ಕಾಡಿನಿಂದ ಆಹಾರ ಅರಸುತ್ತಾ ಬಂದ ನಾಡಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡೊಂದು ತೋಟದೊಳಗೆ ನುಗ್ಗಿದ ಪರಿಣಾಮ ಕೆರೆಗೆ ಬಿದ್ದಿರುವ ಘಟನೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ.ಕೆರೆಗೆ ಬಿದ್ದ ಎರಡು ದೊಡ್ಡ ಮತ್ತೆರಡು ಮರಿಯಾನೆಗಳು ಮೇಲೆ ಬರಲಾಗದೇ ಒದ್ದಾಡುತ್ತಿದ್ದು ಆನೆಯನ್ನು ಮೇಲೆತರಿಸುವ ತಯಾರಿ ನಡೆಸಲಾಗುತ್ತಿದೆ.
ಅಜ್ಜಾವರದ ತುದಿಯಡ್ಕದ ಸಂತೋಷ್ ಎಂಬವರ ತೋಟದಲ್ಲಿ ಈ ಘಟನೆ ನಡೆದಿದ್ದು, ಕೆರೆಗೆ ಬಿದ್ದ ಎರಡು ದೊಡ್ಡ ಮತ್ತೆರಡು ಮರಿಯಾನೆಗಳು ಮೇಲೆ ಬರಲಾಗದೇ ಒದ್ದಾಡುತ್ತಿದೆ.
ಸ್ಥಳಕ್ಕೆ ಸುಳ್ಯ ವಲಯ ಅರಣ್ಯಾಧಿಕಾರಿಗಳು ದಾಂಗುಡಿ ಇಟ್ಟಿದ್ದು, ಆನೆಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಅಜ್ಜಾವರ, ಆಲೆಟ್ಟಿ ಗ್ರಾಮಗಳಲ್ಲಿ ಆನೆಗಳ ಹಾವಳಿ ಜೋರಾಗಿದ್ದು, ಅಪಾರ ಪ್ರಮಾಣದ ಕೃಷಿನಾಶ ಸಂಭವಿಸುತ್ತಿರುತ್ತದೆ.
ಆಹಾರ ಮತ್ತು ನೀರನ್ನು ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ಹಿಂಡೊಂದು ತೋಟದೊಳಗಿನ ಕೆರೆಗೆ ಬಿದ್ದು ಮೇಲೆ ಬರಲಾಗದೆ ಕೆರಯಲ್ಲೇ ಬಾಕಿಯಾಗಿರವ ಘಟನೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ.

ಸ್ಥಳಕ್ಕೆ ಸುಳ್ಯ ವಲಯ ಅರಣ್ಯಾಧಿಕಾರಿಗಳು ಬೇಟಿ ನೀಡಿದ್ದು, ಆನೆಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಕಾಡಿನಲ್ಲಿ ಆಹಾರ ನೀರು ಕಡಿಮೆಯಾದಾಗ ಆಹಾರ ಅರಸಿ ಬರುವ ಪ್ರಾಣಿಗಳು ಕೆರೆ ನೀರಿನ ಆಳದ ಅಂದಾಜು ಇಲ್ಲದೆ ಬಿದ್ದು ಸಿಕ್ಕಿ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ,ಕೆರೆಗೆ ಬಿದ್ದ ಮರಿಯಾನೆ ರಕ್ಷಣೆಗೆ ದಾವಿಸಿದ ಹಿರಿಯಾನೆಗಳೂ ಕೆರೆಯಲ್ಲಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅಜ್ಜಾವರ, ಆಲೆಟ್ಟಿ ಗ್ರಾಮಗಳಲ್ಲಿ ಆನೆಗಳ ಹಾವಳಿ ಜೋರಾಗಿದ್ದು, ಅಪಾರ ಪ್ರಮಾಣದ ಕೃಷಿನಾಶ ಅಗಾಗ ನಡೆಯುತ್ತಲೇ ಇರುತ್ತವೆ.





ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel