ಮಂಗಳೂರು-ಬೆಂಗಳೂರು ಸಂಪರ್ಕಿಸಲು ಎಕ್ಸ್‌ಪ್ರೆಸ್‌ವೇ | 2028 ರಲ್ಲಿ ಪ್ರಾರಂಭವಾಗುವ ನಿರೀಕ್ಷೆ |

November 12, 2024
10:26 PM

ಮಂಗಳೂರು-ಬೆಂಗಳೂರು ಸಂಪರ್ಕಿಸಲು ಎಕ್ಸ್‌ಪ್ರೆಸ್‌ವೇ (ಹೈ-ಸ್ಪೀಡ್ ಕಾರಿಡಾರ್) ನಿರ್ಮಿಸಲು ಯೋಜನೆ ರೂಪಿಸಲಾಗಿದೆ.  ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈ ಬಗ್ಗೆ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಲು ಸಲಹಾ ಸಂಸ್ಥೆಯನ್ನು ಆಯ್ಕೆ ಮಾಡಲು ಬಿಡ್‌ಗಳನ್ನು ಆಹ್ವಾನಿಸಿತ್ತು. ಇದೀಗ 9 ಸಂಸ್ಥೆಗಳು ಬಿಡ್‌ ಸಲ್ಲಿಸಿದೆ. ಡಿಪಿಆರ್ ತಯಾರಿಸಲು 540 ದಿನಗಳನ್ನು ನೀಡಲಾಗುತ್ತಿದ್ದು, ರಸ್ತೆ ನಿರ್ಮಾಣವು 2028 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

Advertisement
Advertisement
Advertisement

ಮಂಗಳೂರು-ಬೆಂಗಳೂರು ರಸ್ತೆಯು 335 ಕಿ.ಮೀ ಇರಬಹುದು, ನಾಲ್ಕು ಅಥವಾ ಆರು ಲೇನ್‌ಗಳನ್ನು ಹೊಂದಿರಬಹುದು. ಹಾಸನದ ಮೂಲಕ ರಸ್ತೆ ಹಾದುಹೋಗುತ್ತದೆ. ಪಶ್ಚಿಮ ಘಟ್ಟಗಳ ಹಲವು ಕಡೆ ಬೈಪಾಸ್‌ ರಸ್ತೆ ಹೊಂದಿರುತ್ತದೆ. ಎಕ್ಸ್‌ಪ್ರೆಸ್‌ವೇ ಜಾರಿಯಾದರೆ,  ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣದ ಸಮಯವು ಇಳಿಕೆಯಾಗಲಿದೆ.

Advertisement

ಡಿಪಿಆರ್ ಸಿದ್ಧಪಡಿಸಿದ ಬಳಿಕವಷ್ಟೇ ಮುಂದಿನ ಎಲ್ಲಾ ಅಂಶಗಳು ತಿಳಿಯಲಿದೆ. ಈ ಕಾರಿಡಾರ್‌ ಯೋಜನೆಗೆ ಶಿರಾಡಿ ಘಾಟ್ ಪ್ರದೇಶವು ಮಾತ್ರಾ ಸಮಸ್ಯೆಯಾಗಲಿದೆ.ಅಲ್ಲಿ ಫ್ಲೈಓವರ್‌ಗಳು ಮತ್ತು ಕೆಲವು ಕಡೆ ಸುರಂಗಗಳನ್ನು ನಿರ್ಮಿಸುವ ಮೂಲಕ ಇನ್ನೂ ಎರಡು ಲೇನ್‌ಗಳನ್ನು ಸೇರಿಸಲು ಎನ್‌ಎಚ್‌ಎಐ ಯೋಜಿಸಿದೆ. ಯಾವುದೇ ಕಾರಣಕ್ಕೂ ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ರಸ್ತೆ ಕಾಮಗಾರಿ ನಡೆಸುವ ಬಗ್ಗೆಯೂ ಚಿಂತನೆ ನಡೆದಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹತ್ತಿ ಬೆಳೆಗೆ ಬೆಂಬಲ ಬೆಲೆ | 14 ಕೇಂದ್ರಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ  | ಸಚಿವ ಶರಣಬಸಪ್ಪ ದರ್ಶನಾಪುರ
November 14, 2024
9:00 AM
by: The Rural Mirror ಸುದ್ದಿಜಾಲ
ಬೆಂಬಲ ಬೆಲೆ | ಮಂಡ್ಯ ಜಿಲ್ಲೆಯಲ್ಲಿ ಭತ್ತ, ರಾಗಿ ಖರೀದಿಗೆ ರೈತರ ನೋಂದಣಿ ಕೇಂದ್ರ
November 14, 2024
8:00 AM
by: The Rural Mirror ಸುದ್ದಿಜಾಲ
ಸರ್ಕಾರಿ ಪಾಠಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ | ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ
November 14, 2024
6:33 AM
by: The Rural Mirror ಸುದ್ದಿಜಾಲ
ಬಿಎಸ್‌ಎನ್‌ಎಲ್‌ ನಿಂದ ಭಾರತದ ಮೊದಲ “ಡೈರೆಕ್ಟ್-ಟು-ಡಿವೈಸ್” ಸೇವೆ |
November 14, 2024
6:17 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror