ಯಾವುದೇ ಸಂಸ್ಥೆಯ ನಿಜವಾದ ಶಕ್ತಿ ಅದರ ಕಟ್ಟಡಗಳು, ಯಂತ್ರೋಪಕರಣಗಳು ಅಥವಾ ಆರ್ಥಿಕ ಸಾಮರ್ಥ್ಯದಲ್ಲಿಲ್ಲ ಅದು ಅದರ ಮಾನವ ಸಂಪನ್ಮೂಲಗಳಲ್ಲಿ ಅಡಗಿದೆ. ಉದ್ಯೋಗಿಗಳೇ ಸಂಸ್ಥೆಯ ಹೃದಯ. ಅವರು ಸಮರ್ಪಣೆಯಿಂದ ಕೆಲಸ ಮಾಡಿದಾಗ ಸಂಸ್ಥೆ ಅರಳುತ್ತದೆ; ಉತ್ಸಾಹ ಕುಂದಿದರೆ ಅತ್ಯಾಧುನಿಕ ವ್ಯವಸ್ಥೆಗಳೂ ಫಲ ನೀಡುವುದಿಲ್ಲ.
ಯಶಸ್ವೀ ಸಂಸ್ಥೆಗಳು ಗೋಡೆಗಳಿಂದಲ್ಲ , ಹೃದಯಗಳಿಂದ ನಿರ್ಮಾಣವಾಗುತ್ತವೆ!
ಉದ್ಯೋಗಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸದಿರುವ ಕಾರಣಗಳು
ಉದ್ಯೋಗಿಗಳು ಸಂಸ್ಥೆ ತೊರೆಯುವ ಪ್ರಮುಖ ಕಾರಣಗಳು
🔹ಮಾನವೀಯ ಗೌರವದ ಕೊರತೆ
🔹ಸಂವೇದನೆರಹಿತ ಅಥವಾ ಕಠೋರ ಮೇಲಧಿಕಾರಿಗಳು
🔹ಅಸ್ಪಷ್ಟ ಗುರಿಗಳು ಮತ್ತು ಸ್ಪಷ್ಟ ನೀತಿಗಳ ಅಭಾವ
🔹ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಕುಸಿತ
ಕೆಲಸದ ವಾತಾವರಣ — ಸಂಸ್ಥೆಯ ಜೀವಶ್ವಾಸ : “ಕೆಲಸದ ವಾತಾವರಣ” ಎಂದರೆ ಕೇವಲ ಕಚೇರಿ ಅಥವಾ ಯಂತ್ರಗಳಲ್ಲ; ಅದು ಉದ್ಯೋಗಿಗಳು ಪ್ರತಿದಿನ ಅನುಭವಿಸುವ ಭಾವನಾತ್ಮಕ, ಮಾನಸಿಕ ಮತ್ತು ವೃತ್ತಿಪರ ವಾತಾವರಣ.
ಧನಾತ್ಮಕ ಕೆಲಸದ ವಾತಾವರಣದ ಆರು ಆಧಾರಸ್ತಂಭಗಳು:
“ವಾರ್ಷಿಕ ವೇತನ ಪರಿಷ್ಕರಣೆ ಕೇವಲ ಒಂದು ಸಂಖ್ಯೆಯಲ್ಲ ,ಅದು ಉದ್ಯೋಗಿಗಳ ಮನೋಬಲದಲ್ಲಿನ ಹೂಡಿಕೆ.”
ನಾಯಕರು ಮತ್ತು ಆಡಳಿತಾಧಿಕಾರಿಗಳ ಪಾತ್ರ
ದೃಷ್ಟಿವಂತ ಮತ್ತು ಸಹಾನುಭೂತಿಪೂರ್ಣ ನಾಯಕರು ಜನಕೇಂದ್ರಿತ ದೃಷ್ಟಿಕೋನದಿಂದ ಸಂಸ್ಥೆಗಳನ್ನು ಮುನ್ನಡೆಸುತ್ತಾರೆ. ಅವರು ನೈತಿಕತೆ, ಸಮಯಪಾಲನೆ ಮತ್ತು ಸಮರ್ಪಣೆ ಮೂಲಕ ಮಾದರಿಯಾಗಿಯೇ ನಾಯಕತ್ವ ತೋರಿಸಬೇಕು. ಅವರ ನಡೆ-ನುಡಿ ನಂಬಿಕೆ, ಗೌರವ ಮತ್ತು ಸಹಕಾರವನ್ನು ಪ್ರೇರೇಪಿಸಿ ಸೌಹಾರ್ದಪೂರ್ಣ ವಾತಾವರಣವನ್ನು ನಿರ್ಮಿಸಬೇಕು.
ಉತ್ತೇಜನೆಯ ಸಂಸ್ಕೃತಿ : ದೋಷಗಳಿಗಿಂತ ಶಕ್ತಿಗಳ ಗುರುತಿಸುವಿಕೆಗೆ ಒತ್ತು ನೀಡಿ. ಸರಳ ಆದರೆ ಅರ್ಥಪೂರ್ಣ ನಡೆಗಳು ಸಂಸ್ಥೆಯ ಸಂಸ್ಕೃತಿಯನ್ನು ಪರಿವರ್ತಿಸಬಹುದು:
ನಿಯಮಿತ ತರಬೇತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ಹೊಸ ಸವಾಲುಗಳು ವಿಕಾಸಕ್ಕೆ ದಾರಿಮಾಡಿಕೊಡಬೇಕು.
ಸಂಸ್ಥೆಯ ಮೂರು ಜೀವನಾಡಿಗಳು ,ನಂಬಿಕೆ, ಗೌರವ ಮತ್ತು ಪ್ರೇರಣೆ .ಈ ಮೌಲ್ಯಗಳು ಜೀವಂತವಾಗಿದ್ದಾಗ ಉದ್ಯೋಗಿಗಳು ಕೇವಲ ಕರ್ತವ್ಯ ನಿರ್ವಹಿಸುವುದಿಲ್ಲ — ಹೃದಯ ಮತ್ತು ಆತ್ಮದಿಂದ ಕೊಡುಗೆ ನೀಡುತ್ತಾರೆ.
ಸಂಸ್ಥೆಯ ಯಶಸ್ಸು ಯಂತ್ರಗಳಿಂದ ಆರಂಭವಾಗುವುದಿಲ್ಲ , ಅದು ಜನರ ಮನಸ್ಸು ಮತ್ತು ಹೃದಯಗಳಿಂದ ಹುಟ್ಟುತ್ತದೆ.ಉದ್ಯೋಗಿಗಳು ಕಡಿಮೆ ವೇತನದಿಂದ ಅಲ್ಲ; ಭಾವನಾತ್ಮಕ ಸಂಪರ್ಕ ಕಳೆದುಕೊಂಡಾಗ ಸಂಸ್ಥೆಯನ್ನು ತೊರೆಯುತ್ತಾರೆ.
ಆದುದರಿಂದ ಕೆಲಸಕ್ಕೆ ಕೈಗಳನ್ನು ಮಾತ್ರ ನೇಮಿಸಬೇಡಿ; ಬೆಳವಣಿಗೆಗಾಗಿ ಅವರ ಹೃದಯಗಳನ್ನು ಗೆಲ್ಲಿರಿ.
“ಮಾನವ ಸಂಬಂಧಗಳ ಗುಣಮಟ್ಟವೇ ದೀರ್ಘಕಾಲೀನವಾಗಿ ಸಂಸ್ಥೆಯ ಯಶಸ್ಸಿನ ಬೆನ್ನೆಲುಬು.” ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…
ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…
ರಾಜ್ಯದಲ್ಲಿ ಹೋಟೆಲ್‌ಗಳಿಗೆ ವಾಣಿಜ್ಯ LPG ಕೊರತೆಯನ್ನು ಸರಿಪಡಿಸಲು ಮಂಗಳವಾರದಿಂದ ಹೆಚ್ಚುವರಿ ಸಿಲಿಂಡರ್ ಸರಬರಾಜು…
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.…
ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.…
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಚಟುವಟಿಕೆ ಮತ್ತೆ ಆರಂಭವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ…