MIRROR FOCUS

2500 ಕಳೆದರೂ ಜಗ್ಗಲ್ಲ ರಾಮಮಮಂದಿರ | ಭೂಕಂಪವಾದ್ರೂ ತಡೆದುಕೊಳ್ಳುವ ಸಾಮರ್ಥ್ಯ | ಈ ಮಂದಿರ ವಿನ್ಯಾಸದ ಹಿಂದಿರುವ ಇಂಜಿನಿಯರ್‌ಗಳು ಯಾರು..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಯೋಧ್ಯೆ(Ayodhya) ರಾಮಮಂದಿರ(Rama mandir) ಕಟ್ಟಲು ಆರಂಭಿಸಿದ್ದಾಗಿಂದ ರಾಮನದ್ದೇ ಗುಣಗಾನ. ರಾಮನ ಮೂರ್ತಿ, ದೇವಾಲಯ, ಅಲ್ಲಿ ನಡೆಯುತ್ತಿರುವ ಕೆಲಸ, ಕೆತ್ತನೆ, ವಿನ್ಯಾಸ ಎಲ್ಲವೂ ಕುತೂಹಲದ ಸಂಗತಿಗಳೇ.. ಇದೀಗ 500 ವರ್ಷಗಳ ಮತ್ತೊಂದು ವನವಾಸ ಮುಗಿಸಿ ಭಗವಾನ್‌ ರಾಮ(Lord Rama)ಅಯೋಧ್ಯೆಯಲ್ಲಿ  ಮತ್ತೆ ಪಟ್ಟಕ್ಕೇರಿ ವಿರಾಜಮಾನನಾಗಿದ್ದಾನೆ. ಧರ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಆರಾಧ್ಯ ದೈವವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಅಯೋಧ್ಯೆ ಕಡೆ ಧಾವಿಸುತ್ತಿದೆ. ಕಳೆದ ಸೋಮವಾರ ಪ್ರಾಣ ಪ್ರತಿಷ್ಠಾಪನೆಯಾಗಿದೆ. ದೇಶ-ವಿದೇಶಗಳಲ್ಲಿ ರಾಮ ಜಪ, ಭಜನೆ ಇನ್ನೂ ಮಾರ್ಧನಿಸುತ್ತಿದೆ. ಇದು ತೀರದ ಭಕ್ತಿ.

Advertisement

ರಾಮನ ಪುನರಾಗಮನದಿಂದ ಅಯೋಧ್ಯೆ ರಾಮಮಂದಿರ ಕಂಗೊಳಿಸುತ್ತಿದೆ. ಸುಂದರ ದೇವಾಲಯ ಈಗ ಜಗತ್ತಿನ ಭಕ್ತಿಯ ಕೇಂದ್ರವಾಗಿದೆ. ರಾಮಮಂದಿರ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಅಯೋಧ್ಯೆ ರಾಮಮಂದಿರಕ್ಕೆ ಬರುವ ಪ್ರತಿ ಭಕ್ತರಿಗೂ ಇದರ ವೈಶಿಷ್ಟ್ಯ ತಿಳಿದಿರಲೇಬೇಕು.

ಕನ್ನಡದ ಹಿರಿಯ ಸಾಹಿತಿ ಡಿ.ವಿ.ಗುಂಡಪ್ಪ ಅವರ ‘ಮಂಕುತಿಮ್ಮನ ಕಗ್ಗ’ದ ಸಾಲುಗಳಿಗೆ ಹೇಳಿಮಾಡಿಸಿದಂತೆ ಅಯೋಧ್ಯೆ ರಾಮಮಂದಿರ ವಿನ್ಯಾಸ. ಈ ಭವ್ಯ ದೇವಾಲಯ ನಿರ್ಮಾಣಕ್ಕೆ ಸಾಂಪ್ರದಾಯಿಕ ಭಾರತೀಯ ಪರಂಪರೆಯ ವಾಸ್ತುಶಿಲ್ಪ ಹಾಗೂ ಆಧುನಿಕ ವಿಜ್ಞಾನ, ಎಂಜಿನಿಯರಿಂಗ್‌, ತಾಂತ್ರಿಕ ವಿಧಾನವನ್ನು ಸಂಯೋಜಿಸಿ ರಾಮಮಂದಿರವನ್ನು ನಿರ್ಮಿಸಲಾಗಿದೆ. ಶತಶತಮಾನಗಳ ವರೆಗೂ ರಾಮಭಕ್ತಿಯ ಪ್ರತಿಬಿಂಬವಾಗಿ ಈ ದೇವಾಲಯ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ‘ದೇವಾಲಯವನ್ನು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲಾಗಿದೆ. ಇದನ್ನು ಹಿಂದೆಂದೂ ಕಾಣದಂತಹ ಅಪ್ರತಿಮ ರಚನೆಯನ್ನಾಗಿ ಮಾಡಲು ಭಾರತದ ಉನ್ನತ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ದೇವಾಲಯದಲ್ಲಿ ಇಸ್ರೋ ತಂತ್ರಜ್ಞಾನಗಳನ್ನು ಸೂಕ್ತವಾಗಿ ಬಳಸಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.

ನಾಗರ ಶೈಲಿ ದೇವಾಲಯ : ಅಯೋಧ್ಯೆಯಲ್ಲಿ ಈಗ ಕಟ್ಟಲಾಗಿರುವ ರಾಮಮಂದಿರ ಸಂಪೂರ್ಣ ನಾಗರ ವಾಸ್ತು ಶೈಲಿಯಲ್ಲಿದೆ. ಉತ್ತರ ಭಾರತದ ಪುರಾತನ ದೇವಸ್ಥಾನಗಳೆಲ್ಲ ನಾಗರ ಶೈಲಿಯಲ್ಲೇ ಇವೆ. ಮುಖ್ಯವಾಗಿ ಗುಪ್ತರ ಕಾಲದಲ್ಲಿ ಶೈಲಿಯ ಹಲವು ದೇವಾಲಯಗಳನ್ನು ಕಾಣಬಹುದು. ನಾಗರ ಶೈಲಿಯ ವಿಶೇಷ ಏನೆಂದರೆ, ಕಲ್ಲುಗಳಿಂದ ವಿಶಾಲವಾದ ಮತ್ತು ಎತ್ತರವಾದ ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ ಮಂದಿರ ಕಟ್ಟಲಾಗುತ್ತದೆ. ದೊಡ್ಡ ಗೋಪುರದ ಕೆಳಗೆ ಗರ್ಭ ಗೃಹ ಇರುತ್ತದೆ. ಇದರ ಸುತ್ತ ಕೆಲವು ಮಂಟಪಗಳಿರುತ್ತವೆ (ರಾಮಮಂದಿರಕ್ಕೆ 5 ಮಂಟಪಗಳಿವೆ). ಉಳಿದಂತೆ ಗೋಪುರ, ಕಳಸ ಮತ್ತು ಅದರ ಮೇಲಿನ ಧ್ವಜ ದಕ್ಷಿಣ ಭಾರತದ ದೇವಾಲಯಗಳ ಶೈಲಿಯಲ್ಲೇ ಇರುತ್ತವೆ.

ಈ ದೇವಾಲಯದ ಶಿಲ್ಪಿ ಯಾರು? : ರಾಮಮಂದಿರ ವಾಸ್ತು ಶಿಲ್ಪಿ ಚಂದ್ರಕಾಂತ್‌ ಸೋಂಪುರ. ಅವರು ಗುಜರಾತ್‌ನ ಅಹಮದಾಬಾದ್‌ನ ಕರ್ಣಾವತಿಯವರು. ಅವರ ಅಜ್ಜ ಪ್ರಭಾಕರ್‌ ಸೋಂಪುರ ಗುಜರಾತ್‌ನ ಸೋಮನಾಥ ಮಂದಿರವನ್ನು ಕಟ್ಟಿದವರು. ನಾಗರ ಶೈಲಿಯಲ್ಲಿ ಮಂದಿರ ಕಟ್ಟುವ ಶಿಲ್ಪಿ ಅವರು. ತಲೆಮಾರುಗಳಿಂದ ಈ ಕುಟುಂಬ, ಸಂಪ್ರದಾಯದಂತೆ ಪರಂಪರೆಯ ದೇವಾಲಯ ರಚನೆಗಳನ್ನು ವಿನ್ಯಾಸಗೊಳಿಸಿಕೊಂಡು ಬಂದಿದೆ. ಈ ಕುಟುಂಬ 100 ಕ್ಕೂ ಹೆಚ್ಚು ದೇವಾಲಯಗಳನ್ನು ವಿನ್ಯಾಸಗೊಳಿಸಿದೆ. ಕೋಟ್ಯಂತರ ಭಾರತೀಯರ ಶತಶತಮಾನಗಳ ಕನಸಾಗಿದ್ದ ಭವ್ಯ ರಾಮಮಂದಿರವನ್ನು ವಿನ್ಯಾಸಗೊಳಿಸಿದ್ದು ಚಂದ್ರಕಾಂತ್‌ ಸೋಂಪುರ ಅವರ ಪುಣ್ಯ.

ವಾಸ್ತುಶಿಲ್ಪಿ ಹೇಳೋದೇನು? : ವಾಸ್ತುಶಿಲ್ಪದ ವಾರ್ಷಿಕಗಳಲ್ಲಿ ಶ್ರೀರಾಮ ದೇವಾಲಯವು ಭಾರತದಲ್ಲಿ ಮಾತ್ರವಲ್ಲ, ಭೂಮಿಯ ಮೇಲಿನ ಯಾವುದೇ ಸ್ಥಳದಲ್ಲಿ ಇದುವರೆಗೆ ಕಲ್ಪಿಸಲಾಗದ ಅಪರೂಪದ, ವಿಶಿಷ್ಟ ರೀತಿಯ ಭವ್ಯವಾದ ಸೃಷ್ಟಿಯಾಗಿದೆ ಎಂದು ಚಂದ್ರಕಾಂತ್‌ ಸೋಂಪುರ ಹೇಳುತ್ತಾರೆ.

ಮಂದಿರ ನಿರ್ಮಾಣಕ್ಕೆ ಕಬ್ಬಿಣ, ಸಿಮೆಂಟ್‌ ಬಳಕೆಯಿಲ್ಲ : ರಾಮಮಂದಿರದ ಮತ್ತೊಂದು ವೈಶಿಷ್ಟ್ಯವೆಂದರೆ, ಪುರಾತನ ಕಾಲದಲ್ಲಿ ಶಿಲೆಯನ್ನಷ್ಟೇ ಬಳಸಿ ನಿರ್ಮಿಸುತ್ತಿದ್ದಂತೆಯೇ ಇದನ್ನೂ ನಿರ್ಮಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಬೃಹತ್‌ ಗಾತ್ರದ ಕಲ್ಲುಗಳನ್ನಷ್ಟೇ ಬಳಸಲಾಗಿದೆ. ಕಬ್ಬಿಣ, ಸಿಮೆಂಟ್‌ ಯಾವುದನ್ನೂ ಬಳಸಿಲ್ಲ. ಪ್ರಾಕೃತಿಕ ವಿಕೋಪಗಳಿಂದ ಮಂದಿರ ಡ್ಯಾಮೇಜ್‌ ಆಗಬಾರದು. ಅದರ ಆಯುಷ್ಯವೂ ಹೆಚ್ಚಿನ ವರ್ಷ ಬರಬೇಕು ಎಂಬ ದೃಷ್ಟಿಯಿಂದ ನಿರ್ಮಾಣ ಕಾರ್ಯದಲ್ಲಿ ಪಾರಂಪರಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ.

ದೇವಾಲಯದ ಒಟ್ಟು ವಿಸ್ತೀರ್ಣ 2.7 ಎಕರೆ. ನಿರ್ಮಿತ ಪ್ರದೇಶವು ಸುಮಾರು 57,000 ಚದರ ಅಡಿಗಳಾಗಿದೆ. ಇದು ಮೂರು ಅಂತಸ್ತಿನ ರಚನೆಯಾಗಲಿದೆ. ಕಬ್ಬಿಣದ ಜೀವಿತಾವಧಿಯು ಕೇವಲ 80-90 ವರ್ಷಗಳಾಗಿರುತ್ತದೆ. ಹೀಗಾಗಿ, ದೇವಾಲಯದಲ್ಲಿ ಯಾವುದೇ ಕಬ್ಬಿಣ ಅಥವಾ ಉಕ್ಕು, ಸಿಮೆಂಟ್‌ ಬಳಸಿಲ್ಲ ಎಂದು ನೃಪೇಂದ್ರ ಮಿಶ್ರಾ ಹೇಳುತ್ತಾರೆ. ದೇವಾಲಯದ ಎತ್ತರವು 161 ಅಡಿ. ಅಂದರೆ, ಕುತಾಬ್ ಮಿನಾರ್‌ನ ಎತ್ತರದ ಸುಮಾರು 70% ಇದೆ.

ಉತ್ತಮ ಗುಣಮಟ್ಟದ ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಯನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗಿದೆ. ಜಾಯಿಂಟ್‌ (joints) ಮಾಡುವಂತಹ ಭಾಗಗಳಲ್ಲಿ ಸಿಮೆಂಟ್ ಅಥವಾ ಸುಣ್ಣದ ಗಾರೆಗಳ ಬಳಕೆ ಮಾಡಿಲ್ಲ. ಸಂಪೂರ್ಣ ರಚನೆಯ ನಿರ್ಮಾಣದಲ್ಲಿ ಲಾಕ್ ಮತ್ತು ಕೀ ಯಾಂತ್ರಿಕ ವ್ಯವಸ್ಥೆಯನ್ನು ಮಾತ್ರ ಬಳಸಲಾಗಿದೆ ಎಂದು ನಿರ್ಮಾಣ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಪ್ರದೀಪ್ ಕುಮಾರ್ ರಾಮಂಚಾರ್ಲ ತಿಳಿಸಿದ್ದಾರೆ.

2,500 ವರ್ಷಗಳ ವರೆಗೆ ಎಷ್ಟೇ ಭೂಕಂಪವಾದ್ರೂ ತಡೆದುಕೊಳ್ಳುತ್ತೆ : ಪ್ರಾಕೃತಿಕ ವಿಕೋಪಗಳು ತಂದೊಡ್ಡಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ರಾಮಮಂದಿರವನ್ನು ನಿರ್ಮಿಸಲಾಗಿದೆ. ಮಂದಿರದ ಆಯುಷ್ಯ ಹೆಚ್ಚು ವರ್ಷ ಇರಬೇಕು ಎಂಬ ದೃಷ್ಟಿಯಿಂದ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ಕೆಲಸ ಮಾಡಿದೆ. 2,500 ವರ್ಷಗಳ ವರೆಗೆ ಎಷ್ಟೇ ಭೂಕಂಪವಾದರೂ ಮಂದಿರಕ್ಕೆ ಯಾವುದೇ ಅಪಾಯವಿರುವುದಿಲ್ಲ. ಅದೆಲ್ಲವನ್ನೂ ತಡೆದುಕೊಂಡು ಸುರಕ್ಷಿತವಾಗಿ ನಿಲ್ಲುವಂತೆ ಮೂರು ಅಂತಸ್ತಿನ ಭವ್ಯ ಮಂದಿರ ನಿರ್ಮಿಸಲಾಗಿದೆ (ಈಗಾಗಲೇ ಮೊದಲ ಅಂತಸ್ತಿನ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2025 ರ ಹೊತ್ತಿಗೆ ಪೂರ್ಣಗೊಳ್ಳಲಿದೆ).

ರಾಮಮಂದಿರ ಹೇಗೆ ಕಟ್ಟಲಾಗ್ತಿದೆ? : ಇಡೀ ದೇವಾಲಯದ ಪ್ರದೇಶಕ್ಕೆ ಮಣ್ಣನ್ನು 15 ಮೀಟರ್ ಆಳಕ್ಕೆ ಅಗೆಯಲಾಗಿದೆ. 12-14 ಮೀಟರ್ ಆಳದಲ್ಲಿ ಇಂಜಿನಿಯರ್ಡ್ ಮಣ್ಣನ್ನು ಹಾಕಲಾಗಿದೆ. ಯಾವುದೇ ಕಬ್ಬಿಣದ ಸರಳುಗಳನ್ನು ಬಳಸಿಲ್ಲ. ರೋಲ್‌ ಮಾಡುವಾಗ 48 ಲೇಯರ್‌ (ಪದರ)ಗಳನ್ನು ಹಾಕಲಾಗಿದೆ. ಇದರ ಮೇಲೆ 1.5 ಮೀಟರ್ ದಪ್ಪದ M-35 ದರ್ಜೆಯ ಲೋಹ ಮುಕ್ತ ಕಾಂಕ್ರೀಟ್ ತೆಪ್ಪವನ್ನು ಬಲವರ್ಧನೆಯಾಗಿ ಹಾಕಲಾಗಿದೆ. ಅಡಿಪಾಯವನ್ನು ಮತ್ತಷ್ಟು ಬಲಪಡಿಸಲು ದಕ್ಷಿಣ ಭಾರತದಿಂದ ತಂದಿರುವ 6.3 ಮೀಟರ್ ದಪ್ಪದ ಗ್ರಾನೈಟ್ ಕಲ್ಲಿನ ಸ್ತಂಭವನ್ನು ಇರಿಸಲಾಗಿದೆ. ಈ ಕಲ್ಲುಗಳನ್ನು ಹೆಚ್ಚಾಗಿ ಕರ್ನಾಟಕದ್ದೇ ಬಳಸಲಾಗಿದೆ.

ರಾಜಸ್ಥಾನದ ಭರತ್‌ಪುರ ಜಿಲ್ಲೆ ಬಯಾನಾ ತಾಲೂಕಿನ ಒಂದು ಗುಡ್ಡದ ಪ್ರದೇಶದಲ್ಲಿ ಗುಲಾಬಿ ಬಣ್ಣದ ಸ್ಯಾಂಡ್‌ ಸ್ಟೋನ್‌ ಸಿಗುತ್ತದೆ. ಆ ಕಲ್ಲುಗಳನ್ನು ಬಳಸಿ ಈ ಮಂದಿರದ ನಿರ್ಮಾಣ ಆಗಿದೆ. ಕೆತ್ತನೆ ಆಗಿಯೇ ಬಂದಿರುವ ಕಲ್ಲುಗಳಿವು. ಇದರಿಂದಾಗಿ ಈ ಮಂದಿರಕ್ಕೆ ಪ್ರಾಚೀನತೆಯ ಮೆರುಗು ಸಿಕ್ಕಿದೆ. CBRI ಪ್ರಕಾರ, ನೆಲ ಅಂತಸ್ತಿನ ಒಟ್ಟು ಅಂಕಣಗಳ ಸಂಖ್ಯೆ 160, ಮೊದಲ ಮಹಡಿ 132 ಮತ್ತು ಎರಡನೇ ಮಹಡಿ 74. ಇವೆಲ್ಲವೂ ಮರಳುಗಲ್ಲಿನಿಂದ ಮಾಡಲ್ಪಟ್ಟಿವೆ. ಅಲಂಕರಿಸಿದ ಗರ್ಭಗುಡಿಯು ರಾಜಸ್ಥಾನದಿಂದ ತೆಗೆದ ಬಿಳಿ ಮಕ್ರಾನ ಅಮೃತಶಿಲೆಯಿಂದ ಕೂಡಿದೆ. ತಾಜ್‌ಮಹಲ್‌ ನಿರ್ಮಾಣಕ್ಕೂ ಇದೇ ಶಿಲೆ ಬಳಸಲಾಗಿದೆ. ತಾಜ್‌ಮಹಲ್ ಅನ್ನು ಮಕ್ರಾನಾ ಗಣಿಗಳಿಂದ ತೆಗೆದ ಅಮೃತಶಿಲೆ ಬಳಸಿ ನಿರ್ಮಿಸಲಾಗಿದೆ. CBRI ಸಂಸ್ಥೆಯು 2020 ರ ಆರಂಭದಿಂದಲೂ ರಾಮಮಂದಿರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

ಅತ್ಯಾಧುನಿಕ ಸಾಫ್ಟ್‌ವೇರ್‌ ಉಪಕರಣಗಳು ಮತ್ತು 21ನೇ ಶತಮಾನದ ಕಟ್ಟಡ ಸಂಕೇತಗಳು ರಾಮಮಂದಿರವನ್ನು ಪ್ರತಿನಿಧಿಸುತ್ತವೆ. ಈಗಿನ ಕಲೆಯ ಜ್ಞಾನದ ಆಧಾರದ ಮೇಲೆ ರಾಮಮಂದಿರವು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಉಳಿಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಅತ್ಯಂತ ಆನಂದದಾಯಕ ಅನುಭವ. ಉತ್ತಮ ಕಲಿಕೆಯ ಕಾರ್ಯವಾಗಿತ್ತು ಎಂದು ರಾಮಂಚಾರ್ಲ ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

10 hours ago

ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649

10 hours ago

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ

ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

19 hours ago

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

1 day ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

1 day ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago