ಕಳೆದ ವಾರವಷ್ಟೇ ಆನೆಯೊಂದು(Elephant) ವಿದ್ಯುತ್ ತಂತಿ(Electric wire) ತಗಲಿ ಮೃತಪಟ್ಟ(Death) ಬಗ್ಗೆ ಕೇಳಿದ್ದೆವು. ಇದೀಗ ಮತ್ತೋಂದು ಆನೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ತನ್ನ ಪ್ರಾಣ ಕಳೆದುಕೊಂಡಿದೆ. ಮಾನವ ಹಾಗೂ ಪ್ರಾಣಿಗಳ ಸಂಘರ್ಷದಲ್ಲಿ ಆನೆಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುವಂತಾಗಿದೆ. ತೆರೆದ ಬಾವಿಗೆ (Well) ಬಿದ್ದು ಕಾಡಾನೆ (Wild Elephant ) ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ (Virajpet) ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬಾವಿಯನ್ನು ಕೊರೆಯಲಾಗಿತ್ತು. ಸೋಮವಾರ ರಾತ್ರಿ 11 ಗಂಟೆಗೆ ನಿರ್ಮಾಣ ಹಂತದಲ್ಲಿದ್ದ ಬಾವಿಗೆ ಬಿದ್ದು ಆನೆ ಮೃತಪಟ್ಟಿದೆ. ಕಳೆದ ಹಲವು ದಿನಗಳಿಂದ ಈ ಏರಿಯಾದಲ್ಲಿ ಆನೆಗಳು ಊರಿಗೆ ದಾಳಿ ಇಡುತ್ತಿದ್ದವು. ಇದೀಗ ಈ ಘಟನೆ ನಡೆದಿದೆ. ಪಾಲೇಂಗಡ ಬಿದ್ದಪ್ಪ ಶಂಬು ಆವರ ಮನೆ ಮುಂದೆ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಆಧಿಕಾರಿಗಳು ಭೇಟಿ ನೀಡಿದ್ದಾರೆ.