ಅಕ್ಟೋಬರ್ 28ಕ್ಕೆ ವಿಶ್ವದಾದ್ಯಂತ ತೆರೆಮೇಲೆ ಕಾಣಿಸಿಕೊಳ್ಳಲಿರುವ ಗಂಧದ ಗುಡಿ ಸಿನಿಮಾ ಸರ್ಕಾರಿ ಶಾಲಾ ಮಕ್ಕಳು ಸಿನಿಮಾ ವೀಕ್ಷಿಸಲು ಗೋವಿಂದರಾಜನಗರದ ಮಾಜಿ ಎಂಎಲ್‌ಎ ಪ್ರಿಯಾ ಕೃಷ್ಣ ಅವರು ಉಚಿತವಾಗಿ ಸುಮಾರು 100 ಟಿಕೆಟ್‌ಗಳನ್ನು ನೀಡಿದ್ದಾರೆ.
ಮಕ್ಕಳಿಗೆ ಅನುಕೂಲವಾಗಲೆಂದು ಸುಮಾರು 100 ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಯುಗ ಎಂಬ ಎಂಜಿಓ ಮೂಲಕ ಈ ವ್ಯವಸ್ಥೆಯನ್ನು ಮಾಡಿದ್ದಾರೆ. ಅಕ್ಟೋಬರ್ 28 ಬೆಳಗ್ಗೆಯ 10.30ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾಗಡಿ ರಸ್ತೆಯಲ್ಲಿರುವ ಕಾಮಾಕ್ಷಿಪಾಳ್ಯದ ವಿಕ್ಟರಿ ಸಿನಿಮಾದಲ್ಲಿ 100 ಸರ್ಕಾರಿ ಶಾಲೆಯ ಮಕ್ಕಳು ಗಂಧದ ಗುಡಿ ಸಿನಿಮಾವನ್ನು ವೀಕ್ಷಣೆ ಮಾಡಲಿದ್ದಾರೆ.
ಅಪ್ಪು ಕೊನೆಯ ಸಿನಿಮಾ ‘ಗಂಧದ ಗುಡಿ’ ಕೇವಲ ಸಿನಿಮಾ ಅಷ್ಟೇ ಅಲ್ಲ. ಮಕ್ಕಳಿಗೆ ಅದೊಂದು ಶೈಕ್ಷಣಿಕ ಪ್ರವಾಸವೂ ಕೂಡ ಹೌದು. ಕರ್ನಾಟಕ ರಮಣೀಯ ಪ್ರದೇಶಗಳು, ವನ್ಯಜೀವಿಗಳು, ಸಸ್ಯರಾಶಿಗಳನ್ನು ಈ ಸಿನಿಮಾ ಮೂಲಕ ತಿಳಿಸಲಾಗಿದೆ. ‘ಗಂಧದ ಗುಡಿ’ ಒಂದು ಸಿನಿಮಾದ ಅನುಭವವನ್ನೂ ನೀಡುತ್ತದೆ. ಜೊತೆಗೆ ಇಂದಿನ ಪೀಳಿಗೆಗೆ ಒಂದು ಸಂದೇಶವನ್ನೂ ರವಾನಿಸುತ್ತೆ. ಈ ಕಾರಣಕ್ಕೆ ‘ಗಂಧದ ಗುಡಿ’ ಒಂದು ವಿಶಿಷ್ಠ ಅನುಭವವೂ ಹೌದು.
ಕರುನಾಡಿನ ಪ್ರಕೃತಿ ಸಂಪತ್ತನ್ನು ತೆರೆಮೇಲೆ ತೋರಿಸುವ ಪ್ರಯತ್ನಕ್ಕೆ ಪುನೀತ್ ರಾಜ್‌ಕುಮಾರ್ ಮುಂದಾಗಿದ್ದರು. ಅದನ್ನು ಕಣ್ತುಂಬಿಕೊಳ್ಳುವ ಮುನ್ನವೇ ಕಣ್ಮರೆಯಾಗ್ಬಿಟ್ಟರು. ಈಗ ಅವರ ಕನಸು ಜನರಿಗೆ ತಲುಪಲು ವೇದಿಕೆ ಸಜ್ಜಾಗಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…