Advertisement
MIRROR FOCUS

ಉದ್ಯೋಗ ಮಾಹಿತಿಯ ಸೇವೆ | ಪುತ್ತಿಲ ಪರಿವಾರದಿಂದ ಯುವಕರಿಗೆ ಉದ್ಯೋಗದ ದಾರಿ |

Share

ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಕಳೆದ ಕೆಲವು ಸಮಯಗಳಿಂದ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಮಾರ್ಚ್‌ ತಿಂಗಳಲ್ಲಿ ಆರಂಭಗೊಂಡ ಉದ್ಯೋಗ ಸೇವಾ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಹಲವಾರು ಮಂದಿಗೆ ಉದ್ಯೋಗವೂ ಲಭ್ಯವಾಗಿದೆ. ಅರುಣ್‌ ಕುಮಾರ್‌ ಪುತ್ತಿಲ ಅವರ ನೇತೃತ್ವದಲ್ಲಿ ಯುವಕರ ತಂಡ ಈ ಸೇವಾ ಯೋಜನೆಯನ್ನು ಮುನ್ನಡೆಸುತ್ತಿದೆ.…..ಮುಂದೆ ಓದಿ….

ಪುತ್ತೂರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಅವರ ಹವಾ ಜೋರಾಗಿತ್ತು. ಪಕ್ಷೇತರವಾಗಿ ಸ್ಫರ್ಧಿಸಿ ಗೆಲುವಿನ ಸನಿಹಕ್ಕೆ ತಲುಪಿದ್ದ ಅರುಣ್‌ ಕುಮಾರ್‌ ಪುತ್ತಿಲ ಅವರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮುಂದುವರಿಸಿದ್ದರು.‌ ಸೇವಾ ಚಟುವಟಿಕೆಗಳನ್ನು ಪುತ್ತಿಲ ಪರಿವಾರದ ಹೆಸರಿನಲ್ಲಿ ಮುಂದುವರಿಸಿದ್ದರು.  ಈಗ ಕೆಲವು ಸಮಯದ ಹಿಂದೆ ಅರುಣ್‌ ಕುಮಾರ್‌ ಪುತ್ತಿಲ ಅವರು ಬಿಜೆಪಿ ಪಕ್ಷ ಸೇರ್ಪಡೆಗೊಂಡ ಬಳಿಕ ಪುತ್ತಿಲ ಪರಿವಾರದ ಕೆಲಸ ಕಾರ್ಯಗಳು ಸಾಮಾಜಿಕ ಸೇವೆಯ ಹೆಸರಿನಲ್ಲಿ ಮುಂದುವರಿದಿದೆ. ವಿವಿಧ ಮಂದಿ ಸಮಾಜ ಸೇವೆಯ ಕಾಳಜಿ ಇರುವ ಮಂದಿ ಈ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ. ಅರುಣ್‌ ಕುಮಾರ್‌ ಪುತ್ತಿಲ ಅವರು ಸಹಕಾರ ನೀಡುತ್ತಾರೆ.

ಪುತ್ತಿಲ ಪರಿವಾರದಲ್ಲಿ ಹಲವಾರು ಮಂದಿ ಯುವಕರು ಇದ್ದರು. ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಯುವಕರು ಸ್ವಾವಲಂಬನೆಯ ಹಾದಿಯಲ್ಲಿ ಸಾಗುವವರು ಕೆಲವರು ಇದ್ದರೆ ಇನ್ನೂ ಹಲವಾರು ಮಂದಿ ಉದ್ಯೋಗದ ಅಪೇಕ್ಷೆ ವ್ಯಕ್ತಪಡಿಸುತ್ತಾರೆ. ಇದಕ್ಕಾಗಿ ಪುತ್ತಿಲ ಪರಿವಾರದ ಕೆಲವು ಮಂದಿ ಅದೇ ಹೆಸರಿನಲ್ಲಿ ಉದ್ಯೋಗ ಸೇವಾ ಯೋಜನೆಗೆ ಚಾಲನೆ ನೀಡಿದರು. ಪುತ್ತಿಲ ಪರಿವಾರದ ಉದ್ಯೋಗ ಸೇವಾ ಯೋಜನೆಗೆ ಮಾರ್ಚ್‌ ತಿಂಗಳಲ್ಲಿ ಚಾಲನೆ ನೀಡಲಾಯಿತು.ವಾಟ್ಸಪ್‌ ಗುಂಪುಗಳ ಮೂಲಕ ಉದ್ಯೋಗ ಮಾಹಿತಿಯನ್ನು ಉಚಿತವಾಗಿ ನೀಡಲು ಆರಂಭಿಸಲಾಯಿತು.

ಈಗಾಗಲೇ ಒಟ್ಟು 7 ಗುಂಪುಗಳ ರಚನೆಯಾಗಿದ್ದು ಸುಮಾರು 7000 ಜನರು ಇದ್ದಾರೆ. ಸುಮಾರು 22 ದಿನಗಳಲ್ಲಿ ಒಂದು ಗುಂಪು ಭರ್ತಿಯಾಗುತ್ತದೆ. ಈಗ 7 ಗುಂಪು ರಚನೆಯಾಗಿದೆ. ದ ಕ ಜಿಲ್ಲೆಯ ಮಾತ್ರವಲ್ಲ ಇತರ ಜಿಲ್ಲೆಯ ಯುವಕರೂ ಈ ಗುಂಪುಗಳಲ್ಲಿ ಇದ್ದಾರೆ. ಈ ಗುಂಪನ್ನು ಪುತ್ತಿಲ ಪರಿವಾರದಲ್ಲಿ ಕೆಲಸ ಮಾಡುವ ಸುನಿಲ್‌ ಬೋರ್ಕರ್‌, ಶ್ಯಾಮ್‌ ಪ್ರಕಾಶ್‌, ಶಿವ ಹಾಗೂ ನಿತಿಶ್‌ ನಿರ್ವಹಣೆ ಮಾಡುತ್ತಾರೆ ಇವರ ಜೊತೆ ಇನ್ನೂ 6 ಜನ ನೆರವಾಗುತ್ತಾರೆ.  ಇವರು  ಈ ಎಲ್ಲಾ ಗುಂಪುಗಳಲ್ಲಿ ದೇಶದ ಮಾತ್ರವಲ್ಲ ವಿದೇಶದಲ್ಲಿ ಇರುವ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಮಾಹಿತಿ ಆಧಾರದಲ್ಲಿ ಯುವಕರು ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಾರೆ. ಈಗಾಗಲೇ 100 ಕ್ಕೂ ಅಧಿಕ ಮಂದಿಗೆ ಅಧಿಕೃತವಾಗಿ ಉದ್ಯೋಗ ಲಭಿಸಿದೆ. ಅನೇಕರು ಉದ್ಯೋಗ ಲಭಿಸಿದ ಬಳಿಕ ಮಾಹಿತಿ ನೀಡುತ್ತಿಲ್ಲ, ಹೀಗಾಗಿ ಇನ್ನಷ್ಟು ಅಧಿಕೃತ ದಾಖಲೆ ತಯಾರಿಸಲು ಕಷ್ಟವಾಗಿದೆ. ಆ ಉದ್ದೇಶವೂ ಇಲ್ಲ ಎನ್ನುತ್ತಾರೆ ಗುಂಪುಗಳನ್ನು ನಿರ್ವಹಿಸುವ ಶ್ಯಾಮ್‌  ಪ್ರಕಾಶ್. ಗುಂಪುಗಳ ಮೂಲಕ ತಮ್ಮ ಬೇಡಿಕೆ ಈಡೇರಿದ ಬಳಿಕ ಹಲವು ಕಂಪನಿಗಳು ಪರಿವಾರದ ಈ ಕೆಲಸಕ್ಕೆ ಕೃತಜ್ಞತೆ ಸಲಿಸಿದೆ.

ಗುಂಪಿನ ಮೂಲಕ 8 ಜನರಿಗೆ ವಿದೇಶದಲ್ಲೂ ಉದ್ಯೋಗವೂ ಲಭಿಸಿದೆ.ಈಗ ಹಲವು ಕಂಪನಿಗಳು ಪುತ್ತಿಲ ಪರಿವಾರದ ಉದ್ಯೋಗ ಸೇವಾ ಯೋಜನೆಯ ಪ್ರಮುಖರನ್ನುಕೆಲವು ಕಂಪನಿಯಿಂದ ಸಂಪರ್ಕಿಸಿ ಉದ್ಯೋಗಕ್ಕೆ ಬೇಕಿರುವ ಅಭ್ಯರ್ಥಿಗಳ ಮಾಹಿತಿ ನೀಡಿ ತಕ್ಷಣವೇ ಬೇಕಾಗಿದ್ದರೆ ಎಂದೂ ಪ್ರಕಟಣೆ ನೀಡುತ್ತಿದ್ದಾರೆ.  ಆರಂಭದಲ್ಲಿ ಉದ್ಯೋಗ ಮೂಲ ಹುಡುಕಿ ಮಾಹಿತಿ ನೀಡಲಾಗುತ್ತಿತ್ತು. ಇದೀಗ ಕಂಪನಿ, ಸಂಸ್ಥೆಗಳೇ ಬೇಡಿಕೆಯ ಮಾಹಿತಿ ನೀಡುತ್ತಾರೆ ಎಂದು ವಿವರಿಸುತ್ತಾರೆ ಶ್ಯಾಮ್‌ ಪ್ರಕಾಶ್‌ ಅವರು. ಉದ್ಯೋಗ ಆಸಕ್ತರು ಗುಂಪಿಗೆ ಸೇರಿಕೊಂಡು ನಾವು ನೀಡುವ ಮಾಹಿತಿಯನ್ನು ಗಮನಿಸಿ ಅರ್ಜಿ ಸಲ್ಲಿಸಬಹುದು ಎನ್ನುತ್ತಾರೆ‌ ಇನ್ನೊಬ್ಬ ನಿರ್ವಾಹಕ ಸುನಿಲ್ ಬೋರ್ಕರ್.

ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, ಶ್ಯಾಮ ಪ್ರಕಾಶ್‌ – 9741112578, ಸುನಿಲ್‌ ಬೋರ್ಕರ್-‌  96869 14639, ಶಿವ- 91082 42391 ಅಥವಾ ನಿತಿಶ್‌  86187 00724 ಸಂಪರ್ಕಿಸಬಹುದು.

The Putthila Parivar in Puttur has been actively engaged in social work for a considerable period of time. The employment service scheme, initiated in March, has garnered a positive response with several individuals securing employment opportunities. A group of dedicated youth, led by Arun Kumar Puttila, is spearheading this impactful service project.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು

ಹಳೆಯ ನೋವು, ಕೋಪ, ತಿರಸ್ಕಾರ ಮತ್ತು ನಿರೀಕ್ಷೆಗಳ ಭಾರವನ್ನು ಹೊಸ ಸಂಬಂಧಗಳ ಮೇಲೆ…

5 hours ago

ರೈತರಿಗೆ ವಿದ್ಯುತ್‌ ಶಾಕ್ – ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ- ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ

ಮಳೆ ಕೊರತೆ ಮತ್ತು ಜಲವಿದ್ಯುತ್ ಉತ್ಪಾದನೆ ಕುಸಿತದ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ…

11 hours ago

ಅ.29 ರಿಂದ ನ.11 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ -12 ದಿನ ಸಾರ್ವಜನಿಕ ದರ್ಶನ

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್…

12 hours ago

ಪಿಎಂ-ಕುಸುಮ್ ಯೋಜನೆಯಿಂದ ರೈತರ ನೀರಾವರಿಗೆ ಸೌರಶಕ್ತಿ

ಪಿಎಂ-ಕುಸುಮ್ ಯೋಜನೆಯಡಿ ರೈತರ ನೀರಾವರಿ ಪಂಪ್‌ಗಳಿಗೆ ಸೌರಶಕ್ತಿ ಅಳವಡಿಸುವ ಮೂಲಕ ಡೀಸೆಲ್ ಅವಲಂಬನೆ…

12 hours ago

ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ – ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಘಟನೆ

ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು…

12 hours ago

531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ – ಈಗಲೇ ಮಾಡಬೇಕಾದ ಮುಂಜಾಗ್ರತಾ ಕ್ರಮಗಳು ಏನು..?

ಕರ್ನಾಟಕದ 111 ತಾಲೂಕುಗಳ ವ್ಯಾಪ್ತಿಯ 531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು,…

12 hours ago