Advertisement
MIRROR FOCUS

ಬಿಸಿಲಿನ ಬೇಗೆ | ಬೆಂಗಳೂರಿನಲ್ಲಿ ಗರಿಷ್ಟ ತಾಪಮಾನ | ಕರಾವಳಿಯಲ್ಲೂ ತಲಪಿತು 39 ಡಿಗ್ರಿ…! | ಮಳೆಯಾಗಿಲ್ಲ ಇನ್ನೂ….|

Share

ಬಿಸಿಲು  ಹೆಚ್ಚುತ್ತಿದೆ. ವಾತಾವರಣದ ಉಷ್ಣತೆಯೂ ಹೆಚ್ಚಾಗಿದೆ. ಕರಾವಳಿ ಜಿಲ್ಲೆಯಲ್ಲೂ ಶನಿವಾರ-ಭಾನುವಾರ ವಾತಾವರಣದ ಉಷ್ಣತೆ 39 ಡಿಗ್ರಿ ತಲಪಿದೆ. ಮಧ್ಯಾಹ್ನದ ವೇಳೆಗೆ ಕೆಲವು ಕಡೆ  ತಾಪಮಾನ ಮತ್ತಷ್ಟು ಏರಿಕೆಯಾಗಿದೆ. 15 ವರ್ಷಗಳಲ್ಲೇ ಎಪ್ರಿಲ್‌ನಲ್ಲಿ ಬೆಂಗಳೂರು ನಗರವು 3 ನೇ ಅತೀ ಹೆಚ್ಚು ತಾಪಮಾನ ದಾಖಲಿಸಿದೆ. ಬೆಂಗಳೂರು ತನ್ನ ಗರಿಷ್ಠ ತಾಪಮಾನ 37.2 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿತ್ತು. ಇದು ಎಂಟು ವರ್ಷಗಳಲ್ಲಿ ಗರಿಷ್ಠವಾಗಿದೆ. ಶನಿವಾರ ಬೆಂಗಳೂರಿನಲ್ಲಿ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Advertisement
Advertisement
Advertisement

ಕಳೆದ ಒಂದೆರಡು ವರ್ಷಗಳಲ್ಲಿ ತಾಪಮಾನ ಏರಿಕೆ ಕಂಡುಬರುತ್ತಿದೆ. ಅತೀ ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ 35 ಡಿಗ್ರಿ ಸೆಲ್ಸಿಯಸ್ ದಾಖಲಿಸಿದ ತಕ್ಷಣವೇ ಮಳೆಯಾಗುತ್ತದೆ ಎನ್ನುವ ಮಾತುಗಳು ಇತ್ತು. ಆದರೆ ಈಗ ತಾಮಾನ ಏರಿಕೆಯಾಗುತ್ತಿದ್ದರೂ ಮಳೆಯಾಗುತ್ತಿಲ್ಲ. ಕರಾವಳಿ ಜಿಲ್ಲೆಯಲ್ಲಿ ಶನಿವಾರದಂದು 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ ಭಾನುವಾರ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ತಾಪಮಾನ ಏರಿಕೆಯಾಗುತ್ತಲೇ ಇದೆ. ಮಳೆ ನಿರೀಕ್ಷೆ ಮಾತ್ರಾ ಇದೆಯಷ್ಟೆ.

Advertisement

ಇದೇ ವೇಳೆ ಬೆಂಗಳೂರು ನಗರವು ಪ್ರತಿದಿನ  ದಾಖಲೆಗಳನ್ನು ಮುರಿಯುತ್ತಿದೆ. ನಗರದ ನಿವಾಸಿಗಳು ತೀವ್ರವಾದ ಶಾಖದಲ್ಲಿ ತತ್ತರಿಸುತ್ತಿದ್ದಾರೆ. ಇತ್ತೀಚೆಗೆ, ಭಾರತದ ಸಿಲಿಕಾನ್ ಸಿಟಿ ತನ್ನ ಗರಿಷ್ಠ ತಾಪಮಾನ 37.2 ಡಿಗ್ರಿ ಸೆಲ್ಸಿಯಸ್  ದಾಖಲಿಸಿದೆ, ಇದು 2016 ರಲ್ಲಿ ದಾಖಲಾದ ತಾಪಮಾನಕ್ಕಿಂತಲೂ ಅಧಿಕವಾಗಿದೆ. ಶನಿವಾರ, ಬೆಂಗಳೂರು 37.6 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ, ಇದು ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇದು ಮೂರನೇ ಅತಿ ಹೆಚ್ಚು ಗರಿಷ್ಠ ತಾಪಮಾನವಾಗಿದೆ. ಕಳೆದ 15 ವರ್ಷಗಳ ಏಪ್ರಿಲ್‌ನಲ್ಲಿ. ಅಷ್ಟೇ ಅಲ್ಲ, ಕಳೆದ ಎಂಟು ವರ್ಷಗಳಲ್ಲೇ ಅತಿ ಹೆಚ್ಚು ತಾಪಮಾನ ಕೂಡ ದಾಖಲಾಗಿದೆ ಎಂದು ವರದಿಯಾಗಿದೆ.

ಹವಾಮಾನ ಇಲಾಖೆಯ  ಪ್ರಕಾರ, ಬೆಂಗಳೂರು ನಗರವು ಪ್ರಸ್ತುತ ಹೀಟ್‌ವೇವ್ ಅಲರ್ಟ್‌ನಲ್ಲಿಲ್ಲ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅನ್ನು ದಾಟುವ ಸಾಧ್ಯತೆ ಇದೆ. ಬೆಂಗಳೂರಿನ ಹವಾಮಾನ ಮುನ್ಸೂಚನೆಯು ಮುಂಬರುವ ದಿನಗಳಲ್ಲಿ 36 ಡಿಗ್ರಿಯವರೆಗೆ ಇರಬಹುದು.ಕರ್ನಾಟಕದಲ್ಲಿ ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಹೀಟ್‌ ವೇವ್‌ ಎಚ್ಚರಿಕೆಯನ್ನು ನೀಡಲಾಗಿದೆ.

Advertisement

ಮಲೆನಾಡು-ಕರಾವಳಿ ಭಾಗದಲ್ಲೂ ಈಚೆಗೆ ತಾಪಮಾನ ಏರಿಕೆಯಾಗುತ್ತಿದೆ. ಹೀಗಾಗಿ ಹಲವು ಕೃಷಿ ಸಮಸ್ಯೆಗೂ ಕಾರಣವಾಗುತ್ತಿದೆ.  ತಾಪಮಾನ ಏರಿಕೆ-ಬರಗಾಲವು ಕೃಷಿ ಕ್ಷೇತ್ರ ಹಾಗೂ ಗ್ರಾಮೀಣ ಭಾಗದಲ್ಲಿ ಸಂಕಷ್ಟಗಳನ್ನು ತಂದೊಡ್ಡಿದೆ. ಬೆಳೆ ನಾಶವಾಗುತ್ತಿದೆ. ಫಸಲಿನ ಮೇಲೆ ಪರಿಣಾಮ ಬೀರುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

21 hours ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

1 day ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

3 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

3 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

4 days ago