ಇತ್ತೀಚಿಗೆ ಎರಡು ವಿಭಿನ್ನ ವೀಡಿಯೋ ಚಿತ್ರಿಕೆಯನ್ನ ಮಾಧ್ಯಮದಲ್ಲಿ ನೋಡಿದೆ. ಒಂದು ಗೋಸಾಗಾಣಿಕೆಯನ್ನ(Cow transporting) ಪೆಟ್ರೋಲ್ ಟ್ಯಾಂಕರ್(Petrol tanker) ನಲ್ಲಿ ಮಾಡುವ ವೀಡಿಯೋ ಮತ್ತೊಂದು ಜೈನ ದಿಗಂಬರ ಸ್ವಾಮೀಜಿಗಳು ತಮ್ಮ ಮಂತ್ರಶಕ್ತಿಯ ಮೂಲಕ ಸ್ಮೃತಿ ತಪ್ಪಿದ ಹಸುವನ್ನು ಎಬ್ಬಿಸುವ ಚಿತ್ರಿಕೆ…
ಜೈನ ಸ್ವಾಮೀಜಿ ಗಳ ಮಂತ್ರ ಶಕ್ತಿಯ ಪವಾಡ ವಿನಾಶದ ಪ್ರಪಾತದ ಆಳಕ್ಕೆ ಕುಸಿದು ಬಿದ್ದ ನಮ್ಮ ದೇಸಿ ತಳಿಯ ಹಸುಗಳನ್ನು ಮೇಲೆತ್ತಿ ನಮ್ಮ ದೇಸಿ ಹಸುಗಳು ಸ್ವಾಭಿಮಾನದಿಂದ ಬಾಳುವಂತಾಗಬೇಕಿದೆ…!! ಹಸುಗಳನ್ನು ಅತ್ಯಂತ ಅಮಾನುಷವಾಗಿ ಯಾವುದೋ ಜಡ ವಸ್ತುವಿನಂತೆ ಟ್ಯಾಂಕರ್ ಲಾರಿಗಳಲ್ಲಿ ತುಂಬಿಕೊಂಡು ಹೋಗುವ ಪ್ರಯೋಗಶೀಲತೆ, ಹೊಸ ಆಲೋಚನೆ ನಮ್ಮ ದೇಸಿ ಹಸುಗಳ ಸಲಹಿ ಸಾಕಲು ಬೇಕಿದೆ.
ನಮ್ಮ ದೇಸಿ ತಳಿಯ ಹಸುಗಳ ಗವ್ಯೋತ್ಪನ್ನಗಳಿಗೆ ಗೌರವಯುತ ಬೆಲೆ ತರುವ ಸಾಮಾಜಿಕ ಮತ್ತು ಸರ್ಕಾರದ ಕಾಳಜಿ ಏರ್ಪಡಲಿ… ಈ ಜೀವಂತ ಪ್ರಾಣಿಗಳನ್ನು ಮೂಟೆಯಂತೆ ಸಾಗಾಣಿಕೆ ಮಾಡುವ ಕ್ರೌರ್ಯ ನಿಲ್ಲಲಿ… ಗೋವುಳಿಯುವ ವಿಚಾರದಲ್ಲಿ ಜೈನ ಮುನಿವರ್ಯರ ಮಂತ್ರ ಶಕ್ತಿಯ ಪವಾಡ ಆಗಿ ದೇಸಿ ಗೋವುಗಳು ಸ್ವಾಭಿಮಾನದಿಂದ ಬೀಗಿ ಬಾಳಲೆಂದು ಬಯಸೋಣ..
 
								 
															 
															



 
															 
															 
															 
															 
															 
															 
															 
															 
															 
															 
															 
															 
															 
															 
															 
															 
															 
															 
															 
															 
															 
															 
															 
															 
															