ಆರೋಗ್ಯ ಯೋಜನೆಗಳಿಗೆ ಪ್ರಧಾನಿ ಚಾಲನೆ | ಆಯುಷ್ಮಾನ್ ಭಾರತ್  ಜನಾರೋಗ್ಯ ಯೋಜನೆ ವಿಸ್ತರಣೆ

October 30, 2024
6:21 AM
ಆಯುಷ್ಮಾನ್ ಭಾರತ್  ಯೋಜನೆಯ ವ್ಯಾಪ್ತಿ ವಿಸ್ತರಿಸಲಾಗಿದ್ದು, 70 ವರ್ಷ ದಾಟಿದ ಎಲ್ಲರಿಗೂ  ಇದರಡಿ  ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ.  ಬಡ, ಮಧ್ಯಮ, ಶ್ರೀಮಂತ ಭೇದವಿಲ್ಲದೆ 70 ವರ್ಷ ಮೀರಿದ ಎಲ್ಲ ಹಿರಿಯ ನಾಗರಿಕರು ಸ್ವಾಭಿಮಾನ ಮತ್ತು ಆರೋಗ್ಯ ಪೂರ್ಣವಾಗಿ ಬದುಕು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು

ಧನ್ವಂತರಿ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ  ಸುಮಾರು 12,850 ಕೋಟಿ ರೂಪಾಯಿ ಮೌಲ್ಯದ ವಿವಿಧ ಆರೋಗ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಪ್ರಧಾನಿ ಅವರು, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್  ಜನಾರೋಗ್ಯ ಯೋಜನೆ ವಿಸ್ತರಣೆಗೂ ಚಾಲನೆ ನೀಡಿದರು.ದೇಶದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎರಡನೇ ಹಂತವನ್ನು ಉದ್ಘಾಟಿಸಿದರು. 

Advertisement

ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಧುನಿಕ ವಿಜ್ಞಾನ ಮತ್ತು  ಭಾರತದ  ಪ್ರಾಚೀನ ಜ್ಞಾನದ  ಸೂಕ್ತ ಸಮನ್ವಯದೊಂದಿಗೆ ಆರೋಗ್ಯ  ವಲಯದಲ್ಲಿ  ಮಹತ್ತರ ಬದಲಾವಣೆ ತರಲು ಸಕಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಭಾರತದ  ಯೋಗ , ಪಂಚಕರ್ಮ, ಧ್ಯಾನ ಮುಂತಾದ  ಪ್ರಾಚೀನ ಜ್ಞಾನಗಳತ್ತ ಇಂದು ಇಡೀ ಜಗತ್ತು ಆಕರ್ಷಿತವಾಗಿದ್ದು,  ರಾಷ್ಟ್ರ  ವೈದ್ಯಕೀಯ ಪ್ರವಾಸದ  ತಾಣವಾಗಿ ಹೊರಹೊಮ್ಮಿದೆ.  ಭಾರತ ಅಲ್ಲದೆ, ಇತರ ದೇಶಗಳಲ್ಲೂ ಆಯುಷ್  ತಜ್ಞರಿಗೆ ಬೇಡಿಕೆ ಹೆಚ್ಚುತ್ತಿದೆ.  ಇದರಿಂದ  ದೇಶದ ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿರುವ ಜೊತೆಗೆ ಮಾನವಿಕ ಸೇವೆ ಮಾಡಲು ಅವಕಾಶ ದೊರೆಕಿದೆ ಎಂದು ತಿಳಿಸಿದರು.

ಪ್ರಸ್ತುತ ದೇಶದಲ್ಲಿ 7.5 ಲಕ್ಷಕ್ಕೂ ಹೆಚ್ಚು  ನೋಂದಾಯಿತ ಆಯುಷ್ ತಜ್ಞರಿದ್ದು, ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿ ಇದೆ ಎಂದರು.  21ನೇ ಶತಮಾನದಲ್ಲಿ ವೈದ್ಯಕೀಯ ವಿಜ್ಞಾನ ಸಾಕಷ್ಟು ಪ್ರಗತಿ ಕಂಡಿದ್ದು, ಇದರೊಂದಿಗೆ ಭಾರತದ ಪ್ರಾಚೀನ  ಜ್ಞಾನವನ್ನು ಸಮ್ಮಿಳಿತಗೊಳಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ  ಸಾಕ್ಷ್ಯಾಧಾರಿತ ಆಯುರ್ವೇದ  ಚಿಕಿತ್ಸೆ ಮತ್ತು ಸಂಶೋಧನೆಗೆ ಉತ್ತೇಜನ ನೀಡಲಾಗುತ್ತಿದ್ದು,  ಪ್ರಕೃತಿ ಪರೀಕ್ಷಣಾ ಅಭಿಯಾನ  ಆರಂಭಿಸಲಾಗುತ್ತಿದೆ. ಸರ್ಕಾರದ ಈ ಕ್ರಮಗಳು ಆರೋಗ್ಯ ವಲಯದಲ್ಲಿ  ಇಡೀ ಜಗತ್ತಿಗೆ  ಹೊಸ ದೃಷ್ಟಿಕೋನ ನೀಡಲಿದೆ ಎಂದು ಹೇಳಿದರು.

ಕಳೆದ 10 ವರ್ಷಗಳಲ್ಲಿ ವೈದ್ಯಕೀಯ ವಲಯದಲ್ಲಿ ಮಹತ್ತರ ಪ್ರಗತಿಯಾಗಿದ್ದು, ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವೈದ್ಯಕೀಯ ವ್ಯಾಸಂಗದ ಸೀಟುಗಳ ಸಂಖ್ಯೆ  ಗಣನೀಯ ಏರಿಕೆ ಕಂಡಿದೆ.  ಮುಂದಿನ 5 ವರ್ಷಗಳಲ್ಲಿ  75 ಸಾವಿರ ಹೆಚ್ಚುವರಿ ಸೀಟುಗಳ ಸೇರ್ಪಡೆಯಾಗಲಿವೆ. ಇದರಿಂದ  ಬಡಕುಟುಂಬದ ಪ್ರತಿಭಾನ್ವಿತರು ವೈದ್ಯರಾಗುವ ಕನಸು ನನಸಾಗಲಿದೆ ಎಂದು ತಿಳಿಸಿದರು. ದೇಶಾದ್ಯಂತ  14 ಸಾವಿರಕ್ಕೂ ಹೆಚ್ಚು  ಜನೌಷಧ ಕೇಂದ್ರಗಳಿದ್ದು,  ಇವುಗಳಲ್ಲಿ  ಮಾರುಕಟ್ಟೆ ಬೆಲೆಗಿಂತ ಶೇಕಡ 80ರಷ್ಟು ರಿಯಾಯಿತಿ ದರದಲ್ಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ.  ಇದರಿಂದ ಜನಸಾಮಾನ್ಯರಿಗೆ   ಒಟ್ಟು 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಉಳಿತಾಯವಾಗಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಗೆ  ಆದ್ಯತೆ ನೀಡಲಾಗಿದ್ದು,  ಜನರಿಗೆ  ಅತ್ಯಾಧುನಿಕ ಸೌಲಭ್ಯದೊಂದಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಇ- ಸಂಜೀವಿನಿ ಯೋಜನೆಯಡಿ  ಈವರೆಗೆ 30 ಕೋಟಿಗೂ ಹೆಚ್ಚು ಜನರು  ಆನ್ ಲೈನ್ ಮೂಲಕ ಉಚಿತ ಸಲಹೆ  ಪಡೆದಿದ್ದಾರೆ ಎಂದು ತಿಳಿಸಿದರು.

ಇಂದು ಆಯುಷ್ಮಾನ್ ಭಾರತ್  ಯೋಜನೆಯ ವ್ಯಾಪ್ತಿ ವಿಸ್ತರಿಸಲಾಗಿದ್ದು, 70 ವರ್ಷ ದಾಟಿದ ಎಲ್ಲರಿಗೂ  ಇದರಡಿ  ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ.  ಬಡ, ಮಧ್ಯಮ, ಶ್ರೀಮಂತ ಭೇದವಿಲ್ಲದೆ 70 ವರ್ಷ ಮೀರಿದ ಎಲ್ಲ ಹಿರಿಯ ನಾಗರಿಕರು ಸ್ವಾಭಿಮಾನ ಮತ್ತು ಆರೋಗ್ಯ ಪೂರ್ಣವಾಗಿ ಬದುಕು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಆರೋಗ್ಯ ಸಚಿವ ಜೆ.ಪಿ. ನಡ್ಡಾ,  ಕಳೆದ 10 ವರ್ಷಗಳಲ್ಲಿ ಆರೋಗ್ಯ ಸಚಿವಾಲಯದ ಚಿತ್ರಣ ಬದಲಾಗಿದ್ದು, ಹೊಸ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಎಂದರು. ಅಲೋಪತಿ, ಆಯುರ್ವೇದ  ಸೇರಿದಂತೆ  ಎಲ್ಲ  ಚಿಕಿತ್ಸಾ ವಿಧಾನಗಳಿಗೂ  ಉತ್ತೇಜನ ನೀಡಲಾಗುತ್ತಿದ್ದು, ಸಮಗ್ರ  ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಆರೋಗ್ಯ ವಲಯದಲ್ಲಿ  ದೇಶ ಆತ್ಮನಿರ್ಭರವಾಗುವ  ನಿಟ್ಟಿನಲ್ಲಿ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ
15 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ | 200 ಡೇ-ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
April 1, 2025
8:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group