ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ
ಸರ್ ಎಂ ವಿ ಜನ್ಮದಿನ

September 17, 2022
8:52 AM

ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು( ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಎಸ್.ಎಸ್.ಘಟಕ ಹಾಗೂ ವಿಜ್ಞಾನ ಸಂಘದ ವತಿಯಿಂದ ಶಾಲೆಯ ಕನ್ನಡ ಭಾಷಾ ಸಂಘ, ಸಮಾಜ ವಿಜ್ಞಾನ ‌ಸಂಘದ ಆಶ್ರಯದಲ್ಲಿ ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಶಾಲೆಯಲ್ಲಿ ಆಚರಿಸಲಾಯಿತು.

Advertisement

ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ವಿದ್ಯಾರ್ಥಿಗಳು ಸರ್ ಎಂ.ವಿಶ್ವೇಶ್ವರಯ್ಯ ಅವರ ಸಾಧನೆ ಹಾಗೂ ಅವರು ದೇಶಕ್ಕೆ ಅಪಾರವಾಗಿ ನೀಡಿದ ಕೊಡುಗೆಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿಕೊಂಡು ಅವರ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.


ಎಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸರ್‌ ಎಂ ವಿಶ್ವೇಶ್ವರಯ್ಯನವರು ನೀಡಿರುವ ಗಣನೀಯ ಕೊಡುಗೆಗಳನ್ನು ವೃತ್ತಿಪರವಾಗಿ ಗೌರವಿಸಲು ಭಾರತ ಸರ್ಕಾರವು ಅವರ ಜನ್ಮದಿನವನ್ನು ಇಂಜಿನಿಯರ್ಸ್ ಡೇ ಎಂದು 1968 ರಲ್ಲಿ ಘೋಷಿಸಿದೆ ಎಂದರು.

ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ ಹಾಗೂ ಸಾಧನೆ ಕುರಿತು ಮಾಹಿತಿ ನೀಡಿದ ಕನ್ನಡ ಭಾಷಾ ಶಿಕ್ಷಕ ಕೆ.ಗೋಪಾಲಕೃಷ್ಣ ,
ಸರ್ ಎಮ್ ವಿ ಎಂದು ಕರೆಯಲ್ಪಡುವ ಸರ್ ಎಂ ವಿಶ್ವೇಶ್ವರಯ್ಯ ಅವರು ನೂರು ವರ್ಷಗಳನ್ನು ಪೂರೈಸಿದ ದಂತಕಥೆಯಂತೆ ಬದುಕಿದ್ದರು, ತಮ್ಮ ಕೊನೆಯವರೆಗೂ ಸಕ್ರಿಯರಾಗಿದ್ದರು. ಸರ್ ಎಂ ವಿ ಅವರ ಜನ್ಮದಿನವನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಸೆಪ್ಟೆಂಬರ್ 15, 1860 ರಂದು ಕರ್ನಾಟಕದ ಅವಿಭಜಿತ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಸರ್ ಎಂ.ವಿಶ್ವೇಶ್ವರಯ್ಯ ಅವರು ಮೊದಲ ಸ್ಥಳೀಯವಾಗಿ ನಿರ್ಮಿಸಲಾದ ಕೃಷ್ಣ ರಾಜ ಸಾಗರ ಅಣೆಕಟ್ಟು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಪೇಪರ್ ಮಿಲ್ಸ್, ಮೈಸೂರು ಕಬ್ಬಿಣ ಮತ್ತು ಉಕ್ಕು ಲಿಮಿಟೆಡ್ ನಂತರ, ವಿಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ಸ್ ಲಿಮಿಟೆಡ್ ಸೇರಿದಂತೆ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ
ಸಾಧನೆಗಳನ್ನು ಮಾಡುವ ಮೂಲಕ ದೇಶ – ವಿದೇಶಗಳಲ್ಲಿ ಹೆಸರಾಂತ ಇಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಎಂದರು.

Advertisement

ಶಿಕ್ಷಕರಾದ ಎಂ.ಟಿ.ದಯಾನಂದ ಪ್ರಕಾಶ್, ಬಿ.ಡಿ.ರಮ್ಯ, ಅನ್ಸಿಲಾ ರೇಖಾ, ವೈ.ಎಂ.ಸರಸ್ವತಿ, ಶಾಲಾ ನಾಯಕಿ ಸಂಜನಾ ಮೊದಲಾದವರು ಇದ್ದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ | ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆ | ಮತ್ತೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
August 18, 2025
9:25 PM
by: The Rural Mirror ಸುದ್ದಿಜಾಲ
ಬಗರ್ ಹುಕುಂ ಸಾಗುವಳಿ | ಸಕ್ರಮಕ್ಕಾಗಿ 42289 ರೈತರಿಂದ ಅರ್ಜಿ
August 18, 2025
9:00 PM
by: The Rural Mirror ಸುದ್ದಿಜಾಲ
ಶುದ್ಧ ಕನ್ನಡ ಪದ ಮತ್ತೆ ವಿಜೃಂಭಿಸಲಿ – ರಾಘವೇಶ್ವರ ಶ್ರೀ
August 18, 2025
8:37 PM
by: The Rural Mirror ಸುದ್ದಿಜಾಲ
ಜಮ್ಮು ಕಾಶ್ಮೀರದ ಕಥುವಾದಲ್ಲಿ ಭಾರೀ ಮಳೆ | ಪ್ರವಾಹಕ್ಕೆ ಏಳು ಮಂದಿ ಬಲಿ
August 18, 2025
8:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group