ಕೊಲ್ಲಮೊಗ್ರ ಆನೆ ದಾಳಿ | ಹಾಲು ಕೊಡಲು ತೆರಳುತ್ತಿದ್ದ ಯುವಕನ ಮೇಲೆ ಆನೆ ದಾಳಿ | ಗಂಭೀರ ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು |

March 13, 2022
9:37 AM

ಹಾಲು ಸೊಸೈಟಿಗೆ ಹಾಲು ನೀಡಲು ಬೈಕ್‌ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ ನಡೆಸಿ ಯುವಕ ಗಂಭೀರ ಗಾಯಗೊಂಡ ಘಟನೆ ಕೊಲ್ಲಮೊಗ್ರ ಗ್ರಾಮದ ಇಡ್ನೂರು ಎಂಬಲ್ಲಿ ನಡೆದಿದೆ. ಗಾಯಗೊಂಡ ಯುವಕ ಕೋನಡ್ಕ‌ ನಿವಾಸಿ ಗುರುಪ್ರಸಾದ್.

ಭಾನುವಾರ ಮುಂಜಾನೆ ಕೊಲ್ಲಮೊಗ್ರ ಗ್ರಾಮದ ಇಡ್ನೂರು ಹಾಲು ಸೊಸೈಟಿಗೆ ಮನೆಯಿಂದ ಹಾಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಗುರುಪ್ರಸಾದ್ ಮೇಲೆ ಕಾಡಾನೆ ದಾಳಿ ನಡೆಸಿದೆ. ಯುವಕನ ಮೇಲೆ ದಾಳಿ ಮಾಡಿದ ಆನೆ  ಆತನನ್ನು ಕೆಲ ದೂರದವರೆಗೆ ಎಳೆದೊಯ್ದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.  ಗುರುಪ್ರಸಾದ್ ಮೇಲೆ ಆನೆ ದಾಳಿಯ ಘಟನೆ ನೋಡಿದ ಸ್ಥಳೀಯರೊಬ್ಬರು ಊರಿನ ಮಂದಿಗೆ ತಿಳಿಸಿದ್ದು ನಂತರ ಸ್ಥಳೀಯರು ಸೇರಿ ಕಾಡಾನೆಯನ್ನು  ಓಡಿಸಿದ್ದಾರೆ. ಗಾಯಗೊಂಡ ಯುವಕನನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿದೆ.

Advertisement

 

Advertisement

ಕಳೆದ ಕೆಲ ಸಮಯದ ಹಿಂದೆಯೂ ಕೊಲ್ಲಮೊಗ್ರ ಪರಿಸರದಲ್ಲಿ ಆನೆ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡ ಘಟನೆಗಳು ನಡೆದಿದೆ. ಈ ಪರಿಸರದಲ್ಲಿ ತೋಟಗಳ ಮೇಲೆ ಕಾಡಾನೆ ದಾಳಿ ನಡೆಯುತ್ತಲೇ ಇದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಾದ್ಯಂತ ಚುರುಕುಗೊಂಡ ನೈಋತ್ಯ ಮುಂಗಾರು – ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಮುಂದುವರಿಕೆ
July 1, 2026
7:06 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಜುಲೈ 2 ರಂದು ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
July 1, 2026
6:41 PM
by: ದ ರೂರಲ್ ಮಿರರ್.ಕಾಂ
ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿ ತಡೆ – ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವರ್ತಕರ ಮನವಿ
July 1, 2026
2:57 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 01-07-2026 | ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಸ್ವಲ್ಪ ಇಳಿಕೆ – ಜುಲೈ 4ರಿಂದ ಮತ್ತೆ ಚುರುಕು!
July 1, 2026
11:29 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror