ಬಿಸಿಲು ಹೆಚ್ಚುತ್ತಿದೆ. ವಾತಾವರಣದ ಉಷ್ಣತೆಯೂ ಹೆಚ್ಚಾಗಿದೆ. ಕರಾವಳಿ ಜಿಲ್ಲೆಯಲ್ಲೂ ಶನಿವಾರ-ಭಾನುವಾರ ವಾತಾವರಣದ ಉಷ್ಣತೆ 39 ಡಿಗ್ರಿ ತಲಪಿದೆ. ಮಧ್ಯಾಹ್ನದ ವೇಳೆಗೆ ಕೆಲವು ಕಡೆ ತಾಪಮಾನ ಮತ್ತಷ್ಟು ಏರಿಕೆಯಾಗಿದೆ. 15 ವರ್ಷಗಳಲ್ಲೇ ಎಪ್ರಿಲ್‌ನಲ್ಲಿ ಬೆಂಗಳೂರು ನಗರವು 3 ನೇ ಅತೀ ಹೆಚ್ಚು ತಾಪಮಾನ ದಾಖಲಿಸಿದೆ. ಬೆಂಗಳೂರು ತನ್ನ ಗರಿಷ್ಠ ತಾಪಮಾನ 37.2 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿತ್ತು. ಇದು ಎಂಟು ವರ್ಷಗಳಲ್ಲಿ ಗರಿಷ್ಠವಾಗಿದೆ. ಶನಿವಾರ ಬೆಂಗಳೂರಿನಲ್ಲಿ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕಳೆದ ಒಂದೆರಡು ವರ್ಷಗಳಲ್ಲಿ ತಾಪಮಾನ ಏರಿಕೆ ಕಂಡುಬರುತ್ತಿದೆ. ಅತೀ ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ 35 ಡಿಗ್ರಿ ಸೆಲ್ಸಿಯಸ್ ದಾಖಲಿಸಿದ ತಕ್ಷಣವೇ ಮಳೆಯಾಗುತ್ತದೆ ಎನ್ನುವ ಮಾತುಗಳು ಇತ್ತು. ಆದರೆ ಈಗ ತಾಮಾನ ಏರಿಕೆಯಾಗುತ್ತಿದ್ದರೂ ಮಳೆಯಾಗುತ್ತಿಲ್ಲ. ಕರಾವಳಿ ಜಿಲ್ಲೆಯಲ್ಲಿ ಶನಿವಾರದಂದು 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ ಭಾನುವಾರ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ತಾಪಮಾನ ಏರಿಕೆಯಾಗುತ್ತಲೇ ಇದೆ. ಮಳೆ ನಿರೀಕ್ಷೆ ಮಾತ್ರಾ ಇದೆಯಷ್ಟೆ.
ಇದೇ ವೇಳೆ ಬೆಂಗಳೂರು ನಗರವು ಪ್ರತಿದಿನ ದಾಖಲೆಗಳನ್ನು ಮುರಿಯುತ್ತಿದೆ. ನಗರದ ನಿವಾಸಿಗಳು ತೀವ್ರವಾದ ಶಾಖದಲ್ಲಿ ತತ್ತರಿಸುತ್ತಿದ್ದಾರೆ. ಇತ್ತೀಚೆಗೆ, ಭಾರತದ ಸಿಲಿಕಾನ್ ಸಿಟಿ ತನ್ನ ಗರಿಷ್ಠ ತಾಪಮಾನ 37.2 ಡಿಗ್ರಿ ಸೆಲ್ಸಿಯಸ್ ದಾಖಲಿಸಿದೆ, ಇದು 2016 ರಲ್ಲಿ ದಾಖಲಾದ ತಾಪಮಾನಕ್ಕಿಂತಲೂ ಅಧಿಕವಾಗಿದೆ. ಶನಿವಾರ, ಬೆಂಗಳೂರು 37.6 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ, ಇದು ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇದು ಮೂರನೇ ಅತಿ ಹೆಚ್ಚು ಗರಿಷ್ಠ ತಾಪಮಾನವಾಗಿದೆ. ಕಳೆದ 15 ವರ್ಷಗಳ ಏಪ್ರಿಲ್‌ನಲ್ಲಿ. ಅಷ್ಟೇ ಅಲ್ಲ, ಕಳೆದ ಎಂಟು ವರ್ಷಗಳಲ್ಲೇ ಅತಿ ಹೆಚ್ಚು ತಾಪಮಾನ ಕೂಡ ದಾಖಲಾಗಿದೆ ಎಂದು ವರದಿಯಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರು ನಗರವು ಪ್ರಸ್ತುತ ಹೀಟ್‌ವೇವ್ ಅಲರ್ಟ್‌ನಲ್ಲಿಲ್ಲ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅನ್ನು ದಾಟುವ ಸಾಧ್ಯತೆ ಇದೆ. ಬೆಂಗಳೂರಿನ ಹವಾಮಾನ ಮುನ್ಸೂಚನೆಯು ಮುಂಬರುವ ದಿನಗಳಲ್ಲಿ 36 ಡಿಗ್ರಿಯವರೆಗೆ ಇರಬಹುದು.ಕರ್ನಾಟಕದಲ್ಲಿ ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಹೀಟ್ ವೇವ್ ಎಚ್ಚರಿಕೆಯನ್ನು ನೀಡಲಾಗಿದೆ.
ಮಲೆನಾಡು-ಕರಾವಳಿ ಭಾಗದಲ್ಲೂ ಈಚೆಗೆ ತಾಪಮಾನ ಏರಿಕೆಯಾಗುತ್ತಿದೆ. ಹೀಗಾಗಿ ಹಲವು ಕೃಷಿ ಸಮಸ್ಯೆಗೂ ಕಾರಣವಾಗುತ್ತಿದೆ. ತಾಪಮಾನ ಏರಿಕೆ-ಬರಗಾಲವು ಕೃಷಿ ಕ್ಷೇತ್ರ ಹಾಗೂ ಗ್ರಾಮೀಣ ಭಾಗದಲ್ಲಿ ಸಂಕಷ್ಟಗಳನ್ನು ತಂದೊಡ್ಡಿದೆ. ಬೆಳೆ ನಾಶವಾಗುತ್ತಿದೆ. ಫಸಲಿನ ಮೇಲೆ ಪರಿಣಾಮ ಬೀರುತ್ತಿದೆ.