Advertisement
ಪ್ರಮುಖ

ಗ್ರಾಮೀಣ ಮಹಿಳಾ ಉದ್ಯಮಶೀಲರಿಗೆ ನೆರವಾಗಲು ಜಿಲ್ಲಾ ಮಟ್ಟದಲ್ಲಿ “ಸ್ವಾವಲಂಬನೆ” ಕಾರ್ಯಕ್ರಮ ವಿಸ್ತರಣೆ | ವಿವಿಧ ಉತ್ಪನ್ನಗಳ ಮಾರಾಟಕ್ಕೆ “ಸಂಜೀವಿನಿ” ಇ-ಮಾರ್ಕೆಟ್ ಆರಂಭ

Share

ಕೋಲಾರದ(Kolar) ಸಾಮಾನ್ಯ ಬಡ ಕುಟುಂಬದ ಗೃಹಿಣಿ ಜಯಸುಧಾ ಜೀವನ ನಡೆಸಲು ಕಷ್ಟವಾಗುತಿತ್ತು. ಆಕೆಗೆ ಮೂರು ಬೆಳೆದು ನಿಂತ ಮಕ್ಕಳಿದ್ದರು. ನಿತ್ಯದ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಜಯಸುಧಾ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಿರಲಾಗಿ ಭರವಸೆಯನ್ನೇ ಕಳೆದುಕೊಂಡಿದ್ದ ಜಯಸುಧಾ ಅವರಿಗೆ ಹೇಗೋ ಸರ್ಕಾರದ “ಸ್ವಾವಲಂಬನೆ” ಯೋಜನೆಯ ಪರಿಚಯವಾಗುತ್ತದೆ. ಈ ಯೋಜನೆಯಡಿಯಲ್ಲಿ ಸ್ವಸಹಾಯ ಗುಂಪುಗಳಲ್ಲಿನ ಮಹಿಳೆಯರ ಉದಮಶೀಲತೆಯ ಉತ್ಸಾಹವನ್ನು ಪೋಷಿಸುವ ಅವಕಾಶಗಳಿಗೆ ಆಕೆ ತೆರೆದುಕೊಂಡರು. ಕರ್ನಾಟಕ(Karnataka) ರಾಷ್ಟೀಯ ಜೀವನೋಪಾಯ ಇಲಾಖೆಯ ಈ ಯೋಜನೆಯು ಜಯಸುಧಾ ಅವರ ಬದುಕನ್ನೇ ಬದಲಿಸಿಬಿಟ್ಟಿದೆ.

ಆಕೆ ಅಡುಗೆ ಹಾಗೂ ಆರೋಗ್ಯ(Health) ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ತೊಡಗಿದರು. ಇದೀಗ ಜಯಸುಧಾ ವಾರ್ಷಿಕ ಎರಡು ಲಕ್ಷ ರೂಪಾಯಿಗಳಷ್ಟು ವಹಿವಾಟು(Business) ನಡೆಸುತ್ತಿದ್ದಾರೆ. ಎರಡು ದಿನಗಳ ಕಾಲ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ “ ಉದ್ಯಮಶೀಲ ಮಹಿಳೆಯರ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಜಯಸುಧಾ ಅವರಂತೆ ಸುಮಾರು 150 ಮಹಿಳೆಯರು ತಮ್ಮ ಯಶೋಗಾಥೆಯುನ್ನು ಹೇಳಿಕೊಂಡರು. ಸಮಾವೇಶವನ್ನು ಉದ್ಘಾಟಿಸಿದ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವೈಧ್ಯಕ್ಷೀಯ ಶಿಕ್ಷಣ ಸಚಿವರಾದ(Education minister) ಡಾ. ಶರಣ ಪ್ರಕಾಶ್ ಪಾಟೀಲ್(Dr Sharana Prakash Patil) ಅವರು ಗ್ರಾಮೀಣ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ಮಹಿಳಾ ಸ್ವಸಹಾಯ ಗುಂಪಿನ ಉದ್ಯಮಶೀಲ ಮಹಿಳೆಯರನ್ನು ಹಾಡಿಹೊಗಳಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಡಾ.ಪಾಟೀಲರು ಸರ್ಕಾರದ ’ಸ್ವಾವಲಂಭನೆ” ಯೋಜನೆಯು ಗ್ರಾಮೀಣ ಮಹಿಳೆಯರನ್ನು ಉದ್ಯಮಶೀಲರನ್ನಾಗಿಸುವಲ್ಲಿ ಮತ್ತು ಸಶಕ್ತರನ್ನಾಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. “ಸ್ವಾವಲಂಭನೆ” ಯೋಜನೆಯು ಐ ಐ ಎಂ ಬೆಂಗಳೂರಿನ ಸಹಯೋಗದಲ್ಲಿ 2023 ರ ಅಕ್ಟೋಬರ್ 11 ರಂದು ಉದ್ಘಾಟನೆಗೊಂಡಿತ್ತು.

ಈ ಕಾರ್ಯಕ್ರಮವು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗಾಗಿ ನಮ್ಮ ಸಾಂಘಿಕ ಪ್ರಯತ್ನದ ಫಲ, ಇದು ಸ್ವಸಹಾಯ ಸಂಘಗಳ ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯ ಉತ್ಸಾಹ ಚಿಮ್ಮಿಸುವ ಹಾಗೂ ಸುಸ್ಥಿರ ಬದುಕು ಕಟ್ಟಿಕೊಳ್ಳುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಇದರ ಗುರಿ 150 ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರಿಗೆ ನೆರವು ಕೊಡುವುದಾಗಿತ್ತು ಆದರೆ ನಮ್ಮ ಗುರಿಯನ್ನೂ ದಾಟಿದ ಈ ಯೋಜನೆಯು ಗ್ರಾಮೀಣ ಭಾಗದಲ್ಲಿ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಿದೆ ಎಂದು ಸಚಿವ ಡಾ. ಪಾಟೀಲರು ಅಭಿಮಾನದಿಂದ ನುಡಿದರು.

ಇದೀಗ 40,000 ಮಹಿಳೆಯರು ಸರ್ಕಾರದ ನೆರವಿಗೆ ಅರ್ಜಿ ಸಲ್ಲಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಸ್ವಾವಲಂಭನೆ ಯೋಜನೆಯನ್ನು ಆರಂಭಿಸಲಿದೆ. ಅದರ ಫಲವಾಗಿ ಗ್ರಾಮೀಣ ಭಾಗದ ಹೆಚ್ಚಿನ ಮಹಿಳೆಯರಿಗೆ ಯೋಜನೆಯ ಅನುಕೂಲ ಸಿಗಲಿದೆ ಎಂದು ಹೇಳಿದರು.

“ಸ್ವಾವಲಂಭನೆ” ಯೋಜನೆಯ ಅಡಿಯಲ್ಲಿ ಅನುಧಾನ ಹಾಗೂ ಸಾಲದ ರೂಪದಲ್ಲಿ ಮಹಿಳೆಯರ ಉದ್ಯಮಗಳಿಗೆ ನೆರವು ನೀಡುತ್ತಾ ಬಂದಿದ್ದು ಇದರಿಂದ ಅವರು ಮಹತ್ವದ ಯಶಸ್ಸು ಕಂಡಿದ್ದಾರೆ. ಮಹಿಳಾ ಉದ್ಯಮಶೀಲರಿಗೆ ಲೆಕ್ಕ ಪತ್ರಗಳನ್ನು ನಿರ್ವಹಿಸುವುದು, ಹಣಕಾಸಿನ ನಿರ್ವಹಣೆ, ವ್ಯಾಪಾರದ ರೂಪುರೇಷೆಗಳು, ಪ್ಯಾಕೇಜಿಂಗ್, ಬ್ರಾಂಡಿಂಗ್, ಮಾರಾಟ ಮತ್ತು ಸಾಮಾಜಿಕ ಜಾಲತಾಣಗಳನ್ನು ಅವುಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವುದರ ಮೂಲಕ ಹೆಚ್ಚಿನ ಜನರಿಗೆ ತಲುಪಿಸುವ ಚಾಕಚತ್ಯತೆಯನ್ನು ತಿಳಿಸಿಕೊಡುವ ಮಾರ್ಗದರ್ಶನ ಸಭೆಗಳು ಮಹತ್ವದ ಮತ್ತು ಬಹುಮುಖ್ಯ ಪಾತ್ರ ನಿರ್ವಹಿಸಿವೆ ಎಂದರ.

ಕರ್ನಾಟಕ ಸರ್ಕಾರದ ಜೀವನೋಪಾಯ ಮಿಷನ್ ನ ನಿರ್ದೇಶಕರಾದ ಶ್ರೀವಿಧ್ಯಾ, ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ಒಡೆಯರ್, ಗ್ರಾಮೀಣ ಜೀವನೋಪಾಯ ಕೇಂದ್ರದ ನಿರ್ದೇಶಕರಾದ ಎಸ್.ಎಂ. ರಾಜೇಶ್ವರಿ, ತ್ರಿಪುರಾ ಜೀವನೋಪಾಯ ಮಿಷನ್ ನ ಸಿ.ಇ.ಒ ಅಜಿತ್ ಶುಕ್ಲಾ ದಾಸ್, ಹರಿಯಾಣ ಜೀವನೋಪಾಯ ಮಿಷನ್ ನ ಸಿ.ಇ.ಒ ಡಾ. ಅರವಿಂದ್ ಕೌರ್, ಕೊಲ್ಕತ್ತಾ ಐಐಎಂ ನ ಸಿ.ಇ.ಒ ಗೌರವ್ ಕಪೂರ್, ಪಶ್ಚಿಮ ಬಂಗಾಳದ ಜೀವನೋಪಾಯ ಮಿಷನ್ ನ ಸಿ.ಇ.ಒ ಸುದೀಪ್ ಸರ್ಕಾರ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

8 hours ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago