ವಯನಾಡ್ ಭೂಕುಸಿತದ ಮೊದಲು ಮತ್ತು ನಂತರದ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.ಉಪಗ್ರಹ ಚಿತ್ರಗಳ ಪ್ರಕಾರ ಭೂಕುಸಿತದ ಪ್ರಭಾವ ಸುಮಾರು 8 ಕಿಮೀ ವ್ಯಾಪ್ತಿಯಲ್ಲಿ ಸಾಗಿದೆ, ಸುಮಾರು 86,000 ಚ.ಮೀ ಹಾನಿ ವ್ಯಾಪಿಸಿದೆ. ಹೀಗಾಗಿ ಇಷ್ಟೂ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.……….ಮುಂದೆ ಓದಿ……..
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಯನಾಡ್ ಭೂಕುಸಿದ ಉಪಗ್ರಹ ಚಿತ್ರವನ್ನು ಬಿಡುಗಡೆಗೊಳಿಸಿ ಹಾನಿಯ ವ್ಯಾಪ್ತಿಯನ್ನು ತಿಳಿಸಿದೆ.ಭಾರೀ ದೊಡ್ಡ ಪ್ರಮಾಣದ ಕುಸಿತ ಇಲ್ಲಿ ಸ್ಪಷ್ಟವಾಗಿದೆ. ಮಾತ್ರವಲ್ಲ ಮೋಡವು ಅತೀ ಕೆಳಭಾಗದಲ್ಲಿ ಇರುವುದು ಕೂಡಾ ಗೋಚರಿಸಿದೆ. ಭೂಕುಸಿತದಲ್ಲಿ 86,000 ಚದರ ಮೀಟರ್‌ಗಳಷ್ಟು ಭೂಮಿಯೇ ಸ್ಥಳಾಂತರವಾಗಿದೆ. ಭೂಕುಸಿತದ ಎರಡು ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.……….ಮುಂದೆ ಓದಿ……..
ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವು (NRSC) ಎರಡು ಭೂಕುಸಿತ ಪರಿಣಾಮದ ಬಗ್ಗೆ ಗಮನಿಸಲು ಈ ಚಿತ್ರವನ್ನು ಹತ್ತಿರದಿಂದ ಸೆರೆಹಿಡಿದಿದೆ. ಜುಲೈ 31 ರಂದು ತೆಗೆದ ಅತಿ ಹೆಚ್ಚು ರೆಸಲ್ಯೂಶನ್ ಉಪಗ್ರಹ ಚಿತ್ರಗಳು ಭೂಕುಸಿತದ ಚಿತ್ರಣವು ಸ್ಪಷ್ಟವಾಗಿದೆ. ಎನ್‌ಆರ್‌ಎಸ್‌ಸಿ ಪ್ರಕಾರ, ಚೂರಲ್‌ಮಲಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಈ ಹಾನಿಯಾಗಿದೆ. ಮೋಡವು ಬೆಟ್ಟದ ಹತ್ತಿರದಲ್ಲಿಯೇ ಇರುವುದು ಕಂಡುಬಂದಿದೆ. ಹೀಗಾಗಿ ಭಾರೀ ಮಳೆ ಒಮ್ಮೆಲೇ ಸುರಿದಿದೆ. ಇದು ಅವಘಡಕ್ಕೆ ಕಾರಣವಾಗಿದೆ.
ISRO releases images before and after Wayanad landslides | Satellite images show debris travelled 8km, damage extent 86,000-sqm; earlier landslide at the same spot seen |