ಚಿಕ್ಕಮಂಗಳೂರು ತಾಲೂಕಿನ ಬೀಕನಹಳ್ಳಿ, ಹಂಪಾಪುರ ಗ್ರಾಮದಲ್ಲಿ ಇತ್ತೀಚೆಗೆ ಆನೆ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ರೈತರೇ ತೋಟದಲ್ಲಿ ಮೈಕ್ ಸೆಟ್ ಹಾಕಿ ಆನೆ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಬೀಕನಹಳ್ಳಿ ಹಾಗೂ ಹಂಪಾಪುರ ಗ್ರಾಮದ ತೋಟಗಳಲ್ಲಿ ಸುಮಾರು 30 ಕಡೆ ಅಲ್ಲಲ್ಲಿ ಮೈಕ್ ಸೆಟ್ ಕಟ್ಟಿದ್ದಾರೆ. ಸಂಜೆ 6 ಗಂಟೆಯಾಗುತ್ತಿದ್ದಂತೆ ಡಿಜೆ ಸೌಂಡ್ ಶುರುವಾಗುತ್ತೆ. ಈ ಮೈಕ್ ಸೆಟ್‍ನಲ್ಲಿ ಆನೆ ಬಂತು ಓಡಿಸ್ರೋ…. ಈ ಕಡೆ ಬಂತು…. ಆ ಕಡೆ ಬಂತು… ಅಂತ ಕೂಗುವ ಶಬ್ಧ, ಪಟಾಕಿ ಸಿಡಿಯುವ ಶಬ್ಧ. ಇದರಿಂದ ಆನೆ ಹಾವಳಿ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತೆ ಅನ್ನೋದು ರೈತರ ನಂಬಿಕೆ.
ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಕಾಡುಪ್ರಾಣಿಗಳು, ಆನೆಗಳಿಂದ ಜನರ ಜೀವ ಹಾಗೂ ಬೆಳೆ ಎರಡನ್ನೂ ಉಳಿಸುವುದಕ್ಕೆ ಮುಂದಾಗಬೇಕೆಂಬುದು ಜಿಲ್ಲೆಯ ಜನರ ಬೇಡಿಕೆಯಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel