ಹಾಲು ಸೊಸೈಟಿಗೆ ಹಾಲು ನೀಡಲು ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ ನಡೆಸಿ ಯುವಕ ಗಂಭೀರ ಗಾಯಗೊಂಡ ಘಟನೆ ಕೊಲ್ಲಮೊಗ್ರ ಗ್ರಾಮದ ಇಡ್ನೂರು ಎಂಬಲ್ಲಿ ನಡೆದಿದೆ. ಗಾಯಗೊಂಡ ಯುವಕ ಕೋನಡ್ಕ ನಿವಾಸಿ ಗುರುಪ್ರಸಾದ್.
ಭಾನುವಾರ ಮುಂಜಾನೆ ಕೊಲ್ಲಮೊಗ್ರ ಗ್ರಾಮದ ಇಡ್ನೂರು ಹಾಲು ಸೊಸೈಟಿಗೆ ಮನೆಯಿಂದ ಹಾಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಗುರುಪ್ರಸಾದ್ ಮೇಲೆ ಕಾಡಾನೆ ದಾಳಿ ನಡೆಸಿದೆ. ಯುವಕನ ಮೇಲೆ ದಾಳಿ ಮಾಡಿದ ಆನೆ ಆತನನ್ನು ಕೆಲ ದೂರದವರೆಗೆ ಎಳೆದೊಯ್ದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಗುರುಪ್ರಸಾದ್ ಮೇಲೆ ಆನೆ ದಾಳಿಯ ಘಟನೆ ನೋಡಿದ ಸ್ಥಳೀಯರೊಬ್ಬರು ಊರಿನ ಮಂದಿಗೆ ತಿಳಿಸಿದ್ದು ನಂತರ ಸ್ಥಳೀಯರು ಸೇರಿ ಕಾಡಾನೆಯನ್ನು ಓಡಿಸಿದ್ದಾರೆ. ಗಾಯಗೊಂಡ ಯುವಕನನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲಮೊಗ್ರದಲ್ಲಿ ಯುವಕನ ಮೇಲೆ ಕಾಡಾನೆ ದಾಳಿ. #elephant #elephantattack #ಆನೆದಾಳಿ pic.twitter.com/c2kF7W1r7F
— theruralmirror (@ruralmirror) March 13, 2022
Advertisement
ಕಳೆದ ಕೆಲ ಸಮಯದ ಹಿಂದೆಯೂ ಕೊಲ್ಲಮೊಗ್ರ ಪರಿಸರದಲ್ಲಿ ಆನೆ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡ ಘಟನೆಗಳು ನಡೆದಿದೆ. ಈ ಪರಿಸರದಲ್ಲಿ ತೋಟಗಳ ಮೇಲೆ ಕಾಡಾನೆ ದಾಳಿ ನಡೆಯುತ್ತಲೇ ಇದೆ.