ಸೌರ ಶಕ್ತಿ ಆಧಾರಿತವಾಗಿ ಮಹಿಳೆಯರಿಗಾಗಿ ಸ್ವಉದ್ಯೋಗ | ಏನೇನು ಮಾಡಬಹುದು..?

September 4, 2024
10:25 PM
ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಯಾಗಬೇಕು. ಆರ್ಥಿಕವಾಗಿ ಅಭಿವೃದ್ಧಿ ಹೊಂದವುದರ ಜೊತಗೆ ಹೆಚ್ಚಿನ ಮಹಿಳೆಯರು ಸೌರ ವಿದ್ಯುತ್ ಆಧಾರಿತ ಸ್ವ-ಉದ್ಯೋಗ ಕಡೆ ಬರಬೇಕೆಂಬ ಉದ್ದೇಶದಿಂದ ಈ ಸೌರ ಸ್ವ-ಉದ್ಯೋಗ ಮೇಳ ವನ್ನು ಆಯೋಜಿಸಲಾಗಿತ್ತು.

ಸೌರ ಶಕ್ತಿ ಆಧಾರಿತವಾಗಿ ಮಹಿಳೆಯರಿಗಾಗಿ ಸ್ವಉದ್ಯೋಗ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಸೆಲ್ಕೋ ಫೌಂಡೇಶನ್ ವತಿಯಿಂದ ನಡೆಯುತ್ತಿದೆ. ಬೆಳಗಾವಿಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ, ಸ್ವ ಸಹಾಯ ಗುಂಪಿನ ಮಹಿಳೆಯರಿಗೆ  ಸೌರ ಶಕ್ತಿ ಆಧಾರಿತ ಉದ್ಯೋಗ ಮೇಳ ನಡೆಯಿತು. …..ಮುಂದೆ ಓದಿ….

Advertisement
Advertisement
Advertisement
Advertisement

ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಯಾಗಬೇಕು. ಆರ್ಥಿಕವಾಗಿ ಅಭಿವೃದ್ಧಿ ಹೊಂದವುದರ ಜೊತಗೆ ಹೆಚ್ಚಿನ ಮಹಿಳೆಯರು ಸೌರ ವಿದ್ಯುತ್ ಆಧಾರಿತ ಸ್ವ-ಉದ್ಯೋಗ ಕಡೆ ಬರಬೇಕೆಂಬ ಉದ್ದೇಶದಿಂದ ಈ ಸೌರ ಸ್ವ-ಉದ್ಯೋಗ ಮೇಳ ವನ್ನು ಆಯೋಜಿಸಲಾಗಿತ್ತು.

Advertisement

ಕಳೆದ 14 ವರ್ಷಗಳಿಂದ ದೇಶ್ಯಾದ್ಯಂತ ಸುಸ್ಥಿರ ಅಭಿವೃದ್ಧಿ ಹಾಗೂ ಸೌರ ವಿದ್ಯುತ್ ವಿಭಾಗದಲ್ಲಿ ಸೆಲ್ಕೋ ಫೌಂಡೇಶನ್ ಹೊಸ ಆವಿಷ್ಕಾರಗಳನ್ನು ತರುವುದರ ಜೊತೆಗೆ ನಿರುದ್ಯೋಗ ಮಹಿಳೆಯರು ಜೀವನ ರೂಪಿಸಿಕೊಳ್ಳಲು ಸೆಲ್ಕೋ ಫೌಂಡೇಶನ್ ಸಹಕಾರಿಯಾಗಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ ಉದ್ಯೋಗವನ್ನು ಹಾಗೂ ಸೌರ ವಿದ್ಯುತ್ ಆಧಾರಿತ ಸ್ವ-ಉದ್ಯೋಗದ ಮೂಲಕ ಜೀವನೋಪಾಯ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿದೆ. ಕಳೆದ ವರ್ಷ ವಿಶೇಷ ಚೇತನರಿಗಾಗಿ  ಬೆಳಗಾವಿಯಲ್ಲಿ ಉದ್ಯೋಗ ಮೇಳ ಆಯೋಜಿಸಿ, ಈಗ ಜಿಲ್ಲೆಯಾದ್ಯಂತ 130ಕ್ಕೂ ಅಧಿಕ ವಿಶೇಷಚೇತನರು ಸೌರ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ.

Advertisement

ಸೌರ ಸ್ವ-ಉದ್ಯೋಗ ಮಹಿಳೆಯರಿಗೆ ಬದುಕಿಗೆ ಆಸರೆಯಾಗಲಿದೆ.ಆರೋಗ್ಯ, ಜೀವನೋಪಾಯ ಮತ್ತು ಮಕ್ಕಳಿಗೆ ಶಿಕ್ಷಣ ಒದಗಿಸಲು ಬಹಳಷ್ಟು ಸಹಕಾರಿಯಾಗಲಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಅನುಕೂಲವಾಗುವಂತೆ ಹೈನುಗಾರಿಕೆಯಲ್ಲಿ ಸೌರಚಾಲಿತ ಹಾಲುಕರೆಯುವ ಯಂತ್ರ ಆವಿಷ್ಕರಿಸಲಾಗಿದೆ. ಅಲ್ಲದೆ, ಸ್ವಂತ ದುಡಿಮೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಸೋಲಾರ್‌ ಆಶಾಕಿರಣಗಳಾಗಿವೆ. ಸಣ್ಣ ಸಣ್ಣ ಗೂಡಂಗಂಡಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳಿಗೆ ವಿದ್ಯುತ್‌ ಸಂಪರ್ಕ ನೀಡುವುದಿಲ್ಲ. ಅಂತಹ ಚಿಕ್ಕ ಘಟಕಗಳಿಗೆ ಸೋಲಾರ್‌ ಘಟಕಗಳನ್ನು ಅಳವಡಿಸಿ ವ್ಯಾಪಾರ ವ್ಯವಹಾರವನ್ನು ದ್ವಿಗುಣ ಮಾಡಿಕೊಂಡ ಉದಾಹರಣೆಗಳಿವೆ. ಸೌರ ಚಾಲಿತ ಹೊಲಿಗೆ ಯಂತ್ರ  ಅಳವಡಿಸಿಕೊಂಡು ಮಹಿಳೆಯರು ಸ್ವಾವಲಂಬನೆಯ ಹಾದಿ ತುಳಿದಿದ್ದಾರೆ.

ಸೆಲ್ಕೋ ತಂತ್ರಜ್ಞಾನದಿಂದಾಗಿ ಸುಲಭದಲ್ಲಿ ಕಮ್ಮಾರಿಕೆ ಮಾಡಲು ಸೌರ ಚಾಲಿತ ಉಲುಮೆ ಯಂತ್ರ, ಕುಂಬಾರಿಕೆ ಮಾಡಲು ತಿಗರಿಗಳನ್ನು ಅಳವಡಿಸಲಾಗುತ್ತದೆ, ಹೀಗೇ ಹಲವು ಉಪಕರಣಗಳು ಸೋಲಾರ್‌ ನಿಂದ ಚಾಲೂ ಮಾಡಬಹುದಾಗಿದೆ.

Advertisement

ಬೆಳಗಾವಿಯಲ್ಲಿ  ನಡೆದ ಈ ಕಾರ್ಯಾಗಾರವನ್ನು ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ್ ಚಾಲನೆ ನೀಡಿದರು. ಸೆಲ್ಕೋ ಫೌಂಡೇಶನ್ ವ್ಯವಸ್ಥಾಪಕ ನಿದೇರ್ಶಕ ವಿನಾಯಕ ಹೆಗಡೆ ಸೇರಿದಂತೆ ಫೌಂಡೇಶನ್ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror