ಕಳೆದ ಬಾರಿ ಮುಂಗಾರು(Mansoon) ಕೈಕೊಟ್ಟಿದ್ದ ಹಿನ್ನೆಲೆ ರಾಜ್ಯಾದ್ಯಂತ ಬರಗಾಲ(Drought) ಆವರಿಸಿತ್ತು. ಆದರೆ ಈ ಬಾರಿ ಮುಂಗಾರು ನಿರೀಕ್ಷೆಗಿಂತ ಹೆಚ್ಚಾಗಿ ಈಗಾಗಲೇ ಮಲೆನಾಡು(Malenadu), ಕರಾವಳಿಯಲ್ಲಿ(Coastal) ಸುರಿಯುತ್ತಿದೆ. ಮಲೆನಾಡಿನಲ್ಲಿ ವಾಡಿಕೆಯಂತೆ ಜನವರಿಯಿಂದ ಜೂನ್ವರೆಗೆ 817 ಮಿ.ಮೀ ಮಳೆಯಾಗಬೇಕು. ಆದರೆ 1,096 ಮಿ.ಮೀ ಮಳೆ ಸುರಿದಿದ್ದು, ಇದು ಶೇ 76 ರಷ್ಟು ಹೆಚ್ಚು. ಕಳೆದ ಒಂದೇ ವಾರದಲ್ಲಿ 120 ಮಿ.ಮೀ ಮಳೆ ಆಗಬೇಕಿದ್ದು, 320 ಮಿ.ಮೀ ಮಳೆ ಬಿದ್ದಿದೆ(Excess Rainfall) ಎಂದು ಚಿಕ್ಕಮಗಳೂರಿನ(Chikkamagaluru) ಜಿಲ್ಲಾಧಿಕಾರಿ ಮೀನಾ ನಾಗಾರಾಜ್ ಮಾಹಿತಿ ನೀಡಿದರು.
ಈ ವರ್ಷದ ಮಹಾಮಳೆಗೆ 193 ಮನೆಗಳು ಧರಾಶಾಹಿಯಾಗಿವೆ. 77 ಮನೆಗಳಿಗೆ ಜಿಲ್ಲಾಡಳಿತ ಪರಿಹಾರ ನೀಡಿದೆ. 44 ಮನೆಗಳಿಗೆ ದಾಖಲೆ ಇಲ್ಲ ಎಂದು ಸರ್ಕಾರಕ್ಕೆ ವರದಿ ನೀಡಲಾಗಿದೆ. 1,800 ವಿದ್ಯುತ್ ಕಂಬಗಳು, 48 ಸೇತುವೆಗಳು ಹಾನಿಗೀಡಾಗಿವೆ. 90 ಎಕರೆ ತೋಟದ ಬೆಳೆ ನಾಶವಾಗಿದೆ. 10 ಕಿ.ಮೀ ರಸ್ತೆ ಹಾನಿಗೊಂಡಿದೆ. ಮುಳ್ಳಯ್ಯನಗಿರಿಯಲ್ಲಿ ಹಲವೆಡೆ ಭೂಕುಸಿತ ಉಂಟಾಗಿದ್ದು ಒಂದು ವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಲೋಕೋಪಯೋಗಿ ಇಲಾಖೆಯ ಮನವಿಯಂತೆ ಇನ್ನೊಂದು ವಾರ ಜಿಲ್ಲಾಡಳಿತ ನಿರ್ಬಂಧ ಹೇರಲಿದೆ ಎಂದು ಹೇಳಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…