ಅಡಿಕೆಯ ಜೊತೆ ಉಪಬೆಳೆ ಬೇಕೇ…? | ಕ್ಯಾಂಪ್ಕೋ ನೀಡಿದ ಸಂದೇಶ ಏನು…? | ಔಷಧಿ ಬೆಳೆ, ತಾಳೆ ಬೆಳೆಯತ್ತ ಕ್ಯಾಂಪ್ಕೋ ಚಿತ್ತ |

September 11, 2023
11:48 AM
ಅಡಿಕೆಯ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಹಂತ ಹಂತವಾಗಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ. ಕೊಕೋ ಹಾಗೂ ಅಡಿಕೆಯೇ ಪ್ರಮುಖವಾಗಿ ಇದೀಗ ರಬ್ಬರ್, ಕಾಳುಮೆಣಸು, ತೆಂಗು, ಗೇರು ಕೃಷಿಯತ್ತ ವಿಸ್ತರಣೆ ಮಾಡಿ ಇದೀಗ ಔಷಧಿ ಸಸ್ಯ ಹಾಗೂ ತಾಳೆ ಬೆಳೆಯತ್ತಲೂ ಕಾರ್ಯಕ್ಷೇತ್ರ ವಿಸ್ತರಣೆ ಮಾಡುತ್ತಿದೆ.
Advertisement

ಅಡಿಕೆ ಮಾರುಕಟ್ಟೆ ಹಾಗೂ ಅಡಿಕೆ ಬೆಳೆ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ನಡುವೆಯೇ ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಅಡಿಕೆಯ ಜೊತೆ ಉಪಬೆಳೆಯೂ ಅಗತ್ಯ ಎಂಬ ಸಂದೇಶವನ್ನು ನೀಡಿದೆ. ಈ ಬಾರಿಯ ಮಹಾಸಭೆಯಲ್ಲಿ ತಾಳೆ ಬೆಳೆ ಹಾಗೂ ಔಷಧಿ ಗಿಡಗಳ ಕಡೆಗೂ ಕ್ಯಾಂಪ್ಕೋ ವಿಸ್ತರಿಸುವ ಯೋಚನೆ ಮಾಡಿದೆ. ಈ ಬಗ್ಗೆ ಬೈಲಾ ತಿದ್ದುಪಡಿ ತರಲಿದೆ.

Advertisement

ಅಡಿಕೆ ಬೆಳೆವಿಸ್ತರಣೆ ವಿಪರೀತವಾಗಿ ನಡೆಯುತ್ತಿದೆ. ಅಡಿಕೆಯ ಭವಿಷ್ಯದ ಧಾರಣೆ ಹೇಗಿದ್ದೀತು, ಎನ್ನುವ ಆತಂಕ, ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ. ಅಂದು ಅಡಿಕೆ ಧಾರಣೆ ಸಂಕಷ್ಟದ ಸಮಯದಲ್ಲಿ ಅಡಿಕೆ ಬೆಳೆಗಾರರದ್ದೇ ಆದ ಸಂಸ್ಥೆ ಆರಂಭ ಮಾಡಲಾಗಿತ್ತು. ಅಂದು ಕೊಕೋ ಹಾಗೂ ಅಡಿಕೆಯನ್ನು ಮಾತ್ರವೇ ಕೇಂದ್ರೀಕರಿಸಿ ಸ್ಥಾಪನೆಯಾಗಿತ್ತು. ಆ ಕಾಲದಲ್ಲಿ ಕೊಕೋ ಹಾಗೂ ಅಡಿಕೆ ಎರಡೂ ಕೃಷಿಯೂ ಸಂಕಷ್ಟದಲ್ಲಿತ್ತು. ಈ ಮೂಲಕ ಕ್ಯಾಂಪ್ಕೋ ಸ್ಥಾಪನೆಯಾಗಿ ಅಡಿಕೆ ಧಾರಣೆ ಸ್ಥಿರತೆಗೆ ಕಾರಣವಾಯಿತು. ಅದೇ ಮಾದರಿಯಲ್ಲಿ ಹಲವು ಸಹಕಾರಿ ಸಂಘಗಳು ಅಡಿಕೆ ಬೆಳೆಗಾರರಿಗೆ ಪೂರಕವಾಗಿ ಕೆಲಸ ಮಾಡಿದ್ದವು.

Advertisement
Advertisement

ಅಡಿಕೆ ಬೆಳೆ, ಧಾರಣೆ ಉತ್ತಮವಾಗಿರುವ ಈ ಸಂದರ್ಭದಲ್ಲಿಯೇ ಕ್ಯಾಂಪ್ಕೋ ಕೃಷಿಕರ ಪರವಾಗಿಯೇ ಕೆಲಸ ಮಾಡುತ್ತಲೇ ಇತ್ತು. ಕೃಷಿಕರ ಬೆಳೆ ಹಾಗೂ ಕೃಷಿ ಚಟುವಟಿಕೆ ಗಮನಿಸಿ ಕ್ಯಾಂಪ್ಕೋ ನಿಧಾನವಾಗಿ ಕಾರ್ಯಕ್ಷೇತ್ರವನ್ನು ಕಾಳುಮೆಣಸು, ರಬ್ಬರ್‌ ಕಡೆಗೂ ವಿಸ್ತರಣೆ ಮಾಡಿತ್ತು. ಅದಾದ ನಂತರ ಗೇರು, ತೆಂಗಿನ ಕಡೆಗೂ ವಿಸ್ತರಣೆ ಮಾಡಿತ್ತು. ಇದೀಗ ವಿಶೇಷವಾಗಿ ಔಷಧಿ ಸಸ್ಯಗಳು ಹಾಗೂ ತಾಳೆ ಕೃಷಿಯ ಕಡೆಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಣೆ ಮಾಡುವ ಸಿದ್ಧತೆ ನಡೆಸಿದೆ. ಈ ಬಾರಿಯ ಮಹಾಸಭೆಯಲ್ಲಿ ಬೈಲಾ ತಿದ್ದುಪಡಿ ಮಾಡುವ ಹೆಜ್ಜೆ ಇರಿಸಿದೆ.

ಉದ್ದೇಶಿತ ಬೈಲಾ ತಿದ್ದುಪಡಿ

ದಕ್ಷಿಣ ಕನ್ನಡದಲ್ಲಿ  ಅಡಿಕೆಯ ಜೊತೆಗೆ ತಾಳೆ ಬೆಳೆಯೂ ಈಗ ಪರ್ಯಾಯ ಬೆಳೆಯಾಗುತ್ತಿದೆ. ಅಡಿಕೆ ಹಳದಿ ಎಲೆರೋಗ ಪೀಡಿತವಾಗಿ ಬೆಳೆನಾಶವಾಗುವ ಸಂದರ್ಭ ಬಂದಾಗ ಕೆಲವು ಕೃಷಿಕರು ತಾಳೆ ಕೃಷಿಯತ್ತ ಮನಸ್ಸು ಮಾಡಿದ್ದರು. ಈ ಬಗ್ಗೆ ಸುಳ್ಯದ ತೊಡಿಕಾನದ ದಿವಂಗತ ವಸಂತ ಭಟ್‌ ಅವರು ಅಡಿಕೆಗೆ ತಾಳೆ ಬೆಳೆಯೇ ಪರ್ಯಾಯ ಕೃಷಿ ಎಂದು ಅಭಿಯಾನ ಮಾಡಿದ್ದರು. ಇದೆಲ್ಲದರ ಪರಿಣಾಮ ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶದ ಕೆಲವು ಕಡೆ ತಾಳೆ ಕೃಷಿ ವಿಸ್ತರಣೆಯಾಯಿತು. ಇದೀಗ ತಾಳೆ ಎಣ್ಣೆ ತಯಾರಿಕೆಗೆ ದಕ್ಷಿಣ ಕನ್ನಡ ಜಿಲ್ಲೆಯೇ ಸೂಕ್ತವಾದ ವ್ಯವಸ್ಥೆಯೂ ಆಗಬೇಕಾಗಿದೆ. ಈ ಎಲ್ಲದರ ನಡುವೆಯೇ ಕ್ಯಾಂಪ್ಕೋ ಕೂಡಾ ಈಗ ತಾಳೆ ಕೃಷಿಯತ್ತ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಣೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

Advertisement

ಅಡಿಕೆ ಬೆಳೆಗಾರರು ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿ ಅಡಿಕೆಯ ಜೊತೆಗೆ ಪರ್ಯಾಯ ಕೃಷಿಯ ಅಗತ್ಯ ಇದೆ ಎನ್ನುವುದನ್ನು ಕ್ಯಾಂಪ್ಕೋ ಪರೋಕ್ಷವಾಗಿ ಕೆಲವು ಸಮಯಗಳಿಂದ ಹೇಳುತ್ತಾ ಬಂದಿರುವುದು ಸತ್ಯ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ, ಪತ್ರಕರ್ತ 15 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಚೀನಾವನ್ನು ಸೈಡ್‌ಲೈನ್‌ ಮಾಡಿದ ಯುಎಸ್‌ | ಯುಎಸ್‌ನ ವಾಲ್‌ಮಾರ್ಟ್‌ಗೆ ಭಾರತದಿಂದ ಚಿಲ್ಲರೆ ವಸ್ತುಗಳ ರಫ್ತು | ಈ ವರ್ಷ ವಾಲ್‌ಮಾರ್ಟ್‌ ಆಮದು ಮಾಡಿಕೊಂಡ ವಸ್ತು ಎಷ್ಟು..? |
December 1, 2023
2:10 PM
by: The Rural Mirror ಸುದ್ದಿಜಾಲ
ಲೆಮನ್​ ಗ್ರಾಸ್​ ಬೆಳೆಯ ಮೂಲಕ ಬದುಕು ಬದಲಾಯಿಸಿದ ಕುಟುಂಬ | ನಕ್ಸಲ್‌ ಪೀಡಿತ ಪ್ರದೇಶದ ರೈತ ದಂಪತಿಯ ಯಶೋಗಾಥೆ
December 1, 2023
1:25 PM
by: The Rural Mirror ಸುದ್ದಿಜಾಲ
ಪಾಕಿಸ್ತಾನದ ಆರ್ಥಿಕ ಸಮಸ್ಯೆ ಹಲವು ದೇಶಗಳಿಗೆ ಹೊಡೆತ…! | ಹೊರ ದೇಶಗಳಿಂದ ಆಮದಾಗುತ್ತಿದ್ದ ಗೋಧಿಯ ಮೇಲೆ ನಿಷೇಧ ಹೇರಿದ ಪಾಕ್‌ |
December 1, 2023
12:44 PM
by: The Rural Mirror ಸುದ್ದಿಜಾಲ
ಪ್ರಯಾಣಿಕರ ಸುರಕ್ಷಾ ದೃಷ್ಟಿಯಿಂದ ಇಂದಿನಿಂದ ಖಾಸಗಿ ಸಾರಿಗೆ ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ | ಅಳವಡಿಕೆಗೆ ಎಷ್ಟು ಖರ್ಚಾಗುತ್ತೆ?
December 1, 2023
12:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror