೇ ವನ್ಯಜೀವಿಗಳ ವೀಕ್ಷಿಸುತ್ತಾರೆ. ಅಷ್ಟೊಂದು ಸಮೀಪಕಕ್ಕೆ ಅನೇಕ ಪ್ರಾಣಿಗಳು ಬಂದಿರುತ್ತವೆ. ಇದೇ ವೇಳೆ, ಪ್ರವಾಸಿಗರು ಫೋಟೋ, ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿ ಕಾಣಬಹುದು. ಆದರೆ, ಇದರ ನಡುವೆ ಪಡಯಪ್ಪ ಕಾಡಾನೆ ಪ್ಲಾಸ್ಟಿಕ್ ರಾಶಿಯಲ್ಲಿ ಬಿದ್ದಿದ್ದ ತರಕಾರಿ ತ್ಯಾಜ್ಯವನ್ನು ಹೆಕ್ಕಿ, ಹೆಕ್ಕಿ ಸೇವಿಸುತ್ತಿರುವ ಆಘಾತಕಾರಿ ವಿಡಿಯೋ ಬೆಳಕಿಗೆ ಬಂದಿದೆ.

ಮುನ್ನಾರ್‌ ಅರಣ್ಯ ಪ್ರದೇಶದಲ್ಲಿ ಪಡಯಪ್ಪ ಕಾಡಾನೆ ಆಗಾಗ್ಗೆ ಸಾರ್ವಜನಿಕ ಸ್ಥಳಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತದೆ. ಆಹಾರಕ್ಕಾಗಿ ವಸತಿ ಪ್ರದೇಶಗಳಿಗೆ ಪ್ರವೇಶಿಸಿ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಗಳಿಗೆ ಹಾನಿ ಮಾಡುತ್ತದೆ.

Advertisement

ಇಷ್ಟೇ ಅಲ್ಲ, ಕಸ ವಿಂಗಡಣೆಗೆ ಸಂಗ್ರಹಿಸಿದ ತ್ಯಾಜ್ಯದಿಂದ ತರಕಾರಿ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನೂ ಕಾಡಾನೆ ತಿನ್ನುತ್ತಿರುವ ದೃಶ್ಯವನ್ನು ಅರಣ್ಯ ಕಾರ್ಯಕರ್ತರು ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ ಸೇವನೆಯಿಂದ ಆನೆಯ ಆರೋಗ್ಯಕ್ಕೆ ಅಪಾಯ ಉಂಟುವಾಗುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಈ ಪ್ರದೇಶದಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಿದೆ. ನಿತ್ಯವೂ ಆನೆಗಳ ಭಯದಿಂದಲೇ ಕೆಲಸಕ್ಕೆ ಹೋಗುವಂತಾಗಿದೆ ಎಂದು ತೋಟದ ಕಾರ್ಮಿಕರು ಹೇಳುತ್ತಾರೆ. ಆದ್ದರಿಂದ ಆನೆಗಳನ್ನು ಕಾಡಿಗೆ ಓಡಿಸಲು ಅರಣಾಧಿಕಾರಿಗಳು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

Advertisement
  • ಅಂತರ್ಜಾಲ ಮಾಹಿತಿ
ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು
August 13, 2025
7:38 AM
by: The Rural Mirror ಸುದ್ದಿಜಾಲ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
August 13, 2025
7:26 AM
by: The Rural Mirror ಸುದ್ದಿಜಾಲ
ತುಳುವರ ಆಟಿ ತಿಂಗಳು | ಆಟಿಯ ಕೊನೆಗೆ ಆಟಿಗೊಂದು ಸುತ್ತು….
August 13, 2025
7:15 AM
by: ದ ರೂರಲ್ ಮಿರರ್.ಕಾಂ
ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಕ್ಕೆ ಕ್ರಮ | ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ
August 12, 2025
8:47 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group