#Arecanut | ಅಡಿಕೆಯಲ್ಲಿ ಮಹಾಮಾರಿಯಾಗಿ ಕಾಡುವ ಬೇರುಹುಳ | ನಿರ್ವಹಣೆ ಮತ್ತು ಪರಿಹಾರ |

August 22, 2023
3:13 PM
ಅಡಿಕೆ ಮರಗಳಿಗೆ ಈಗ ಕಾಡುವ ಸಮಸ್ಯೆ ಬೇರು ಹುಳ. ಬಹುತೇಕವಾಗಿ ಮರಳು ಮಿಶ್ರಿತ ಮಣ್ಣಲ್ಲಿ ಈ ಹುಳಗಳು ಹೆಚ್ಚಾಗಿ ಕಾಡುತ್ತವೆ. ಇದರ ಪರಿಣಾಮವಾಗಿ ಅಡಿಕೆ ಮರದ ಶಿರಭಾಗ ಸಪುರವಾಗಿ, ಎಲೆಗಳ ಸಂಖ್ಯೆ ಕಡಿಮೆಯಾಗುತ್ತಾ, ಎಲೆಗಳು ಹಳದಿಯಾಗಿ ಕೊನೆಗೆ ಶಿರವೇ ಕಳಚಿ ಬೀಳುವುದು ಬೇರು ಹುಳ ಬಾಧೆಯ ಲಕ್ಷಣ. ಈಗ ಇದರ ನಿರ್ವಹಣೆ ಅತಿ ಮುಖ್ಯವಾಗಿದೆ.

ಅಡಿಕೆ ಗಿಡದ ಬುಡಗಳಲ್ಲಿ ನೀರು ನಿಲ್ಲದಂತೆ ಮತ್ತು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಕಳೆಗಳನ್ನು ಕಾಲಕಾಲಕ್ಕೆ ಸರಿಯಾಗಿ ತೆಗೆಯಬೇಕು. ಮೊಟ್ಟೆಗಳು, ಮರಿಹುಳಗಳು ಮಣ್ಣಿನಲ್ಲಿ ಕಂಡುಬಂದಲ್ಲಿ ಅದನ್ನು ಸಂಗ್ರಹಿಸಿ ನಾಶಪಡಿಸಬೇಕು. ನಿಯಮಿತವಾಗಿ ಅಡಕೆ ತೋಟಗಳಲ್ಲಿ ಮಣ್ಣನ್ನು ಸಡಿಲಗೊಳಿಸುವುದರಿಂದ, ಬೇರು ಹುಳಗಳು ಮಣ್ಣಿನ ಮೇಲ್ಭಾಗಕ್ಕೆ ಬರುತ್ತವೆ.

Advertisement

ಅಡಿಕೆ ಮರಗಳ ಶಿರಭಾಗ ಸಪುರವಾಗಿ, ಎಲೆಗಳ ಸಂಖ್ಯೆ ಕಡಿಮೆಯಾಗುತ್ತಾ, ಎಲೆಗಳು ಹಳದಿಯಾಗಿ ಕೊನೆಗೆ ಶಿರವೇ ಕಳಚಿ ಬೀಳುವುದು ಬೇರು ಹುಳ ಬಾಧೆಯ ಲಕ್ಷಣ. ಅಡಿಕೆ ಬುಡವನ್ನು ಸಂಜೆ ಹೊತ್ತಿನಲ್ಲಿ ಸುಮಾರು 1/2 ದಿಂದ 3/4 ಅಡಿ ತನಕ ಅಗೆದು ನೊಡಿದರೆ ಬುಡದಲ್ಲಿ ಗೊಬ್ಬರದ ಹುಳುವಿನಂತ ಹುಳು ಕಾಣಸಿಗುತ್ತದೆ. ಸಾಮಾನ್ಯವಾಗಿ ಸಪ್ಟೆಂಬರ್ ತಿಂಗಳಿನಿಂದ ಅಕ್ತೋಬರ್ ನವೆಂಬರ್ ತಿಂಗಳ ತನಕ ಬುಡವನ್ನು ಕೆರೆದಾಗ ಹುಳುಗಳು ಕಾಣಸಿಕ್ಕರೆ, ಮೇ ತಿಂಗಳಿನಿಂದ ಜೂನ್ ಜುಲಾಯಿ ತನಕ ಬುಡದಲ್ಲಿ ದುಂಬಿಗಳು ಕಾಣಸಿಗುತ್ತವೆ.

ಬೇರು ಹುಳಗಳು ನಿರಂತರವಾಗಿ ಸಸಿಯ, ಮರದ ಎಳೆ ಬೇರನ್ನು ತಿನ್ನುತ್ತಾ ಬದುಕುತ್ತದೆ. ಇದರಿಂದಾಗಿ ಮರಕ್ಕೆ ಆಹಾರ ನೀರಿನ ಸರಬರಾಜು ಕಡಿಮೆಯಾಗಿ ಮರ ಕಳೆಗುಂದಿ ಸಾಯುತ್ತದೆ. ಎಳೆಯ ಸಸಿಗಳಲ್ಲಿ ಮೂರು ವರ್ಷದ ತನಕ ಇದನ್ನು ಹೊರನೋಟಕ್ಕೆ ಗುರುತಿಸುವುದು ಕಷ್ಟವಾಗುತ್ತದೆ. ಆರೋಗ್ಯವಂತ ಮರಗಳಾದರೆ ಅದರಲ್ಲಿ ಎಂಟರಿಂದ ಹತ್ತರ ತನಕ ಎಲೆಗಳು ಇರುತವೆ. ಎಲೆಗಳು ಕಡಿಮೆಯಾಗಿ, ಸ್ವಲ್ಪ ಮಟ್ಟಿಗೆ ಹಳದಿಯಾಗಿದ್ದರೆ, ಶಿರ ಭಾಗ ಸಣಕಲಾಗುತ್ತಾ, ಹೂಗೊಂಚಲಿನಲ್ಲಿ ಕಾಯಿಗಳು ಉದುರುತ್ತದೆಯಾದರೆ ಅಂತಃ ಮರದ ಬುಡ ಭಾಗ ಆರೋಗ್ಯವಾಗಿಲ್ಲವೆಂದು ನಿರ್ಧರಿಸಬಹುದು. ಅಲ್ಲಿ ಸಂಜೆ ಗಂಟೆ ನಾಲ್ಕರ ನಂತರ, ಬುಡ ಭಾಗವನ್ನು ಅಗೆದು ಮಣ್ಣನ್ನು ಪರೀಕ್ಷಿಸಿದರೆ ಹುಳಗಳು ಕಾಣಸಿಗುತ್ತವೆ.

ನೀರು ಕೆಳಗೆ ಹೋದಂತೇ ಹುಳಗಳು ಕೋಶಾವಸ್ಥೆಗೆ ಹೋಗುವ ಕಾರಣ ನಂತರ ಕಾಣಲು ಸಿಗುವುದು ಅಪರೂಪ. ಮೇ-ಜೂನ್ ತಿಂಗಳಿಗೆ ಒಂದು ಮಳೆ ಬಿದ್ದ ತಕ್ಷಣ, ಅವು ಕೋಶಾವಸ್ಥೆ ಬಿಟ್ಟು ಪ್ರೌಢ ಕೀಟಗಳಾಗುತ್ತವೆ. ಆ ಸಮಯದಲ್ಲಿ ದುಂಬಿಯಾಗಿ ಹೊರಗೆ ಹಾರಲಾರಂಭಿಸುತ್ತವೆ. ಬೇರು ಹುಳಗಳದ್ದು ನಾಲ್ಕು ಹಂತದ ಜೀವನ ಕ್ರಮ. ಒಂದು ಮೊಟ್ಟೆ, ನಂತರ ಮರಿ(ಹುಳು)ತದನಂತರ ಕೋಶ (ಪ್ಯೂಪೆ) ಆನಂತರ ದುಂಬಿ. ದುಂಬಿಯಾಗಿ ಗಂಡು ಹೆಣ್ಣು ಕೂಡಿ ಮತ್ತೆ ಮಣ್ಣಿನಲ್ಲಿ ಮೊಟ್ಟೆ ಇಡುತ್ತದೆ. ಬೇರು ಹುಳದಲ್ಲಿ ಮೂರು ಪ್ರಭೇಧಗಳನ್ನು ಕಾಣಬಹುದು. ಲ್ಯುಕೊಪೋಲಿಸ್ ಕೊನಿಯೋಪೊರಾ , ಲ್ಯುಕೊಪೋಲಿಸ್ ಬರ್ಮಿಸ್ಟೆರಿ ,ಮತ್ತು ಲ್ಯುಕೊಪೋಲಿಸ್ ಲೆಪಿಡೋಪೆರಾಗಳು . ಇದರಲ್ಲಿ ಮೊದಲನೆಯದರ ಜೀವನ ಚಕ್ರ ಒಂದು ವರ್ಷವಾದರೆ ಮತ್ತೆರಡರದ್ದು ಎರಡು ವರ್ಷ. ಮೊಟ್ಟೆ , ಮರಿ ಹಾಗೂ ಕೋಶಗಳು ಯಾವಾಗಲೂ ಮಣ್ಣಿನಲ್ಲಿ ಇರುತ್ತವೆ.

 

ನಿರ್ವಹಣೆ:

1. ಅಡಿಕೆ ತೋಟವನ್ನು ಹೆಚ್ಚು ಮರಳಿರುವ, ನೀರು ನಿಲ್ಲುವ, ನೆರೆ ಬೀಳುವ ಭೂಮಿಯಲ್ಲಿ ಮಾಡದಿರುವುದೇ ಒಳ್ಳೆಯದು.

2. ಒಂದು ವೇಳೆ ಇಂತಹ ಭೂಮಿಯಲ್ಲಿ ಅಡಿಕೆ ಕೃಷಿ ಮಾಡಿದ್ದರೆ, ಈ ಸಮಯದಲ್ಲಿ ಮಣ್ಣನ್ನು ಮಧ್ಯಾಹ್ನದ ನಂತರ ತಿರುವಿ ಹಾಕುತ್ತಾ ಬೇರು ಹುಳಗಳನ್ನು ಹಾಗೂ ಮೊಟ್ಟೆಗಳನ್ನು ಹೆಕ್ಕಿ ನಾಶಮಾಡಬೇಕು.

3. ನಂತರ ಮಣ್ಣಿಗೆ ಒಂದು ಕಿಲೋ ಬೇವಿನ ಹಿಂಡಿ ಹಾಕಿ ಬುಡಕ್ಕೆ ಒಂದು ಲೀಟರ್ ನೀರಿಗೆ 5 ಮಿಲಿಯಂತೆ ಕ್ಲೋರೋಫೆರಿಫೋಸ್ ಕೀಟನಾಶಕವನ್ನು ಬೆರೆಸಿ ಬುಡದ ಮಣ್ಣಿನ ಭಾಗಕ್ಕೆ 3 ಲೀ. ನಂತೆ ಹೊಯ್ದು ಮುಚ್ಚಬೇಕು.

4. ಪ್ರತಿ ಮರಕ್ಕೆ 100ಗ್ರಾಂ ನಂತೆ ಜೈವಿಕ ಕೀಟನಾಶಕ ಮೆಟರ್ಹೈಜಿಯಮ್ ಅನಿಸೊಪ್ಲಿಯೇ ಅನ್ನು ಹಾಕುವುದರಿಂದ ಬೇರುಹುಳುಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸಂತೋಷ್ ನಿಲುಗುಳಿ, ವಿಜ್ಞಾನಿಗಳು ಮತ್ತು ತೋಟಗಾರಿಕಾ ಸಲಹೆಗಾರರು, 9916359007

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ
April 12, 2025
8:44 PM
by: The Rural Mirror ಸುದ್ದಿಜಾಲ
ಕುರುವಾವ್ ಕರುಪ್ ಆಜ್ಞೆಯಂತೆ ಅಗ್ನಿ ಸೇವೆ ಮಾಡುವ ಮಹಾವಿಷ್ಣುಮೂರ್ತಿ
April 12, 2025
12:31 PM
by: ದ ರೂರಲ್ ಮಿರರ್.ಕಾಂ
4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ವಿಸ್ತರಿಸಲು ಕಾಫಿ ಮಂಡಳಿ ಯೋಜನೆ
April 12, 2025
7:32 AM
by: The Rural Mirror ಸುದ್ದಿಜಾಲ
ಪುತ್ತೂರು ಕ್ಯಾಂಪ್ಕೊ ಶಾಖೆಯಲ್ಲಿ ಮಣ್ಣಿನ ಪರೀಕ್ಷಾ ಯಂತ್ರಕ್ಕೆ ಚಾಲನೆ
April 11, 2025
8:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group