ಈಚೆಗೆ ಇಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟದ ಸುದ್ದಿಗಳು ಕೆಲವು ಕಡೆ ಕೇಳಿ ಬಂದಿತು. ಎಲ್ಲಾ ವಾಹನ ತಯಾರಿಕೆಯಲ್ಲೂ ಲೋಪಗಳು, ತಾಂತ್ರಿಕ ಸಮಸ್ಯೆ ಇದ್ದೇ ಇರುತ್ತದೆ. ಅದನ್ನು ಸುಧಾರಿಸಿ ಕಂಪನಿಗಳು ಮತ್ತೆ ಮಾರುಕಟ್ಟೆಗೆ ಬಿಡುತ್ತದೆ. ಈಚೆಗೆ ಇಲೆಕ್ಟ್ರಿಕ್ ಸ್ಕೂಟರ್ ಕೂಡಾ ಅದೇ ಸಮಸ್ಯೆ ಎದುರಿಸಿತ್ತು. ಸಮಸ್ಯೆ ಅರಿವಾದ ಕೂಡಲೇ ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ 1,441 ಯೂನಿಟ್‌ಗಳ ಬ್ಯಾಚ್ ಅನ್ನು ಸ್ವಯಂಪ್ರೇರಣೆಯಿಂದ ಹಿಂಪಡೆದುಕೊಂಡಿದೆ.
ಇದೇ ರೀತಿಯಲ್ಲಿ ಚೀನಾದಲ್ಲೂ ಒಕಿನಾವಾ ಆಟೋಟೆಕ್ ಇತ್ತೀಚೆಗೆ 3,000 ಯೂನಿಟ್‌ಗಳನ್ನು ಹಿಂಪಡೆದಿದೆ, ಪ್ಯೂರ್ ಇವಿ ಕೂಡಾ ಸುಮಾರು 2,000 ಯುನಿಟ್‌ಗಳನ್ನು ಹಿಂದಕ್ಕೆ ಪಡೆದಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಘಟನೆಗಳ ಬಗ್ಗೆ ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಸೂಚನೆ ನೀಡಿದ ಕೂಡಲೇ ಎಲ್ಲಾ ದೋಷಯುಕ್ತ ವಾಹನಗಳ ಬ್ಯಾಚ್‌ಗಳನ್ನು ತಕ್ಷಣವೇ ಹಿಂಪಡೆಯಲು ಕಂಪನಿಗಳು ಕ್ರಮ ಕೈಗೊಂಡಿದೆ.
ಓಲಾ ತನ್ನ ಸ್ಕೂಟರ್‌ಗಳನ್ನು ಹಿಂಪಡೆಯುವಾಗ ಏನು ಹೇಳಿದೆ? : ಓಲಾ ಎಲೆಕ್ಟ್ರಿಕ್ 1,441 ಸ್ಕೂಟರ್‌ಗಳ ಬ್ಯಾಚ್ ಅನ್ನು ಹಿಂತೆಗೆದುಕೊಂಡಿದೆ, ಅದರಲ್ಲಿ ಒಂದು ಸ್ಕೂಟರ್‌ಗೆ ಮಾರ್ಚ್ 26 ರಂದು ಪುಣೆಯ ಜನನಿಬಿಡ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದಾಗ ಬೆಂಕಿ ಹೊತ್ತಿಕೊಂಡಿತು. ಕಳೆದ ತಿಂಗಳ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಕಂಪನಿ ಹೇಳಿದೆ. ಪ್ರಾಥಮಿಕ ತನಿಖೆಯಲ್ಲಿ ಉಷ್ಣತೆಯ ಕಾರಣದಿಂದ ಹೀಗಾಗಿದೆ ಎಂದೂ ತಿಳಿಸಿದೆ. ಹೀಗಾಘಿ ಆ ನಿರ್ದಿಷ್ಟ ಬ್ಯಾಚ್‌ನಲ್ಲಿ ತಯಾರಾದ 1,441 ವಾಹನಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯಲಾಗುತ್ತಿದೆ, ”ಎಂದು ಅದು ಹೇಳಿದೆ. ಈಗ ಎಲ್ಲಾ ಬ್ಯಾಟರಿ ವ್ಯವಸ್ಥೆಗಳು, ಥರ್ಮಲ್ ಸಿಸ್ಟಮ್‌ಗಳು ಮತ್ತು ಸುರಕ್ಷತಾ ವ್ಯವಸ್ಥೆಗಳಲ್ಲಿ ಸಂಪೂರ್ಣ ತಪಾಸಣೆಯ ಮೂಲಕವೇ ಹೊರಹೋಗುತ್ತದೆ ಎಂದು ಕಂಪನಿ ಹೇಳಿದೆ.
ಇತ್ತೀಚಿನ EVಯ ಬೆಂಕಿ ಹತ್ತಿಕೊಂಡ ಘಟನೆಗಳು :ಇಲ್ಲಿಯವರೆಗೆ, ಮೂರು ಪ್ಯೂರ್ ಇವಿ, ಒಂದು ಓಲಾ, ಒಂದು ಬೂಮ್, ಎರಡು ಓಕಿನಾವಾ ಮತ್ತು 20 ಜಿತೇಂದ್ರ ಇವಿ ಸ್ಕೂಟರ್‌ಗಳು ದೇಶದಲ್ಲಿ ಬೆಂಕಿ ಹಚ್ಚಿಕೊಂಡ ವರದಿ ಇದೆ. ಅವುಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದರೂ ತನಿಖೆ , ಕಾರಣಗಳ ಬಗ್ಗೆ ತಪಾಸಣೆ ನಡೆಯುತ್ತಿದೆ.
ಶನಿವಾರ, ಮನೆಯಲ್ಲಿ ಚಾರ್ಜ್ ಮಾಡುವಾಗ ಬೂಮ್ ಮೋಟಾರ್ಸ್‌ಗೆ ಸೇರಿದ ಇ-ಸ್ಕೂಟರ್‌ನಲ್ಲಿ ಸ್ಫೋಟ ಸಂಭವಿಸಿ 40 ವರ್ಷದ ವ್ಯಕ್ತಿ ಸಾವನ್ನಪ್ಪಿದರು. ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಘಟನೆಯಲ್ಲಿ ಮೃತ ಕೋಟಕೊಂಡ ಶಿವಕುಮಾರ್ ಅವರ ಪತ್ನಿ ಹಾಗೂ ಇಬ್ಬರು ಪುತ್ರಿಯರಿಗೂ ತೀವ್ರ ಸುಟ್ಟ ಗಾಯಗಳಾಗಿವೆ.
ಡಿಟಿಪಿ ಡಿಸೈನರ್ ಆಗಿರುವ ಕುಮಾರ್ ಅವರು ಏಪ್ರಿಲ್ 22 ರಂದು ಇ-ಸ್ಕೂಟರ್ ಅನ್ನು ಖರೀದಿಸಿದ್ದರು. ಏಪ್ರಿಲ್ 23 ರಂದು ಬ್ಯಾಟರಿ ಸ್ಫೋಟಗೊಂಡಿದೆ ಎಂದು ವರದಿಗಳು ತಿಳಿಸಿವೆ.
ಬುಧವಾರ, ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಅವರ ಮನೆಯಲ್ಲಿ ಪ್ಯೂರ್ ಇವಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬ್ಯಾಟರಿ ಸ್ಫೋಟಗೊಂಡಿದ್ದರಿಂದ 80 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಅದಕ್ಕೂ ಮೊದಲು, ವೆಲ್ಲೂರಿನಲ್ಲಿ ಒಕಿನಾವಾ ಸ್ಕೂಟರ್ ಬೆಂಕಿಗೆ ಆಹುತಿಯಾದ ನಂತರ ಒಬ್ಬ ವ್ಯಕ್ತಿ ಮತ್ತು ಅವರ ಮಗಳು ತಮ್ಮ ಪ್ರಾಣವನ್ನು ಕಳೆದುಕೊಂಡರು.
EV ಗಳಿಗೆ ಗುಣಮಟ್ಟದ ಮಾರ್ಗಸೂಚಿಗಳ ಮೇಲೆ ಸರ್ಕಾರ ಈಗ ಗಮನಹರಿಸಿದೆ. ಅಗ್ನಿ ಅವಘಡಗಳ ಬಗ್ಗೆ ಸರ್ಕಾರವು ಪರೀಕ್ಷಾ ಸಮಿತಿಯನ್ನು ರಚಿಸುವಂತೆ ಚಿಂತನೆ ನಡೆಸಿದೆ. ಹೀಗಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ವಿದ್ಯುತ್ ವಾಹನಗಳ (ಇವಿ) ತಯಾರಕರಿಗೆ ‘ಗುಣಮಟ್ಟ-ಕೇಂದ್ರಿತ’ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂದು ಹೇಳಿದ್ದಾರೆ. ನಿರ್ಲಕ್ಷ್ಯ ತೋರಿದಲ್ಲಿ ಇವಿ ತಯಾರಕರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಚಿವಾಲಯದ ಆದೇಶಗಳು ಅಥವಾ ಮಾರ್ಗಸೂಚಿಗಳಿಗಾಗಿ ಕಾಯದೆ ದೋಷಯುಕ್ತ ಬ್ಯಾಚ್‌ಗಳನ್ನು ಗುರುತಿಸಿ ಮತ್ತು ಹಿಂಪಡೆಯುವ ಮೂಲಕ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ನಿತಿನ್ ಗಡ್ಗರಿ ಅವರು EV ಕಂಪನಿಗಳಿಗೆ ಸಲಹೆ ನೀಡಿದರು.