ಪ್ರಸಕ್ತ ಹಣಕಾಸು ವರ್ಷ 2022ರ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಅಂದರೆ ಇನ್ನು ನಾಲ್ಕು ತಿಂಗಳು ಬಾಕಿ ಇರುವ ಈ ಅವಧಿಯಲ್ಲಿ, ದೇಶದ ಕೃಷಿ ಮತ್ತು ಸಂಸ್ಕರಿಸಿದ ಆಹಾರಗಳ ರಫ್ತು $19.69 ಶತಕೋಟಿಗೆ ಏರಿದೆ. ಇದೇ ಒಂದು ವರ್ಷದ ಹಿಂದೆ ರಫ್ತು ಪ್ರಮಾಣ $17.51 ಶತಕೋಟಿಯಷ್ಟಿತ್ತು. ಈ ಬಾರಿ ರಫ್ತಿನಲ್ಲಿ 12 ರಷ್ಟು ಬೆಳವಣಿಗೆ ದಾಖಲಾಗಿದೆ.
ಅಪೆಡಾ ಅಧ್ಯಕ್ಷ ಅಂಗುಮುತ್ತು ಪ್ರಕಾರ, ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಯುಎಸ್ಎ, ಸೌದಿ ಅರೇಬಿಯಾ, ಇಂಡೋನೇಷ್ಯಾ ಭಾರತೀಯ ಕೃಷಿ ಉತ್ಪನ್ನಗಳ ಪ್ರಮುಖ ಖರೀದಿದಾರರಾಗಿ ಉಳಿದಿವೆ. ಕೇಂದ್ರ ಸರ್ಕಾರವು 2022-23ರ ಹಣಕಾಸು ವರ್ಷದಲ್ಲಿ 23.56 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಹೊಂದಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಬಾಸ್ಮತಿ ಅಕ್ಕಿ ರಫ್ತು $2.38 ಶತಕೋಟಿಯಿಂದ $3.34 ಶತಕೋಟಿಗೆ 40.26 ಶೇಕಡಾ ಏರಿಕೆಯಾಗಿದೆ. ಹಾಗೆ ಇನ್ನಿತರ ಅಕ್ಕಿ ರಫ್ತು ಶೇಕಡಾ 3.35 ರಷ್ಟು ಏರಿಕೆಯಾಗಿ $4.66 ಶತಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶವು $4.51 ಬಿಲಿಯನ್ ಮೌಲ್ಯದ ಬಾಸ್ಮತಿ ಅಲ್ಲದ ಅಕ್ಕಿಯನ್ನು ರಫ್ತು ಮಾಡಿದೆ.
ತಾಜಾ ತರಕಾರಿಗಳ ರಫ್ತು $616 ಮಿಲಿಯನ್‌ನಿಂದ $662 ಮಿಲಿಯನ್‌ಗೆ 7.5 ಶೇಕಡಾ ಏರಿಕೆಯಾಗಿದೆ, ತಾಜಾ ಹಣ್ಣುಗಳ ರಫ್ತು $462 ಮಿಲಿಯನ್‌ನಿಂದ $459 ಮಿಲಿಯನ್‌ಗೆ ಇಳಿದಿದೆ. ಬೇಳೆಕಾಳುಗಳ ರಫ್ತು ಶೇಕಡಾ 80.38 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ $242 ಮಿಲಿಯನ್‌ಗೆ ಹೋಲಿಸಿದರೆ $436 ಮಿಲಿಯನ್‌ಗೆ ತಲುಪಿದೆ.
ಕೋಳಿ ಉತ್ಪನ್ನಗಳ ರಫ್ತು $50 ಮಿಲಿಯನ್‌ನಿಂದ $95 ಮಿಲಿಯನ್‌ಗೆ ಶೇಕಡಾ 91.7 ರಷ್ಟು ಹೆಚ್ಚಾಗಿದೆ, ಮೆಕ್ಕೆಜೋಳ ಸೇರಿದಂತೆ ಇತರ ಧಾನ್ಯಗಳ ರಫ್ತು $869 ಮಿಲಿಯನ್ ತಲುಪಿದೆ. ಧಾನ್ಯ ರಫ್ತು ಕಳೆದ ವರ್ಷದ ಇದೇ ಅವಧಿಯಲ್ಲಿ $764 ಮಿಲಿಯನ್‌ಗೆ ಹೋಲಿಸಿದರೆ 13.6 ಶೇಕಡಾ ಹೆಚ್ಚಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…