ಯಾವುದೇ ವೃತ್ತಿಯಲ್ಲಿದ್ದರೂ ಕೃಷಿಯನ್ನು ಬಿಡಬಾರದು ಎಂಬ ಹಠದಿಂದ ಜೀವನದಲ್ಲಿ ಯಶಸ್ಸು ಕಂಡವರಲ್ಲಿ ಅಮರಾವತಿ ಜಿಲ್ಲೆಯ ಮೆಲ್ಘಾಟ್ ತಪ್ಪಲಿನಲ್ಲಿರುವ ಎಕ್ಲಾನ್ ಪುರ ಗ್ರಾಮದ ಪ್ರೋ. ಡಾ. ಏಕನಾಥ್ ತಟ್ಟೆ ಒಬ್ಬರಾಗಿದ್ದರೆ. ಇವರು ಪರತ್ ವಾಡಾದ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿದ್ದು ತಮ್ಮ ಇಷ್ಟದ ಕೃಷಿಯಲ್ಲೂ ಸಾಧನೆ ಮಾಡಿ ಮಾದರಿ ಕೃಷಿಕರಾಗಿದ್ದಾರೆ.
ಪರತ್ ವಾಡಾದ ಭಗವಂತರಾವ್ ಶಿವಾಜಿ ಪಾಟೀಲ್ ಕಾಲೇಜಿನಲ್ಲಿ ಪ್ರೋ. ಡಾ. ಏಕನಾಥ್ ತಟ್ಟೆ. ಒಂದು ಎಕರೆ ಕೃಷಿಯಲ್ಲಿ ನಂಬಿಕೆ ಹೊಂದಿ, ಅದನ್ನೇ ಅಳವಡಿಸಿಕೊಂಡಿದ್ದಾರೆ. ಮಹಿಳಾ ರೈತ ಬೆಂಬಲದೊಂದಿಗೆ ಹಸನಾದ ಬದನೆ ಫಸಲು ಬೆಳೆದಿರುವ ಅವರು, ಪ್ರತಿ ವಾರ ತಮ್ಮ ಹೊಲದಿಂದ 60 ಕ್ವಿಂಟಲ್ ಬದನೆಯನ್ನು ಅಮರಾವಿ ಮಾರುಕಟ್ಟೆಗೆ ಕಳುಸುತ್ತಾರೆ. ಕಳೆದ ಸೆಪ್ಟೆಂಬರ್ ನಲ್ಲಿ ಖಾಸಗಿ ಕಂಪೆನಿಂದ ಪಡೆದ ಬೀಜಗಳನ್ನು ಬಳಸಿಕೊಂಡು ಮುಳ್ಳು ಬದನೆ ಹಾಗೂ ಸ್ಥಳೀಯ ವಿಧದ ಬದನೆ ಬೆಳೆದಿದ್ದಾರೆ. ಇದರ ಜೊತೆಗೆ ಪೌಷ್ಠಿಕಾಂಶಯುಕ್ತ, ಸಾಂಪ್ರದಾಯಿಕ ಧಾನ್ಯವಾದ ಖಪ್ಲಿ ಗೋಧಿಯನ್ನೂ ಕೂಡಾ ಬೆಳೆಸಿದ್ದಾರೆ.
ಈ ಕೃಷಿಯಲ್ಲಿ ಕಠಿಣ ಕೆಲಸಗಳಿವೆ. ಆದರೂ ಪರವಾಗಿಲ್ಲ. ನಿತ್ಯ ಎರಡು ಗಂಟೆಗಳ ಕಾಲ ಹೊಲದಲ್ಲಿ ಕೆಲಸ ಮಾಡುತ್ತೇನೆ ಏಕೆಂದರೆ ವೈಜ್ಞಾನಿಕ ಕೃಷಿಯು ಹಸಿವನ್ನು ಮಾತ್ರವಲ್ಲ ಲಾಭವನ್ನು ತರುತ್ತದೆ ಎಂದು ಏಕನಾಥ್ ಅವರು ಹೇಳಿದ್ದಾರೆ.

