ಕೀಟ ಜಗತ್ತಿನ ಅಗಾಧ ಅನಾವರಣ | ವಿಸ್ಮಯಕಾರಿ ಕೀಟ ಜಗತ್ತಿನಲ್ಲೊಂದು ಸುತ್ತು | ಕೀಟಗಳ ಪ್ರಯೋಜನ ಕುರಿತ ಕಾರ್ಯಗಾರ

October 17, 2023
8:37 PM

ಮನುಷ್ಯ(Human being) ತಾನೇ ಶ್ರೇಷ್ಠ. ಎಲ್ಲವೂ ತನ್ನಿಂದಲೇ, ತನಗೆ ಬೇಕಂತೆ ಎಲ್ಲವೂ ನಡೆಯುತ್ತದೆ ಎಂದು ಭಾವಿಸುತ್ತಾನೆ. ಆದರೆ ಈ ಮನುಜ ಒಂದು ಕ್ರಿಮಿ ಕೀಟಗಳಿಗೂ ಸಮಾನವಲ್ಲ. ಪ್ರಕೃತಿ(Nature)ಯಲ್ಲಿ ಮಾನವ ಬಿಟ್ಟು ಉಳಿದೆಲ್ಲಾ ಪ್ರಾಣಿ, ಪಕ್ಷಿ, ಕೀಟಗಳು ಇದ್ರೆನೇ ಈ ಮಾನವ ಹಾರಾಟ ಚೀರಾಟ ಅನ್ನೋದನ್ನು ಅರ್ಥನೇ ಮಾಡಿಕೊಂಡಿಲ್ಲ. ಅವುಗಳು ಇಲ್ಲದಿದ್ರೆ ನಮ್ಮ ಬದುಕು ನಶ್ವರ. ವಾಸ್ತವದಲ್ಲಿ ನಮ್ಮ ಬದುಕು ಜೇನ್ನೊಣ, ಇರುವೆ, ಗೆದ್ದಲು, ಜೇಡ, ಚಿಟ್ಟೆ, ದುಂಬಿಗಳ ರೆಕ್ಕೆ ಬಡಿತದ ಋಣದಲ್ಲಿದೆ.

Advertisement

118 ಕೆ.ಜಿ. ಹಸಿ ಕಾಫಿ ಹಣ್ಣುಗಳಿಂದ 50 ಕೆ.ಜಿ. ಚೆರ್ರಿ ಸಿಗುತ್ತೆ. ಅದನ್ನ ಹಲ್ಲಿಂಗ್ ಮಾಡಿದ್ರೆ 27 ಕೆ.ಜಿ ಕಾಫಿ ಬೀಜ ಸಿಗುತ್ತೆ.
ಅದನ್ನ ಹುರಿದು ಪುಡಿ ಮಾಡಿದ್ರೆ 20 ಕೆ.ಜಿ. ಕಾಫಿಪುಡಿ ಸಿಗುತ್ತೆ. 1 ಕೆ.ಜಿ. ಹಸಿ ಹಣ್ಣು ಅಂದ್ರೆ ಸುಮಾರು 800 ಹಣ್ಣುಗಳು ಬೇಕು.
118 ಕೆ.ಜಿ. ಅಂದ್ರೆ 94400 ಹಣ್ಣುಗಳು ಅಷ್ಟು ಹಣ್ಣಾಗಲು ಕನಿಷ್ಟ 1 ಲಕ್ಷ ಹೂ ಅರಳಬೇಕು. ಅಂದರೆ ಅಷ್ಟು ಹೂಗಳನ್ನು ಜೇನುಗಳು ಮತ್ತು ಇನ್ನಿತರ ಕೀಟಗಳು ಪರಾಗಸ್ಪರ್ಶ ಮಾಡಬೇಕು. ಒಂದು ಕಪ್ ಕಾಫಿ ಮಾಡಲು 5 ಗ್ರಾಂ ಕಾಫಿ ಪುಡಿ ಬೇಕು.
20 ಕೆ. ಜಿ. ಕಾಫಿ ಪುಡಿಗೆ 1 ಲಕ್ಷ ಹೂ ಅರಳಬೇಕು. 1 ಕೆ.ಜಿ.ಪುಡಿಗೆ 5000 ಹೂ ಬೇಕು. ಅಂದರೆ ಒಂದು ಕಪ್‌ ಕಾಫಿಯಾಗಲು 250 ಹೂಗಳನ್ನು ಕೀಟಗಳು ಪರಾಗಸ್ಪರ್ಶ ಮಾಡಬೇಕು.

ನಮ್ಮ ಬದುಕು ನಾವು ಪಡೆದುಕೊಂಡಿರುವ ಶಿಕ್ಷಣದ ಮೇಲೆ, ಸಂಬಳದ ಮೇಲೆ, ಕೂಡಿಟ್ಟ ಆಸ್ತಿ ಮೇಲೆ ಅವಲಂಬಿತವಾಗಿದೆ ಎಂದೇ ಯೋಚಿಸುತ್ತೇವೆ. ವಾಸ್ತವದಲ್ಲಿ ಬದುಕು ಜೇನ್ನೊಣ, ಇರುವೆ, ಗೆದ್ದಲು, ಜೇಡ, ಚಿಟ್ಟೆ, ದುಂಬಿಗಳ ರೆಕ್ಕೆ ಬಡಿತದ ಋಣದಲ್ಲಿದೆ. ಇದು ಒಂದು ಚಿಕ್ಕ ಉದಾಹರಣೆ ಅಷ್ಟೇ. ಪ್ರತೀ ಸಸ್ಯದ ಬದುಕಿನಲಿ ಒಂದಲ್ಲ ಒಂದು ಕೀಟವಿದೆ. ಪ್ರತೀ ಜೀವಿಯ ಬದುಕಿಗೆ ಆಧಾರವಾಗಿ ಒಂದಲ್ಲ ನೂರಾರು ಸಸ್ಯಗಳಿವೆ. ಈ ಜಗತ್ತನ್ನು ನಡೆಸುತ್ತಿರುವುದು ಅಪೂರ್ವ ಸಾಮರ್ಥ್ಯದ, ಅನನ್ಯ ಲಕ್ಷಣದ ಅಜೇಯ ಕೀಟಗಳು.

ಆದ್ದರಿಂದ Don’t use Pesticides / Insecticide Germicide / Fungicide & weedicides Seriously. ಸಿಕ್ಕಷ್ಟು ಸಿಕ್ಕಲಿ ಏನೀಗ? ಎಲ್ಲವನ್ನೂ ನಾವೇ ಅನುಭವಿಸಬೇಕಿಲ್ಲ. ನಾವು ಇವತ್ತೇ ಸಾಯದಿಲ್ವಲ್ಲ. ಇನ್ನೂ ಹಲವು ದಿನ ಬದುಕಿರುತ್ತೇವಲ್ಲ. ಅವತ್ತಿಗೂ ಬೇಕಲ್ಲ. ನಮಗೇ ಅಲ್ಲದಿದ್ದರೂ ನಮ್ಮಂಥ ಕೋಟ್ಯಾಂತರ ಜೀವಿಗಳು ಈ ಭೂಮಿಯಲಿ ಬದುಕಬೇಕಲ್ಲ. ಇನ್ನೂ ನೂರಾರು ವರ್ಷ.

ಕೀಟ ಜಗತ್ತಿನ ಅಗಾಧ ಅನಾವರಣ(Insect worl) ಇದೇ ನವಂಬರ್ 1ರಿಂದ 3ರ ವರೆಗೆ ಹಾಸನದ ಗೋಮತಿ ಕಲ್ಯಾಣ ಮಂಟಪದಲಿ ನಡೆಯುತ್ತಿದೆ. ಬನ್ನಿ, ವಿಸ್ಮಯಕಾರಿ ಕೀಟ ಜಗತ್ತಿನಲ್ಲೊಂದು ಸುತ್ತು ಹಾಕಿ.

– ಧನಂಜಯ ಜೀವಾಳ ಮಾಹಿತಿ, 98451 81409

The grand unveiling of the insect world is going on from November 1st to 3rd at Hassan's Gomati Kalyana Mantapada. Come, take a tour of the amazing insect world.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ
82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ
April 24, 2025
6:10 AM
by: ದ ರೂರಲ್ ಮಿರರ್.ಕಾಂ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ | ರಾಜ್ಯದಲ್ಲಿ ಎ.27 ರ ನಂತರ ಮಳೆ ಹೆಚ್ಚಾಗುವ ಲಕ್ಷಣ
April 23, 2025
3:13 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group