ಅಡಿಕೆ ಹಳದಿಎಲೆ ರೋಗ, ಎಲೆಚುಕ್ಕಿ ರೋಗ | ಕ್ಯಾಂಪ್ಕೋ ಮಹಾಸಭೆಯಲ್ಲಿ ಪ್ರಶ್ನಿಸಿದ ಮಾಜಿ ಶಾಸಕ ಸಂಜೀವ ಮಠಂದೂರು | ಕ್ಯಾಂಪ್ಕೋ ಜೊತೆ ಯಾರೂ ನೆರವಾಗಿಲ್ಲ ಎನ್ನುವ ನೋವಿದೆ ಎಂದ ಕ್ಯಾಂಪ್ಕೋ ಅಧ್ಯಕ್ಷರು |

September 27, 2023
10:26 PM
ಕ್ಯಾಂಪ್ಕೋ ಮಹಾಸಭೆಯಲ್ಲಿ ಅಡಿಕೆ ಎಲೆಚುಕ್ಕಿ ರೋಗ ಹಾಗೂ ಅಡಿಕೆ ಹಳದಿ ಎಲೆರೋಗದ ಬಗ್ಗೆ ವಿಷಯ ಪ್ರಸ್ತಾಪವಾಯಿತು.

ಅಡಿಕೆ ಹಳದಿಎಲೆ ರೋಗ ಹಾಗೂ ಎಲೆಚುಕ್ಕಿ ರೋಗದ ಬಗ್ಗೆ ಅಡಿಕೆ ಬೆಳೆಗಾರರಿಗೆ ಆತಂಕ ಇದೆ.ಈ ಬಗ್ಗೆ ಅಧ್ಯಯನಕ್ಕೆ ಸೂಕ್ತವಾದ ಪ್ರಯೋಗಾಲಯಗಳು ಸಿಪಿಸಿಆರ್‌ಐಯಲ್ಲಿ ಕೂಡಾ ಇಲ್ಲ. ಇದಕ್ಕಾಗಿ ಸಂಶೋಧನೆಗೆ ಕ್ಯಾಂಪ್ಕೋ ಸಹಾಯ ಮಾಡಿದರೆ ಉತ್ತಮ, ಇದಕ್ಕಾಗಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

Advertisement
Advertisement

ಕ್ಯಾಂಪ್ಕೋ ಮಹಾಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೋ ಸಂಸ್ಥೆಯು 12 ಕೋಟಿ ನಷ್ಟ ಹೊಂದಿದೆ. ಈ ಬಾರಿ ಅಡಿಕೆ ಧಾರಣೆ ಸ್ಥಿರತೆ ಇದ್ದರೂ, ಅಡಿಕೆ ಖರೀದಿಯಾಗಿದ್ದರೂ ನಷ್ಟ ಆಗಿರುವುದಕ್ಕೆ ಎಚ್ಚರಿಕೆ ವಹಿಸಬೇಕು. ವಾರಣಾಸಿ ಸುಬ್ರಾಯ ಭಟ್ಟರು ಅಡಿಕೆ ಧಾರಣೆ ಕುಸಿತವಾದ ಸಂದರ್ಭದಲ್ಲಿ ಕ್ಯಾಂಪ್ಕೋ ಸ್ಥಾಪನೆ ಮಾಡಿ ಬೆಳೆಗಾರರಿಗೆ ಧೈರ್ಯ ತುಂಬಿದ್ದರು ಎಂದರು. ಈಗ  ಸಂಸ್ಥೆಯ ನಿರ್ದೇಶಕರನ್ನು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

Advertisement

ಅಡಿಕೆ ಧಾರಣೆಯ ಜೊತೆ ಇದೀಗ ಅಡಿಕೆ ಬೆಳೆಗಾರರಿಗೆ ಆತಂಕವಾಗಿರುವುದು ಎಲೆಚುಕ್ಕಿ ರೋಗ ಹಾಗೂ ಹಳದಿ ಎಲೆ ರೋಗದ ಸಮಸ್ಯೆ. ಹೀಗಾಗಿ ಇದೀಗ ಸಂಶೋಧನೆಗೆ ಕ್ಯಾಂಪ್ಕೋ ಸಹಾಯ ಮಾಡಿದರೆ ಉತ್ತಮ. ಸೂಕ್ತ ಪರಿಹಾರ ಕ್ರಮಗಳು ಆಗಬೇಕು ಎಂದು ಸಂಜೀವ ಮಠಂದೂರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ಅಡಿಕೆ ಹಳದಿ ಎಲೆ ರೋಗಕ್ಕೆ ಸಂಬಂಧಿಸಿ ಸೂಕ್ತ ಪರಿಹಾರ ಕ್ರಮ ಆಗಬೇಕು ಎಂದು ಅಡಿಕೆ ಬೆಳೆಯುವ ಪ್ರದೇಶದ ಎಲ್ಲಾ ಶಾಸಕರುಗಳಿಗೆ ಈ ಹಿಂದೆ ಮನವಿ ಮಾಡಿದ್ದೆವು. ಈ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 25 ಕೋಟಿ ರೂಪಾಯಿ ಇಂದಿಗೂ ಸರಿಯಾಗಿ ಬಳಕೆಯಾಗಿಲ್ಲ. ಆದರೆ ಈ ಭಾಗದ ಶಾಸಕರುಗಳು ಈ ಅನುದಾನ ಬಳಕೆಗೆ ನೆರವು ಮಾಡಿಲ್ಲ ಎಂಬ ನೋವಿದೆ ಎಂದರು. ಕ್ಯಾಂಪ್ಕೋದಿಂದಲೇ ನೆರವು ಮಾಡಲು ಸಾಧ್ಯವಿಲ್ಲ. ಕ್ಯಾಂಪ್ಕೋ ಸಂಸ್ಥೆಯಲ್ಲಿ ಪ್ರಯೋಗಾಲಯ ಇಲ್ಲ. ಏಕಾಏಕಿ ಸ್ಥಾಪನೆಗೂ ಸಾಧ್ಯವಿಲ್ಲ. ಹಣ ಕೊಡುವುದು ಆಡಳಿತ ಮಂಡಳಿ. ಎಲ್ಲಾ ಮಾಡುವುದು ಕ್ಯಾಂಪ್ಕೋಗೂ ಸಾಧ್ಯವಿಲ್ಲ.ಕ್ಯಾಂಪ್ಕೋ ಸೂಕ್ತವಾದ ಜಿಎಸ್‌ ಟಿ ಪಾವತಿ ಮಾಡಿಯೇ ಅಡಿಕೆ ಖರೀದಿ, ಮಾರಾಟ ಮಾಡುತ್ತದೆ. ಈ ಜಿಎಸ್‌ಟಿ ಸರ್ಕಾರಕ್ಕೆ ಪಾವತಿಯಾಗುತ್ತದೆ. ಇದಕ್ಕಾಗಿ ಸರ್ಕಾರದ ವತಿಯಿಂದಲೇ ಅಡಿಕೆಗೆ ನೆರವು ನೀಡಬೇಕಿದೆ, ಇದಕ್ಕೆ ಪ್ರಯತ್ನ ನಡೆಸಬೇಕು ಎಂದರು.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |
April 27, 2024
9:05 PM
by: ದ ರೂರಲ್ ಮಿರರ್.ಕಾಂ
Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |
April 27, 2024
3:21 PM
by: ಸಾಯಿಶೇಖರ್ ಕರಿಕಳ
ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |
April 27, 2024
2:15 PM
by: ದ ರೂರಲ್ ಮಿರರ್.ಕಾಂ
ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror