ಖಾಸಗಿ ಆಡಳಿತದ ದೇವಾಲಯಗಳಲ್ಲಿ ಭಾರತೀಯ ವಸ್ತ್ರ ಸಂಹಿತೆ ಜಾರಿ | ನಿಯಮ ಮೀರಿದ್ರೆ ಸಿಗಲ್ಲ ಮಂಗಳಾರತಿ, ಪ್ರಸಾದ..!

January 11, 2024
12:57 PM

ದಿನದಿಂದ ದಿನಕ್ಕೆ ನಮ್ಮ ಯುವಜನತೆ(youth) ಪಾಶ್ಚಿಮಾತ್ಯ ಸಂಸ್ಕೃತಿಯತ್ತ(western culture) ಹೆಚ್ಚು ವಾಲುತ್ತಿದ್ದಾರೆ. ಅದರಲ್ಲೂ ನಮ್ಮ ದೇವಾಲಯಗಳಿಗೆ ಬರುವಾಗ ಯಾವ ರೀತಿಯ ವಸ್ತ್ರ(Dress) ಧರಿಸಬೇಕು ಅನ್ನುವ  ಜ್ಞಾನವೂ ಇರುವುದಿಲ್ಲ. ಇದೀಗ ರಾಜ್ಯದ ಖಾಸಗಿ ಆಡಳಿತದ ದೇವಾಲಯಗಳಲ್ಲಿ ಇನ್ಮುಂದೆ ಡ್ರೆಸ್ ಕೋಡ್ (Dress Code in Temple) ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ 800 ದೇವಾಲಯಗಳ ಪೈಕಿ 500ಕ್ಕೂ ಹೆಚ್ಚು ದೇವಾಲಯಗಳಲ್ಲಿ ಮುಂದಿನ ಒಂದು ತಿಂಗಳು, ದೇಗುಲದ ಆಡಳಿತ ಮಂಡಳಿಯೇ ಈ ಬಗ್ಗೆ ಜಾಗೃತಿ(Awareness) ಮೂಡಿಸಲಿದೆ.

Advertisement
Advertisement
Advertisement

ಆದರೆ ಮತ್ತೆ ಹಿಂದಿನ ರೀತಿಯೇ ಸಾರ್ವಜನಿಕರು ನಡೆದುಕೊಂಡರೆ, ಅಂತವರಿಗೆ ದೇವಾಲಯದ ಕೆಲ ಆಚರಣೆಗಳನ್ನ ನೀಡದಿರಲು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಭಾ ಚಿಂತನೆ ನಡೆಸುತ್ತಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಉಡುಪುಗಳನ್ನ ಧರಿಸಿ ಬರುವುದನ್ನ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ನಿಯಮ ಮೀರಿದ್ರೆ ಮಂಗಳಾರತಿ ಮತ್ತು ಪ್ರಸಾದ ನೀಡದಿರಲು ಪ್ಲ್ಯಾನ್ ಮಾಡಲಾಗ್ತಿದೆ. ಎಲ್ಲಾ ದೇವಾಲಯಗಳಲ್ಲೂ ಬೋರ್ಡ್‍ಗಳನ್ನ ಹಾಕಿ ಜಾಗೃತಿ ಮೂಡಿಸೋದಲ್ಲದೆ ಮೌಖಿಕವಾಗಿ ತಿಳಿ ಹೇಳುವ ಕೆಲಸಕ್ಕೆ ಮುಂದಾಗ್ತಿದೆ. ಈ ಹಿಂದೆ ವೈಕುಂಠ ಏಕಾದಶಿ ವೇಳೆ ಇದೇ ರೀತಿಯ ನಿಯಮಗಳನ್ನ ಕೆಲ ದೇವಾಲಯಗಳಲ್ಲಿ ಜಾರಿಗೆ ತರಲಾಗಿತ್ತು. ಈಗ ಎಲ್ಲಾ ದೇವಾಲಯದಲ್ಲೂ ಅಭಿಯಾನ ಆರಂಭಿಸಲಾಗಿದೆ.

Advertisement

ಹೊರ ದೇಶ ಅಥವಾ ಹೊರ ಭಾಗಗಳಿಂದ ಬರುವ ಭಕ್ತರನ್ನು ಗಮನದಲ್ಲಿಟ್ಟುಕೊಂಡು ದೇವಾಲಯದ ವತಿಯಿಂದಲೇ ಬಟ್ಟೆಗಳನ್ನು ನೀಡಲಿದ್ದಾರೆ. ಬಾಡಿಗೆ ಬಟ್ಟೆಗಳನ್ನ ಪಡೆದು ದೇವರ ದರ್ಶನ ಪಡೆದು ನಂತರ ಆ ಬಟ್ಟೆಗಳನ್ನ ದೇವಾಲಯದ ಕೌಂಟರ್‍ನಲ್ಲೇ ವಾಪಸ್ ನೀಡಬೇಕು. ಒಬ್ಬರು ಧರಿಸಿದ ಬಟ್ಟೆಯನ್ನ ಮತ್ತೊಬ್ಬರು ಧರಿಸುವ ಮುನ್ನ, ಶುದ್ದವಾಗಿ ಒಗೆಯಲು ಕೂಡ ದೇವಾಸ್ಥಾನದ ಆಡಳಿತ ಮಂಡಳಿಗಳು ಸಿದ್ಧತೆ ನಡೆಸಿವೆ. ಒಟ್ಟಾರೆ ಸದ್ಯ ಖಾಸಗಿ ಆಡಳಿತ ಮಂಡಳಿಯ ರಾಜ್ಯದ 800ಕ್ಕೂ ಹೆಚ್ಚು ದೇವಾಲಯಗಳಲ್ಲಿ ಸದ್ಯ ಇದೇ ರೂಲ್ಸ್ ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ. ಒಂದು ತಿಂಗಳ ಅಭಿಯಾನದ ಬಳಿಕ ಈರೂಲ್ಸ್‍ಗಳನ್ನ ಜಾರಿಗೆ ತರುವ ಸಾಧ್ಯತೆ ಇದೆ.

  • ಅಂತರ್ಜಾಲ ಮಾಹಿತಿ

It has been decided to make Dress Code in Temple mandatory from now on in private temples of the state. Already in more than 500 temples out of 800 temples in the state, including Bangalore, the management board of the temple will create awareness about this in the next one month.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror