ಕಾಂಗ್ರೆಸ್ ಸರ್ಕಾರ(Congress Govt) ಸ್ಪಿಂಕ್ಲರ್ ಸಬ್ಸಿಡಿಗೆ(Sprinkler Subsidy) ಕತ್ತರಿ ಹಾಕಿ ರೈತರಿಗೆ(farmer) ಅನ್ಯಾಯವೆಸಗಿದೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ್(Former Agriculture Minister BC Patil) ಕಿಡಿಕಾರಿದ್ದಾರೆ.
ಹಿಂದಿನ 90%ರಷ್ಟು ಸ್ಪಿಂಕ್ಲರ್ ಸೆಟ್ಗೆ ಸಬ್ಸಿಡಿ ನೀಡಲಾಗಿತ್ತು.ಸ್ಟ್ರಿಂಕ್ಲರ್ ಪೈಪ್ ಬಳಕೆಯಿಂದ ಇಳುವರಿ ಹೆಚ್ಚಳ, ನೀರು ಉಳಿತಾಯ ಹಾಗೂ ಶ್ರಮ ಕಡಿಮೆಯಾಗಿ ಸ್ಟ್ರಿಂಕ್ಲರ್ ಪೈಪ್‌ಗೆ ಬಾರಿ ಬೇಡಿಕೆ ಬಂದಿತ್ತು. ಶೇ.90ರ ಸಬ್ಸಿಡಿಯಲ್ಲಿ ಪೈಪ್ ಸೆಟ್ ಲಭಿಸಿ, 2 ಇಂಚಿನ ಸ್ಟ್ರಿಂಕ್ಲರ್‌ಗೆ 1,746 ರೂ., 2.5 ಇಂಚಿನ ಪೈಪ್‌ಗೆ 1876 ರೂ. ರೈತರು ಪಾವತಿಸಬೇಕಾಗಿತ್ತು.ಆದರೆ ಈಗಿನ ಕಾಂಗ್ರೆಸ್ ಸರ್ಕಾರ ರೈತರ ಜೇಬಿಗೆ ಕತ್ತರಿಹಾಕಲೆಂದೇ ಸ್ಪಿಂಕ್ಲರ್ ಸೆಟ್ ಮೊತ್ತವನ್ನು ಹೆಚ್ಚಿಸಿ ರೈತರಿಗೆ ಅನ್ಯಾಯ ಮಾಡಿದೆ.
ಕಾಂಗ್ರೆಸ್ ಸರ್ಕಾರ ಸಬ್ಸಿಡಿ ತಗೆದು 2 ಇಂಚಿನ ಸ್ಪಿಂಕ್ಲರ್ ಸೆಟ್‌ಗೆ 4139 ರೂ ಹಾಗೂ 2.5 ಇಂಚಿನ ಸ್ಪಿಂಕ್ಲರ್ ಸೆಟ್‌ಗೆ 4567 ರೂಪಾಯಿ ಮಾಡಿ ಈ ಸರ್ಕಾರ ರೈತರ ದುಡ್ಡಿನಲ್ಲಿಯೇ ಗ್ಯಾರಂಟಿ ಭಾಗ್ಯಗಳನ್ನು ನೀಡಿ ರೈತರ ದುಡ್ಡಿನಲ್ಲಿಯೇ ಸರ್ಕಾರ ನಡೆಸುತ್ತಿರುವುದು ರೈತರಿಗೆ ಒಂದು ದೊಡ್ಡ ಅನ್ಯಾಯ. ಇದು ಗ್ಯಾರೆಂಟಿಗಳ ಸರ್ಕಾರ ಅಲ್ಲ, ರೈತರಿಗೆ ಅನ್ಯಾಯವೆಸಗುತ್ತಿರುವ ಸರ್ಕಾರ ಎಂದು ಪತ್ರಿಕಾ ಪ್ರಕಟಣೆ ಮೂಲಕ ಬಿ. ಸಿ ಪಾಟೀಲ್ ತಿಳಿಸಿದ್ದಾರೆ.
Former Agriculture Minister BC Patil has said that the Congress Govt has cut the sprinkler subsidy and it is unfair to the farmers. In our previous BJP government (BJP Govt) 90% of the sprinkler set was subsidized.