ಬಿಸಿಲೋ.. ಬಿಸಿಲು…ಮಳೆ ಬರಲಿ.. ಮಳೆ…ಎನ್ನುತ್ತಿರುವಾಗಲೇ ಕರಾವಳಿ ಜಿಲ್ಲೆಯಲ್ಲೂ ಸತತವಾಗಿ ತಾಪಮಾನ 40 ಡಿಗ್ರಿ..! |

April 10, 2024
5:16 PM
ಕರಾವಳಿ ಜಿಲ್ಲೆಯಲ್ಲೂ ತಾಪಮಾನ ಏರಿಕೆಯಾಗಿದೆ. ಬಹುತೇಕ ತಾಲೂಕುಗಳಲ್ಲಿ ಬುಧವಾರ ಮಧ್ಯಾಹ್ನದ ವೇಳೆ 40 ಡಿಗ್ರಿ ದಾಖಲಾಗಿದೆ.

ಅಯ್ಯೋ.. ವಿಪರೀತ ಬಿಸಿಲು ಒಮ್ಮೆ ಮಳೆಯಾಗಲಿ…. ಯಾವಾಗ ಬರುತ್ತಂತೆ ಮಳೆ… ಹೀಗೆಲ್ಲಾ ಮಾತನಾಡುತ್ತಿರಬೇಕಾದರೆ ಕಳೆದ 3 ದಿನಗಳಿಂದ ಸತತವಾಗಿ ಕರಾವಳಿ ಜಿಲ್ಲೆಯಲ್ಲೂ 40 ಡಿಗ್ರಿ ತಾಪಮಾನ ತಲಪಿದೆ.  ದ ಕ ಜಿಲ್ಲೆಯಲ್ಲಿ ಬುಧವಾರ ಬಹುತೇಕ ತಾಲೂಕುಗಳಲ್ಲಿ ತಾಪಮಾನ 40 ಡಿಗ್ರಿ ಕಂಡುಬಂದಿತ್ತು.

ಕಳೆದ ಒಂದು ವಾರದಿಂದ ಮಳೆಯ ನಿರೀಕ್ಷೆ ಇತ್ತು. ಹವಾಮಾನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆ ಅದರಲ್ಲೂ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಎಂದಿನಂತೆ ಮಳೆಯ ನಿರೀಕ್ಷೆ ಇತ್ತು. ಆದರೆ ಎರಡು ದಿನದ ಹವಾಮಾನದ ಬದಲಾವಣೆಯ ಕಾರಣದಿಂದ ಮಳೆ ದೂರವಾಯ್ತು. ಈಗ ಕರಾವಳಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ತಾಪಮಾನ 40 ಡಿಗ್ರಿ ದಾಖಲಾಗಿದೆ. ವಿಶೇಷ ಎಂದರೆ ಮಂಗಳೂರು ಸೇರಿದಂತೆ ಸಮುದ್ರ ತೀರದ ಪ್ರದೇಶಗಳಲ್ಲಿ ತಾಪಮಾನ ಕಡಿಮೆ ಇತ್ತು. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ತಾಪಮಾನ ವಿಪರೀತ ಏರಿಕೆಯಾಗಿದೆ. ಕಳೆದ ಎರಡು ವರ್ಷಗಳ ಹಿಂದಿನವರೆಗೂ ತಾಪಮಾನ 35-36 ಡಿಗ್ರಿ ದಾಖಲಾದರೆ ಮಳೆ ಖಚಿತವಾಗಿತ್ತು. ಅದಕ್ಕೂ ಹಿಂದೆ 33-35 ಡಿಗ್ರಿ ತಾಪಮಾನ ದಾಖಲಾದರೆ ಆ ದಿನ ಮಳೆ ನಿಶ್ಚಿತವಾಗಿತ್ತು. ಈಗ ಬದಲಾದ ಹವಾಮಾನದ ಕಾರಣದಿಂದ ವಿಪರೀತ ತಾಪಮಾನ ದಾಖಲಾಗುತ್ತಿದೆ. ಬೆಳಗ್ಗೆ 11 ಗಂಟೆಯ ವೇಳೆಗೇ 36 ಡಿಗ್ರಿ ತಾಪಮಾನ ದಾಖಲಾಗಿ ನಂತರ ಏರಿಕೆಯಾಗುತ್ತಾ ಸಾಗುತ್ತದೆ. ಇದೇ ವೇಳೆ ವಾತಾವರಣದ ಶುಷ್ಕತೆ ಕೂಡಾ ಕಡಿಮೆಯಾಗುತ್ತಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!
April 3, 2026
11:59 AM
by: ದ ರೂರಲ್ ಮಿರರ್.ಕಾಂ
ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!
April 3, 2026
8:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror